ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಡ್ತರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಭೆ ಜರುಗಿತು. ನೂತನವಾಗಿ ರಚನೆಗೊಂಡ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸುಧಾಕರ ದೇವಾಡಿಗ ಯಡ್ತರೆ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ವಿಕ್ರಮ ಪೂಜಾರಿ ಗರ್ಜಿನಹಿತ್ಲು, ಕಾರ್ಯದರ್ಶಿಯಾಗಿ ನಾರಾಯಣ ಕೆ. ಬಿಲ್ಲವ ದುರ್ಮಿ, ಜೊತೆ ಕಾರ್ಯದರ್ಶಿಯಾಗಿ ಚೈತ್ರಾ ಯಡ್ತರೆ ಹಾಗೂ ಅಶ್ವಿನಿ ಯಡ್ತರೆ ಆಯ್ಕೆಯಾಗಿದ್ದಾರೆ.
ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರರಾಗಿ ವೆಂಕಟಾಚಲ ಮಯ್ಯ, ಜ್ಯೋತಿ ಶೆಟ್ಟಿ ಯಡ್ತರೆ, ಎಸ್. ರಾಜು ಪೂಜಾರಿ, ಶಂಕರ ಪೂಜಾರಿ ತಗ್ಗರ್ಸೆ, ಡಾ. ಮಿಥುನ್ ಶೆಟ್ಟಿ ಅವರನ್ನು ಸೂಚಿಸಿ ಆಯ್ಕೆ ಮಾಡಲಾಗಿದೆ.