ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾಗೂರು-ಕೊಡೇರಿ ರಸ್ತೆಯ ಅಂಚಿನಲ್ಲಿರುವ ಕಟ್ಟಡಕ್ಕೆ ಹೆದ್ದಾರಿ ಬದಿಯಲ್ಲಿದ್ದ ಬಾರ್ ಸ್ಥಳಾಂತರಗೊಂಡಿರುವುದನ್ನು ವಿರೋಧಿಸಿ ನಡೆಯುತ್ತಿರುವ ಸಾರ್ವಜನಿಕರ ಪ್ರತಿಭಟನೆ ಮುಂದುವರಿಯಿತು. ನೂರಾರು ಪುರುಷರು ಹಾಗೂ ಮಹಿಳೆಯರು ಸೇರಿ ಕಟ್ಟಡದ ಎದುರು ಬಾರ್‌ಗೆ ಹಾಗೂ ಅಬಕಾರಿ ಅಧಿಕಾರಿಗಳಿಗೆ ಧಿಕ್ಕಾರ್ ಕೂಗುತ್ತಾ ಪ್ರತಿಭಟನೆ ಮಾಡಿದರು.
ಬುಧವಾರ ಸ್ಥಳೀಯ ಗ್ರಾಪಂ ಅನುಮತಿ ನೀಡಿಲ್ಲ ಎಂಬ ಪತ್ರದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ್ದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ಬಾರ್‌ಗೆ ತಮ್ಮ ವಿರೋಧದ ಬಗ್ಗೆ ಸಕಾರಣವನ್ನು ವಿವರಿಸಿದ್ದರು. ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಅಬಕಾರಿ ಅಧಿಕಾರಿಗಳನ್ನು ಹಾಗೂ ಪೋಲಿಸರನ್ನು ಸಂಪರ್ಕಿಸಿ ಜನರ ವಿರೋಧದ ಕಾರಣಗಳ ಸತ್ಯಾಸತ್ಯತೆ ಪರಿಶೀಲಿಸುವ ತನಕ ಬಾರ್ ಮುಚ್ಚಬೇಕೆಂದು ನಿರ್ದೇಶಿಸಿದ್ದು, ಅದರಂತೆ ಬಾರ್ ಕಟ್ಟಡಕ್ಕೆ ಬೀಗ ಜಡಿಯಲಾಯಿತು.
ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆದುಕೊಂಡ ಜನರು ಗುರುವಾರ ಬೆಳಿಗ್ಗೆ ಬಾರ್ ಮುಂದೆ ಮತ್ತೆ ಜಮಾಯಿಸಿದರು. ನಾಗೂರು ಪೇಟೆಯಲ್ಲಿಯೂ ಕೂಡಾ ವ್ಯಾಪರಸ್ಥರು ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಜಿಲ್ಲಾಧಿಕಾರಿ ನೀಡಿದ್ದ ಭರವಸೆಗೆ ಪೂರಕವಾಗಿ ಕುಂದಾಪುರ ಉಪವಿಭಾಧಿಕಾರಿ ಶಿಲ್ಪಾನಾಗ್, ಅಬಕಾರಿ ಡಿವೈಎಸ್‌ಪಿ ವಿನೋದ್ ಕುಮಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ. ನಾಗಭೂಷಣ್ ಉಡುಪ, ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.
ಜನರ ಪರವಾಗಿ ಗ್ರಾಪಂ ಸದಸ್ಯ ಈಶ್ವರ್ ದೇವಾಡಿಗ, ಅಧಿಕಾರಿಗಳಿಗೆ ವಿರೋಧಕ್ಕೆ ಕಾರಣವಾದ ಅಂಶಗಳನ್ನು ವಿವರಿಸಿದರು. ಮುಖ್ಯವಾಗಿ ಬಾರ್ ಎದುರಿಗೆ ಕೇರಿಸ್ಥಳ ದೈವಸ್ಥಾನವಿದೆ. ಹತ್ತಿರದಲ್ಲಿ ಮಸೀದಿ ಇದೆ. ಸುತ್ತಲೂ ಜನನಿವಾಸವಿದೆ. ಈ ಮಾರ್ಗದಲ್ಲಿ ಅಂಗನವಾಡಿ ಮಕ್ಕಳು, ಮಹಿಳೆಯರು ಸಂಚರಿಸುತ್ತಾರೆ. ಬಾರ್‌ಗೆ ಬರುವ ವಾಹನಗಳು ರಸ್ತೆಯಲ್ಲಿ ನಿಂತು ಸಂಚಾರಿಗಳಿಗೆ ತೊಂದರೆಯಾಗುವುದಲ್ಲದೇ ಘರ್ಷಣೆಗೂ ಕಾರಣವಾಗಬಹುದು. ಈ ನಿಟ್ಟಿನಲ್ಲಿ ಗ್ರಾಪಂನಿಂದ ಉದ್ದಿಮೆ ಪರವಾನಿಗೆ ನೀಡಿಲ್ಲ ಎಂದರು.
ಬಾರ್ ಮಾಲೀಕರು ತಾವು ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ. ಅಲ್ಲದೇ ಇಲ್ಲಿ ಬಾರ್ ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿ ಕಿರಿಕಿರಿಯಾಗಲಿ ಆಗುವುದಿಲ್ಲ ಎಂದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ಶಿಲ್ಪಾನಾಗ್, ಜಿಲ್ಲಾಧಿಕಾರಿಗಳಿಗೆ ಇಲ್ಲಿನ ವಾಸ್ತವಾಂಶವನ್ನು ತಿಳಿಸಲಾಗುವುದು. ಅವರೇ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ. ಅವರು ತೀರ್ಮಾನ ಪ್ರಕಟಿಸುವ ತನಕ ಬಾರ್ ವ್ಯವಹಾರವನ್ನು ನಿರ್ಭಂದಿಸಲಾಗುವುದು ಎಂದರು. ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಬೈಂದೂರು ಪ್ರಭಾರ ಠಾಣಾಧಿಕಾರಿ ದೇವರಾಜ್ ಎಂ. ಮತ್ತು ಸಿಬ್ಬಂದಿಗಳು