ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಟೇಶ್ವರ: ವಕ್ವಾಡಿ ಶಾಲೆಯ ಪೂರ್ವ ಪ್ರಾಥಮಿಕ ಪುಟಾಣಿಗಳಿಗಾಗಿ ’ಶ್ರೀ ಕೃಷ್ಣ ಜನ್ಮಾಷ್ಟಮಿ’ಯನ್ನು ವಿಶೇಷವಾಗಿ ಆಯೋಜಿಸಲಾಗಿತ್ತು. ಪುಟಾಣಿ ಮಕ್ಕಳೆಲ್ಲರೂ ರಾಧಾಕೃಷ್ಣ ಉಡುಪು ಧರಿಸಿ ವಿಜೃಂಭಿಸುತ್ತಿದ್ದರು.
ಕೃಷ್ಣಂ ವಂದೇ ಜಗದ್ಗುರು ಎಂಬ ಧ್ಯೇಯ ವಾಕ್ಯದಡಿಯಲ್ಲಿ ಬಾಲ ಕೃಷ್ಣನ ತೊಟ್ಟಿಲು ತೂಗುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಗಿತು. ಅಷ್ಟಮಿಯ ವಿಶೇಷ ತಿಂಡಿಗಳೆಲ್ಲವನ್ನು ಜೋಡಿಸುವುದರ ಜೊತೆಗೆ ವಿವಿಧ ಭಂಗಿಯ ಕೃಷ್ಣನ ಚಿತ್ರಗಳನ್ನು ಜೋಡಿಸಲಾಗಿತ್ತು. ಬಾಲಕೃಷ್ಣನ ಹೆಜ್ಜೆ ಗುರುತು ಮತ್ತು ರಂಗೋಲಿಯ ಚಿತ್ತಾರಗಳನ್ನು ಬಿಡಿಸುವುದರ ಜೊತೆಗೆ ಈ ದಿನದ ವಿಶೇಷವಾಗಿ ಪುಟಾಣಿಗಳು ಮುರಾರಿಯ ಪ್ರಿಯವಾದ ಗೋವುಗಳಿಗೆ ಆರತಿ ಬೆಳಗಿ, ತಿಲಕವಿರಿಸಿ, ಅಕ್ಕಿ ಮತ್ತು ಹಣ್ಣುಗಳನ್ನು ನೀಡಿ ಗೋಪೂಜೆಯನ್ನು ಮಾಡಿದರು. ನಂತರ ಮೊಸರುಕುಡಿಕೆ, ಕೊಳಲು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದರು. ಕೊನೆಯಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮವಾಗಿ ಕೆಲವು ಮಾಧವಪ್ರಿಯ ಹಾಡುಗಳನ್ನು ಶಿಕ್ಷಕಿಯರು ಪುಟಾಣಿಗಳ ಜೊತೆ ಸೇರಿ ಹಾಡಿದರು. ಕೆಲವು ಪುಟಾಣಿಗಳು ರಾಧಾ ಕೃಷ್ಣ ಹಾಡುಗಳಿಗೆ ನೃತ್ಯಗಳನ್ನು ಮಾಡಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯನಿರ್ವಾಹಕಿ ಅನುಪಮ.ಎಸ್.ಶೆಟ್ಟಿ ಪುಟಾಣಿಗಳಿಗೆ ಹಬ್ಬದ ಶುಭಾಶಯ ತಿಳಿಸಿದರು. ಜೊತೆಗೆ ಶಾಲಾ ಪ್ರಾಂಶುಪಾಲರಾದ ಸಾಯಿಜು.ಕೆ.ಆರ್.ನಾಯರ್, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.