ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಬೈಂದೂರಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ವಿದ್ವಾನ್ ಗಣಪತಿ ಭಟ್ ಯಲ್ಲಾಪುರ ಇವರ ಗಾನಕ್ಕೆ ವಿದ್ವಾನ್ ಶ್ರೀಪತಿ ಉಪಾಧ್ಯಾಯ ಕುಂಬಾಶಿಯವರು ಆಖ್ಯಾನ ನೀಡುವುದರ ಮೂಲಕ ಹರಿಭಕ್ತಿಸಾರದ ಶ್ರೀ ನರಸಿಂಹಾವತಾರದ ಮಹಾತ್ಮೆಯನ್ನು ನೂರಾರು ಮಂದಿ ಭಕ್ತರಿಗೆ ಉಣಬಡಿಸಿದರು.
ಇವರಿಗೆ ಹಿಮ್ಮೇಳದಲ್ಲಿ ಶ್ರೀ ಮಾಧವ ಆಚಾರ್ಯ ಉಡುಪಿಯವರು ತಬಲಾ ಹಾಗೂ ಶ್ರೀ ವಿನಾಯಕ ಪ್ರಭು ಉಪ್ಪುಂದ ಹಾರ್ಮೋನಿಯಮ್ ನುಡಿಸಿ ಸಹಕರಿಸಿದರು. ಈ ಕಾರ್ಯಕ್ರಮದ ಸಂಪೂರ್ಣ ಪ್ರಾಯೋಜಕರಾದ ಬಿ. ರಾಮಕೃಷ್ಣ ಶೇರೆಗಾರ ಮತ್ತು ಶಾರದಾ ದಂಪತಿಗಳು ರಾಮಕ್ಷತ್ರಿಯ ಸಮಾಜ ಬೈಂದೂರಿನ ಅಧ್ಯಕ್ಷರಾದ ಬಿ. ಗೋಪಾಲ ನಾಯಕರೊಂದಿಗೆ ಕಲಾವಿದರಿಗೆ ಶಾಲು ಹೊದಿಸಿ ಅಭಿನಂದಿಸಿದರು. ವಿ. ಎಚ್ ನಾಯಕ್ ಸ್ವಾಗತಿಸಿ, ಆನಂದ ಮದ್ದೋಡಿ ಧನ್ಯವಾದಗೈದರು. ಕೇಶವ ನಾಯಕ್ ನಿರೂಪಿಸಿದರು.