ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಯಡ್ತರೆ ಗ್ರಾಪಂ ವ್ಯಾಪ್ತಿಯ ಮುಲ್ಲಿಬಾರು (ಹೊಸೂರು) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎಸ್. ಮ್ಯಾಥ್ಯೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಮಾಸ್ತಯ್ಯ ಪೂಜಾರಿ ಹೊಸೂರು, ಉಪಾಧ್ಯಕ್ಷರಾಗಿ ದುರ್ಗಯ್ಯ ಪೂಜಾರಿ ಕಿಸ್ಮತಿ, ಕಾರ್ಯದರ್ಶಿಯಾಗಿ ತಿಮ್ಮ ಮರಾಠಿ ಹೊಸೂರು, ಜೊತೆ ಕಾರ್ಯದರ್ಶಿಯಾಗಿ ಮಹಾದೇವ ಮರಾಠಿ, ಸುಜೇಶ್, ನಾಗಪ್ಪ ಮರಾಠಿ ಹೊಸೂರು, ಸಂಘಟನಾ ಕಾರ್ಯದರ್ಶಿಯಾಗಿ ದೇವಾನಂದ ಹೊಸೂರು, ಗಣೇಶ್ ಆಚಾರಿ ತೂದಳ್ಳಿ ಹಾಗೂ ಖಜಾಂಚಿಯಾಗಿ ಮಹೇಶ್ ಭಂಡಾರಿ ತೂದಳ್ಳಿ ಆಯ್ಕೆಯಾಗಿದ್ದಾರೆ.