ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀರಾಮ ಕೆಡಿಟ್ ಕೋ- ಅಪರೇಟಿವ್ ಸೊಸೈಟಿ ಲಿ ಬೈಂದೂರು ಶಾಖೆ ಸ್ಥಳಾಂತರ ಮತ್ತು ಸ್ವಂತ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಿತು.
ಬೈಂದೂರು ಮಾಜಿ ಶಾಸಕರ ಮತ್ತು ವಿಧಾನಸಭಾ ಕ್ಷೇತ್ರದ ಸದಸ್ಯರಾದ ಕೆ.ಲಕ್ಷ್ಮೀನಾರಾಯಣ ಉದ್ಘಾಟನೆ ಮಾಡಿದರು. ಭದ್ರತಾ ಕೊಠಡಿ ಉದ್ಘಾಟನೆಯನ್ನು ರಕ್ಷಾ ಚಾರಿಟೇಬಲ್ ಟ್ರಸ್ಟ್ ಕುಂದಾಪುರ ಅಧ್ಯಕ್ಷರು ಚಂದ್ರಶೇಖರ ಉದ್ಘಾಟನೆ ಮಾಡಿದರು. ಕೆ.ನಾಗರಾಜ್ ರಾವ್ ಅಧ್ಯಕ್ಷರು ಶ್ರೀರಾಮ ಕೆಡಿಟ್ ಕೋ- ಅಪರೇಟಿವ್ ಸೊಸೈಟಿ ಲಿ ಕುಂದಾಪುರ ಇವರು ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ಸುರೇಶ್ ಬಟವಾಡಿ ಜಿ.ಪಂ ಸದಸ್ಯ, ಸಹಕಾರ ಸಂಘಗಳ ಉಪ ನಿಬಂಧಕ ಪ್ರವೀಣ ಬಿ ನಾಯಕ್, ಶ್ರೀ ರಾಮಕ್ಷತ್ರಿಯ ಸಂಘ ಬೈಂದೂರು ಅಧ್ಯಕ್ಷ ಗೋಪಾಲ ನಾಯ್ಕ್, ಆಡಳಿತ ಮಂಡಳಿಯ ಸದಸ್ಯರಾದ ಸತೀಶ್ ನರಸಿಂಹ ಶೇರುಗಾರ್, ಎನ್.ವಿ ದಿನೇಶ್, ಅಶೋಕ್ ಬೆಟ್ಟಿನ್, ಕೆ ರಾಮನಾಥ್ ನಾಯ್ಕ್, ಶ್ರೀಧರ ಪಿ.ಎಸ್., ಮಂಜುನಾಥ ಮದ್ದೋಡಿ, ಗೋಪಾಲಕೃಷ್ಣ ಕಲ್ಮಕ್ಕಿ, ವಿಶ್ವನಾಥ ಹವಲ್ದಾರ್, ಕೆ.ಚಂದ್ರಶೇಖರ ಕೊತ್ವಲ್, ರಾಜೇಶ್ ರಾವ್, ಬಿ.ರಾಧಾಕೃಷ್ಣ ನಾಯಕ್, ಲಕ್ಷ್ಮೀ ಡಿ.ಕೆ. ಪಿ.ದೇವಕಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಳೇಯ ಕಟ್ಟಡದ ಮಾಲೀಕರಾದ ಟಿ.ರಾಮ ನಾಯ್ಕ ಹಾಗೂ ಹೊಸ ಕಟ್ಟಡದ ಮಾಲೀಕರಾದ ಬಾಲಯ್ಯ ಶೇರುಗಾರ್ ಇವರಿಗೆ ಗೌರವಿಸಲಾಯಿತು. ಶ್ರೀರಾಮ ಕ್ರೆ. ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ. ನಾಗರಾಜ್ ಸ್ವಾಗತಿಸಿ/ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ನಾಗರಾಜ್ ನಾಯ್ಕ ವರದಿ ವಾಚಿಸಿದರು. ಗೋಪಾಲಕೃಷ್ಣ ಕಲ್ಮಕ್ಕಿ ಕಾರ್ಯಕ್ರಮ ವಂದಿಸಿದರು. ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರ್ವವಹಿಸಿದರು.