Kundapra.com ಕುಂದಾಪ್ರ ಡಾಟ್ ಕಾಂ

ಯುವಜನರ ಸಕ್ರೀಯ ಪಾಲ್ಗೊಳ್ಳುವಿಕೆಯಿಂದ ಕಾರ್ಯಕ್ರಮ ಯಶಸ್ಸು: ಗೋಪಾಲ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ,
ಕುಂದಾಪುರ: ಸಾರ್ವಜನಿಕ ಗಣೇಶೋತ್ಸವ ಎಂದರೆ ಜನರನ್ನು ಒಗ್ಗೂಡಿಸುವ ವೇದಿಕೆ. ಇಂಥಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯುವ ಜನತೆ ಮತ್ತು ಸಾರ್ವಜನಿಕರ ಸಕ್ರೀಯ ಪಾಲ್ಗೊಳ್ಳುವಿಕೆಯಿಂದ ಯಶಸ್ಸು ಸಾಧ್ಯ. ಜನತೆಯ ಸಂಘಟಿತವಾದ ಪಾಲ್ಗೊಳ್ಳುವಿಕೆ ನಿರಂತರವಾಗಿರಲಿ ಎಂದು ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷರು, ಶಾಸಕರಾದ ಕೆ.ಗೋಪಾಲ ಪೂಜಾರಿ ಹೇಳಿದರು.

ಸಾರ್ವಜನಿಕ ಗಣೇಶೋತ್ಸವ ಸಮಿತಿ ವಂಡ್ಸೆ ಇದರ ೧೫ನೇ ವರ್ಷದ ಗಣೇಶೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಗಣೇಶೋತ್ಸವ ಸೇವಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು.

ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಹೇಶ ಗಾಣಿಗ ಅಬ್ಬಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಸದಸ್ಯ ಉದಯ ಜಿ.ಪೂಜಾರಿ ಚಿತ್ತೂರು ಬಹುಮಾನ ವಿತರಿಸಿದರು. ನಿವೃತ್ತ ಯೋಧ ಬಿಜು ಥೋಮಸ್ ಅವರಿಗೆ ಗಣೇಶೋತ್ಸವ ಸೇವಾ ಪುರಸ್ಕಾರ ನೀಡಲಾಯಿತು.

ವಂಡ್ಸೆ ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ವಿ.ಕೆ.ಶಿವರಾಮ ಶೆಟ್ಟಿ, ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ವಿಠಲ ಆಚಾರ್ಯ ಆತ್ರಾಡಿ, ವಂಡ್ಸೆ ಅಯ್ಯಂಗಾರ್ ಬೇಕರಿಯ ಮಾಲಕ ಜಗದೀಶ ಪ್ರಮೋದ್, ಗಣೇಶ ಫರ್ನಿಚರ‍್ಸ್‌ನ ಚಂದ್ರಯ್ಯ ಆಚಾರ್ ಕಳಿ, ವಂಡ್ಸೆ ಸಿ.ಎ ಬ್ಯಾಂಕ್ ನಿರ್ದೇಶಕ ಸಂಜೀವ ಪೂಜಾರಿ, ಕೈಗಾರಿಕಾ ಉದ್ಯಮಿ ರಮೇಶ ದೇವಾಡಿಗ ನೂಜಿನಮನೆ, ಬೆಂಗಳೂರು ಉದ್ಯಮಿ ಎಚ್.ಕೆ.ಚಂದ್ರಶೆಟ್ಟಿ ಮೇಲ್‌ಕಾನಬೇರು, ಅರಣ್ಯ ಗುತ್ತಿಗೆದಾರ ಹನೀಫ್ ಸಾಹೇಬ್ ವಂಡ್ಸೆ, ಪ್ರಕಾಶ ಪೂಜಾರಿ ಜೆಡ್ಡು, ದುರ್ಗಾಶ್ರೀ ಅರ್ಥ್‌ಮೂವರ‍್ಸ್‌ನ ಗಣೇಶ ಗಾಣಿಗ ಮಲ್ಲಾರಿ, ಅನಿಲ್ ಆರ್.ಗಾಣಿಗ ವಂಡ್ಸೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ಚಿನ್ಮಯಿ, ಸಿಂಧು ಆರ್.ಉಪಾಧ್ಯ, ಚೇತನ ಟಿ.ಎನ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರಶಾಂತ್ ಶೆಟ್ಟಿ ಆತ್ರಾಡಿ, ಬಚ್ಚು ಪೂಜಾರಿ ಶಾರ್ಕೆ, ಶಂಕರ ಆಚಾರ್ ಇವರಿಗೆ ವೈದ್ಯಕೀಯ ಸಹಾಯಧನ ನೀಡಲಾಯಿತು. ಅನ್ನದಾನದ ಸೇವಾಕರ್ತರಾದ ಜಗದೀಶ ಪ್ರಮೋದ್ ಅವರನ್ನು ಸನ್ಮಾನಿಸಲಾಯಿತು. ಶಶಿಧರ ಶೆಟ್ಟಿ ಕೊರಾಡಿಮನೆ ಸ್ವಾಗತಿಸಿ, ಕಾರ್ಯದರ್ಶಿ ಸೀತಾರಾಮ ಪೂಜಾರಿ ತೆಂಕೊಡಿಗೆ ವಂದಿಸಿದರು. ಶಿಕ್ಷಕ ವಸಂತರಾಜ್ ಶೆಟ್ಟಿ, ಗಣೇಶ ದೇವಾಡಿಗ ಅಡಿಕೆಕೊಡ್ಲು, ಪಗತಿ ಶೆಟ್ಟಿ ಬಾಡಿಬೇರು ಮಾರಣಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.

 

Exit mobile version