Kundapra.com ಕುಂದಾಪ್ರ ಡಾಟ್ ಕಾಂ

ನಿರಂತರ ಕಲಿಕೆಯಿಂದ ಮಾತ್ರ ಸಂಗೀತದಲ್ಲಿ ಸಾಧನೆ ಸಾಧ್ಯ: ಡಾ. ಸುಬ್ರಹ್ಮಣ್ಯ ಭಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಂಗೀತದ ಬಗೆಗೆ ಕನಿಷ್ಠ ಜ್ಞಾನ, ಅಧ್ಯಯನವಿಲ್ಲದೇ ನೇರವಾಗಿ ವೇದಿಕೆಯಲ್ಲಿ ಹಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಆದರೆ ನಿರಂತರವಾದ ಕಲಿಕೆಯಿಂದ ಮಾತ್ರ ಸಂಗೀತದಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ಗ್ರಾಮೀಣ ಭಾಗದಲ್ಲಿ ನಡೆಯುವ ಸಂಗೀತ ಸ್ವರ್ಧೆಗಳು ಮಕ್ಕಳಲ್ಲಿನ ಪ್ರತಿಭಾನ್ವೇಷಣೆಗೆ ವೇದಿಕೆಯಾಗುವುದಲ್ಲದೇ, ಸಂಗೀತಾಸಕ್ತರಿಗೆ ಆರಂಭದಲ್ಲಿಯೇ ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಹೇಳಿದರು.

ಅವರು ಸವಿಸವಿ ನೆನಪು ಕಲಾ ಸಂಸ್ಥೆ ಕಳವಾಡಿ, ಶ್ರೀ ಮಾರಿಕಾಂಬ ಹವ್ಯಾಸಿ ಕಲಾ ತಂಡ ಕಳವಾಡಿ ಹಾಗೂ ಶ್ರೀ ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್ ತಗ್ಗರ್ಸೆ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಜೆಎನ್‌ಆರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರಾವಣ ಸಂಗೀತ ಸ್ವರ್ಧೆ ಹಾಗೂ ಸಂಗೀತ ರಸಮಂಜರಿ ಸ್ವರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಬೈಂದೂರು ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು ಅಧ್ಯಕ್ಷತೆ ವಹಿಸಿದ್ದರು. ಸವಿ ಸವಿ ನೆನಪು ಕಲಾತಂಡದ ಗೌರವ ಪೋಷಕ ರಘುರಾಮ ಪೂಜಾರಿ, ಸಂಗೀತಗಾರ ಚಂದ್ರ ಬಂಕೇಶ್ವರ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸಹಶಿಕ್ಷಕ ಪ್ರಶಾಂತ್, ಜೆಎನ್‌ಆರ್ ಕಲಾಮಂದಿರದ ವ್ಯವಸ್ಥಾಪಕ ಶೇಷಯ್ಯ ಉಪಸ್ಥಿತರಿದ್ದರು.

ಹೈಸ್ಕೂಲು ಹಾಗೂ ಕಾಲೇಜು ವಿಭಾಗದಲ್ಲಿ ನಡೆದ ಸಂಗೀತ ಸ್ವರ್ಧೆಯಲ್ಲಿ ಭಾಗವಹಿಸಿದ ಹಾಗೂ ವಿಜೇತ ವಿದ್ಯಾರ್ಥಿಗಳು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಕಳವಾಡಿ ಶ್ರೀ ಮಾರಿಕಾಂಬ ಹವ್ಯಾಸಿ ಕಲಾ ತಂಡದ ನಾಗೇಂದ್ರ ಕಳವಾಡಿ ಸ್ವಾಗತಿಸಿದರು. ತಗ್ಗರ್ಸೆ ಶ್ರೀ ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್‌ನ ಪ್ರಮೋದ್ ಆಚಾರ್ಯ ತಗ್ಗರ್ಸೆ ವಂದಿಸಿದರು. ಕಳವಾಡಿ ಸವಿಸವಿ ನೆನಪು ಕಲಾ ಸಂಸ್ಥೆಯ ಅಧ್ಯಕ್ಷ ಸತೀಶ್ ಕಳವಾಡಿ ಕಾರ್ಯಕ್ರಮ ನಿರೂಪಿಸಿದರು.

 

Exit mobile version