Kundapra.com ಕುಂದಾಪ್ರ ಡಾಟ್ ಕಾಂ

ಭ್ರಷ್ಟಾಚಾರ ನಿರ್ಮೂಲನಾ ಅರಿವು ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಾನವ ಹಕ್ಕುಗಳ ಕೋಶ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಅರಿವು ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬಿ.ಎಸ್. ಸತೀಶ್ ಪೋಲೀಸ್ ನಿರೀಕ್ಷಕರು, ಉಡುಪಿ ಜಿಲ್ಲೆ ಅವರು ಮಾತನಾಡಿ ಭ್ರಷ್ಟಾಚಾರವೆಂಬ ನಕಾರಾತ್ಮಕ ಮನಸಿದ್ದಾಗ ಮಾತ್ರ ಭ್ರಷ್ಟಾಚಾರವೆಂಬುದು ನಡೆಯಲಿಕ್ಕೆ ಸಾಧ್ಯವಿದೆ. ನಮಗೆ ಕಾನೂನಿನ ಸಲಹೆ ಮತ್ತು ಅರಿವಿನ ಅಗತ್ಯತ ಬಹಳ ಇದೆ. ನಿಮ್ಮ ನಮ್ಮ ಊರುಗಳಲ್ಲಿ ನೀವೆ ಭ್ರಷ್ಟಾಚಾರವೆಂಬುದರ ನಿಗ್ರಹ ಕುರಿತಂತೆ ಅರಿವು ಮೂಡಿಸಬೇಕು. ಅದರ ನಿರ್ಮೂಲನೆಯಲ್ಲಿ ನಾವೆಲ್ಲರೂ ಕೈಜೋಡಿಸಬೇಕು. ಹಾಗಿದ್ದಾಗ ಮಾತ್ರ ನಿರ್ಮೂಲನೆ ಸಾಧ್ಯವಾಗಬಹುದು. ಪ್ರತಿಯೊಬ್ಬರೂ ತಾನೂ ಆಮಿಷಗಳನ್ನು ನೀಡಿ ಕೆಲೆಸ ಮಾಡಿಸಿಕೊಳ್ಳಬಾರದು ಎಂಬುದನ್ನು ಮನಗಾಣಬೇಕು. ಭ್ರಷ್ಟಾಚಾರವನ್ನುಬೇರು ಸಹಿತ ಕಿತ್ತೊಗೆಯಲು ಪಣತೊಡಬೇಕು. ಯಾರಾದರೂ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದು ನಿಮ್ಮ್ ಗಮನಕ್ಕೆ ಬಂದಾಗ ಭ್ರಷ್ಟಾಚಾರ ನಿಗ್ರಹ ದಳದ ಗಮನಕ್ಕೆ ತರಬೇಕು. ಎಂದು ಎಂದ ಹೇಳಿದರು. ಭ್ರಷ್ಟಾಚಾರ ನಿಗ್ರಹ ದಳ ಉಡುಪಿ ಜಿಲ್ಲೆಯೆ ನಿರೀಕ್ಷಕರಾದ ಜಯರಾಮ ಜಿ.ಗೌಡ ಮಾತನಾಡಿ ಪೋಲೀಸ್ ಇಲಾಖೆಯ ಕಾರ್ಯವೈಖರಿಯ ಕುರಿತು ಮಾಹಿತಿ ನೀಡಿದರು.

 

Exit mobile version