Kundapra.com ಕುಂದಾಪ್ರ ಡಾಟ್ ಕಾಂ

ಕೊಡುವುದರಲ್ಲಿ ಇರುವ ಸುಖ ಪಡೆಯುದರಲ್ಲಿ ಇಲ್ಲ: ಸತೀಶ್ ಕಿಣಿ ಬೆಳ್ವೆ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಸಿದ್ದಾಪುರ: ಹುಟ್ಟಿದ ಪ್ರತಿಯೊಬ್ಬರಿಗೂ ಸಾಮಾಜಿಕ ಋಣಗಳು ಇರುತ್ತವೆ. ಒಬ್ಬೋಬರು ಒಂದೊಂದು ರೀತಿಯಲ್ಲಿ ಋಣಗಳನ್ನು ತೀರಿಸುತ್ತಾರೆ. ಸಮಾಜದಿಂದ ಸಾಕಷ್ಟು ಪಡೆದಿದ್ದೇವೆ. ಸಮಾಜದಿಂದ ಪಡೆದುದರಲ್ಲಿ ಸ್ವಲ್ಪವಾದರು ಸಮಾಜಕ್ಕೆ ಕೊಡಬೇಕು. ಕೊಡುವುದರಲ್ಲಿ ಇರುವ ಸುಖ ಪಡೆಯುದರಲ್ಲಿ ಇಲ್ಲ ಎಂದು ಎಂದು ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ ಅಧ್ಯಕ್ಷ ಬಿ. ಸತೀಶ್ ಕಿಣಿ ಬೆಳ್ವೆ ಅವರು ಹೇಳಿದರು.

ಅವರು ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ (ರಿ.) ಬೆಳ್ವೆ, ಲಯನ್ಸ್ ಕ್ಲಬ್ ಸಂತೆಕಟ್ಟೆ, ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಫೌಂಡೇಶನ್ ಸಭಾಂಗಣದಲ್ಲಿ ಸೆ.೧೦ರಂದು ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದರು.

ಸಂಘ-ಸಂಸ್ಥೆಗಳು ಜನರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಮಹತ್ವವನ್ನು ಪಡೆಯುತ್ತವೆ. ಜನತೆ ಇಂತಹ ಕಾರ್ಯಕ್ರಮಗಳಲ್ಲಿ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆಯ ಬೇಕು. ಉಚಿತವಾಗಿ ನೀಡುವ ಆರೋಗ್ಯ ತಪಾಸಣೆ ಹಾಗೂ ವೈದ್ಯಕೀಯ ಸೇವೆಗಳ ಬಗ್ಗೆ ಜನತೆ ಕೀಳರಿಮೆ ಬೀಡ ಬೇಕು. ಇತಂಹ ಶಿಬಿರಗಳ ಮೂಲಕ ನುರಿತ ವೈದ್ಯರ ತಂಡದವರಿಂದ ಉತ್ತಮ ವೈದ್ಯಕೀಯ ಸೇವೆ ದೊರೆಯುತ್ತವೆ ಎಂದರು.

ಸಂತೆಕಟ್ಟೆ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಜೀಸನ್ ಡಾಯಾಸ್ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಸಂಘ- ಸಂಸ್ಥೆಗಳು ಹಮ್ಮಿಕೊಳ್ಳು ವ ವೈದ್ಯಕೀಯ ಚಿಕಿತ್ಸೆಯ ಉಚಿತ ಸೇವೆಗಳು ಗ್ರಾಮೀಣ ಭಾಗದ ಜನತೆಗೆ ಪ್ರಯೋಜನವಾಗಲಿದೆ. ಸಂಸ್ಥೆಗಳ ಉತ್ತಮ ಸೇವೆಯು, ಗೌರವವನ್ನು ಹೆಚ್ಚಿಸುವುದರೊಂದಿಗೆ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದರು.

ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ ಟ್ರಸ್ಟಿ ಬಿ. ಉಮೇಶ್ ಕಿಣಿ ಬೆಳ್ವೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಮಣಿಪಾಲ ಕಸ್ತೂರ್ಬಾ ಹಾಸ್ಪಿಟಲ್ ಕಣ್ಣಿನ ತಜ್ಞ ಡಾ| ಕಿರಣ್, ಸಮುದಾಯ ಆರೋಗ್ಯ ವಿಭಾಗದ ಡಾ| ಅರ್ಪಣಾ, ಮಧುಮೇಹ ವಿಭಾಗದ ಡಾ| ಶುಭ ಜಿ.ಮಯ್ಯ, ಡಾ| ಅನ್ನಾ, ಸಂತೆಕಟ್ಟೆ ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ, ಸುದರ್ಶನ ನಾಯಕ್, ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ಹರೀಶ್ಚಂದ್ರ ಆಚಾರ್ಯ, ಆವರ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ಉಮೇಶ್ ಶೆಟ್ಟಿ, ಶಿಬಿರದ ಸಂಯೋಜಕ ನೀತಿನ್, ಫೌಂಡೇಶನ್ ನಿರ್ದೇಶಕರಾದ ಬಿ. ಗೋಪಾಲಕೃಷ್ಣ ಕಿಣಿ, ಬಿ. ಹರೀಶ ಕಿಣಿ, ಬಿ. ಗೋಕುಲ್ ಕಿಣಿ ಹಾಗೂ ಪದಾಽಕಾರಿಗಳು ಮತ್ತು ಇನ್ನೀತರರು ಉಪಸ್ಥಿತರಿದ್ದರು.

 

Exit mobile version