Site icon Kundapra.com ಕುಂದಾಪ್ರ ಡಾಟ್ ಕಾಂ

ಅಮಿತ್ ಶೆಟ್ಟಿ ಆವರ್ಸೆ ನಿರ್ದೇಶನದ ‘ಕಾಡು ದಾರಿ’ ಕಿರುಚಿತ್ರ ಇಂದು ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾಡಿನ ರಕ್ಷಣೆ, ಮೂಡನಂಬಿಕೆಯ ಬಗೆಗಿನ ಜಾಗೃತಿ ಮೂಡಿಸುವ ಸುಂದರ ಕಥಾಹಂದರವಿರುವ ಕಿರುಚಿತ್ರ ‘ಕಾಡು ದಾರಿ’ ಸೆಪ್ಟೆಂಬರ್ 13ರ ಸಂಜೆ ಬಿಡುಗಡೆಗೊಳ್ಳಲಿದೆ. ಯುವ ತಂಡ ಒಟ್ಟಾಗಿ ನಿರ್ಮಿಸಿರುವ ಕಿರುಚಿತ್ರ ಒಂದಿಷ್ಟು ಕುತೂಹಲ ಮೂಡಿಸಿದೆ.

ಅರಣ್ಯಾಧಿಕಾರಿ ಹಾಗೂ ಕಾಡುಗಳ್ಳರ ಸುತ್ತ ನಡೆಯುವ ಕಾಡು ದಾರಿಕಿರುಚಿತ್ರಕ್ಕೆ ಕಾಡುವ ದಾರಿ ಎಂಬ ಟ್ಯಾಗ್ಲೈನ್ ನೀಡಲಾಗಿದೆ. ಸ್ನೇಹಜೀವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಕಿರುಚಿತ್ರ ಯುವ ನಿರ್ದೇಶಕ ಅಮಿತ್ ಶೆಟ್ಟಿ ಆವರ್ಸೆ ಅವರ ನಿರ್ದೇಶನದಲ್ಲಿ ಮೂಡಿಬಂದಿದೆ. ಈ ಕಿರುಚಿತ್ರಕ್ಕೆ ಶರತ್ ಅಡಿಗ, ಶ್ರೀಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಶ್ರೀಧರ ಪೂಜಾರಿ ಆವರ್ಸೆ ಕಥೆ ಚಿತ್ರಕಥೆ ಬರೆದಿದ್ದು ಸಂಪತ್ ವಂಡಾರು ಸಂಭಾಷಣೆ ಬರೆದಿದ್ದಾರೆ. ಕಾರ್ತಿಕ್ ರಾಜ್, ಮನು ಹಂದಾಡಿ ಸಂಗೀತ ನೀಡಿದ್ದು, ಹರೀಶ್ ಕಿರಣ್ ತುಂಗ ಸಾಸ್ತಾನ ಸಂಕಲನ ಮಾಡಿದ್ದಾರೆ. ನಿರ್ದೇಶಕರಾದಿಯಾಗಿ ಸ್ಥಳೀಯರೇ ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಯುವಕರ ಈ ಹೊಸ ಪ್ರಯತ್ನವನ್ನು ಪ್ರೋತ್ಸಾಹಿಸುವ ಕೆಲಸವನ್ನು ಪ್ರೇಕ್ಷಕ ಪ್ರಭುಗಳು ಮಾಡಬೇಕಿದೆ.

ಚಿತ್ರದ ಟ್ರೇಲರ್ ಇಲ್ಲಿದೆ

Exit mobile version