Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಪ್ರಥಮ ದರ್ಜೆ ಕಾಲೇಜು ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ಶ್ರಮದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಒಂದು ದಿನದ ವಿಶೇಷ ಶಿಬಿರವು ನಾಯ್ಕನಕಟ್ಟೆ ಶ್ರೀ ವನದುರ್ಗಾದೇವಿ ದೇವಸ್ಥಾನದಲ್ಲಿ ನಡೆಯಿತು. ದೇವಸ್ಥಾನದ ಕಾರ್ಯದರ್ಶಿ ಮತ್ತು ರೋಟರಿ ಮಾಜಿ ಅಧ್ಯಕ್ಷ ಗೋವಿಂದ ಎಂ. ಇವರು ಕಾರ್ಯಕ್ರಮ ಉದ್ಘಾಟಿಸಿ ಶಿಬಿರಾರ್ಥಿಗಳಿಗೆ ಶ್ರಮದಾನದ ಮಹತ್ವ ಹಾಗೂ ಸೇವಾ ಮನೋಭಾವದ ಬಗ್ಗೆ ತಿಳಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಸುಮಾರು ೧೦೦ ಕ್ಕೂ ಮೀರಿ ಸ್ವಯಂಸೇವಕರು ಶ್ರಮದಾನದ ಮೂಲಕ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎ ಮೇಳಿ ನೇತೃತ್ವದಲ್ಲಿ ಶಿಬಿರವನ್ನು ಆಯೋಜಿಸಿದ್ದು, ಯೋಜನಾಧಿಕಾರಿಗಳಾದ ರವಿಚಂದ್ರ ಮತ್ತು ನಾಗೇಶ್ ಸಂಯೋಜಿಸಿದರು. ವಾಣಿಜ್ಯ ಉಪನ್ಯಾಸಕ ಮಣಿಕಂಠ, ಕನ್ನಡ ಉಪನ್ಯಾಸಕ ಸತೀಶ್ ಎಂ. ಹಾಗೂ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಲತಾ ಪೂಜಾರಿ ಉಪಸ್ಥತರಿದ್ದರು. ರಾಘವೇಂದ್ರ, ವಾಸು ಪೂಜಾರಿ, ಭಾಸ್ಕರ್ ಪೂಜಾರಿ, ಸಂತೋಷ ಹಾಗೂ ರಾಘವೇಂದ್ರ ಕಾರಂತ್ ಸಹಕರಿಸಿದರು.

Exit mobile version