Kundapra.com ಕುಂದಾಪ್ರ ಡಾಟ್ ಕಾಂ

ಪರಸ್ಪರರ ವೈಯಕ್ತಿಕ ಬದುಕುಗಳನ್ನು ಗೌರವಿಸಿ : ನರೇಂದ್ರ ಗಂಗೊಳ್ಳಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಪ್ರತಿಯೊಂದು ಸಂಬಂಧಗಳು ಉಳಿದುಕೊಳ್ಳುವುದು ಪರಸ್ಪರ ನಂಬಿಕೆಯ ಆಧಾರದ ಮೇಲೆ. ವಿಮರ್ಶೆಗೆ ಅವಕಾಶ ನೀಡುವಂತಹ ನಂಬಿಕೆಗಳನ್ನು ಪ್ರತಿಯೊಬ್ಬರೂ ಹೊಂದಿರಬೇಕು ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ಕೋಟೇಶ್ವರದ ರೋಟರಿ ಭವನದಲ್ಲಿ ರೋಟರಿ ಕ್ಲಬ್ ಕೋಟೇಶ್ವರ ಮತ್ತು ಆನ್ಸ್ ಕ್ಲಬ್ ಕೋಟೇಶ್ವರ ವತಿಯಿಂದ ನಡೆದ ಕುಟುಂಬ ಸಮ್ಮಿಲನ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.

ಮನಸ್ಸಿನಲ್ಲಿ ಸಂಬಂಧಗಳ ಬಗೆಗೆ ಅಸಹ್ಯವನ್ನು ತುಂಬುವ ಟಿವಿ ಧಾರಾವಾಹಿಗಳನ್ನು ಬದಿಗಿಟ್ಟು ಮನೆಗಳಲ್ಲಿ ನಮ್ಮ ನಡುವೆಯೇ ಪ್ರೀತಿಯ ಮಾತುಕತೆ ಕುಶಲೋಪರಿಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಬೇಕು. ದಂಪತಿಗಳು ಪರಸ್ಪರರ ವೈಯಕ್ತಿಕ ಬದುಕುಗಳನ್ನು ಗೌರವಿಸುವ ವಿಶಾಲ ಮನೋಭಾವನೆಯನ್ನು ಹೊಂದಬೇಕು.ಪ್ರೀತಿಯ ಮಾತು ಸಂಬಂಧಗಳ ಬೆಳವಣಿಗೆಗೆ ಸಹಕಾರಿ ಎಂದು ಅವರು ಹೇಳಿದರು.

ರೋಟರಿ ಅಧ್ಯಕ್ಷ ಎನ್ ಪ್ರಕಾಶ್ ಆಚಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಆನ್ಸ್ ಅಧ್ಯಕ್ಷೆ ಶ್ರೀಮತಿ ಪ್ರಕಾಶ್ ಆಚಾರ್, ಆನ್ಸ್ ಕಾರ‍್ಯದರ್ಶಿ ಅಕ್ಷತಾ ಐತಾಳ್ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಕಾರ‍್ಯದರ್ಶಿ ಸತೀಶ್ ಆಚಾರ್ ಧನ್ಯವಾದ ಅರ್ಪಿಸಿದರು.

Exit mobile version