ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾಲೇಜಿನ ವಾರ್ಷಿಕ ಸಂಚಿಕೆ ‘ದರ್ಶನ’ಕ್ಕೆ ತನ್ನದೇ ಆದ ಶೈಲಿ ಮತ್ತು ಇತಿಹಾಸವಿದೆ. ಇಂದಿನವರೆಗೆ ಅದು ತನ್ನತನವನ್ನು ಉಳಿಸಿಕೊಂಡ ರೀತಿ ಅದೇ ದೊಡ್ಡ ಇತಿಹಾಸವಾಗುತ್ತದೆ ಎಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ. ಹೆಚ್. ಶಾಂತಾರಾಮ್ ಹೇಳಿದರು.
ಅವರು ಇಲ್ಲಿನ ಭಂಡರ್ಕಾರ್ಸ್ ಕಾಲೇಜಿನಲ್ಲಿ ಸಾಕಷ್ಟು ಬೆಳವಣಿಗೆಯನ್ನು ಜೊತೆಗೆ ಶಿರ್ಷಿಕೆಗೆ ತಕ್ಕ ಹಾಗೆ ಅದರ ಗುಣಮಟ್ಟವನ್ನು ಉಳಿಸಿಕೊಂಡಿದ್ದೇವೆ. : ಕಾಲೇಜಿನ ೨೦೧೬-೧೭ನೇ ಸಾಲಿನ ವಾರ್ಷಿಕ ಸಂಚಿಕೆ “ದರ್ಶನ” ವನ್ನು ಅನಾವರಣಗೊಳಿಸಿ ಮಾತನಾಡಿದರು.
ಕಾಲೇಜಿನ ವಾರ್ಷಿಕ ಸಂಚಿಕೆ ಸಂಸ್ಥೆಯ ಚಟುವಟಿಕೆಗಳಿಗೆ ಹಿಡಿದ ಕನ್ನಡಿ. ಸಂಸ್ಥೆಯ ಸರ್ವೋತುಮುಖ ಬೆಳವಣಿಗೆಯನ್ನು ಹಿಡಿದಿಡುವಲ್ಲಿ ವಾರ್ಷಿಕ ಸಂಚಿಕೆ ಅತಿಮುಖ್ಯವೆನಿಸುತ್ತದೆ. ಈ ದಿಸೆಯಲ್ಲಿ ಅದರ ಗುಣಮಟ್ಟವನ್ನು ಉಳಿಸಿಕೊಂಡು ಮುಂದುವರಿಯಬೇಕು. ಹಾಗಾಗಿ ಬಹುಮಾನಕ್ಕಿಂತ ಅದರಲ್ಲಿನ ವಸ್ತುವಿಷ್ಯಗಳಲ್ಲಿನ ಗುಣಮಟ್ಟಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ವಾರ್ಷಿಕ ಸಂಚಿಕೆ “ದರ್ಶನ” ದ ಕಾರ್ಯನಿರ್ವಾಹಕ ಸಂಪಾದಕರಾದ ಡಾ.ಹಯವದನ ಉಪಾಧ್ಯಾಯ ಸ್ವಾಗತಿಸಿದರು. ಭಂಡಾರ್ಕಾರ್ಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ.ಗೊಂಡ ವಂದಿಸಿದರು. ವಿದ್ಯಾರ್ಥಿನಿ ಮಹಾಲಕ್ಷ್ಮಿ ಕಾರ್ಯಕ್ರಮ ನಿರ್ವಾಹಿಸಿದರು.