Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ನವರಾತ್ರಿ: ತುರ್ತು ಚಿಕಿತ್ಸೆಗಾಗಿ ವೈದ್ಯಕೀಯ ತಪಾಸಣೆ ಮತ್ತು ತುರ್ತುಚಿಕಿತ್ಸಾ ಘಟಕ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಮಂಗಳೂರು ಎ. ಜೆ. ಹಾಸ್ಪಿಟಲ್ ಮತ್ತು ಎ. ಜೆ. ವೈದ್ಯಕೀಯ ಮಹಾವಿದ್ಯಾಲಯ ಇವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸಹಯೋಗದಲ್ಲಿ ಇಲ್ಲಿನ ಜಗದಾಂಬಿಕಾ ಸಂಕೀರ್ಣದಲ್ಲಿ ಕೊಲ್ಲೂರು ಶರನ್ನವರಾತ್ರಿ ಪ್ರಯುಕ್ತ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ತೆರೆದ ವೈದ್ಯಕೀಯ ತಪಾಸಣೆ ಮತ್ತು ತುರ್ತುಚಿಕಿತ್ಸಾ ಘಟಕವು ಸೆ.೩೦ರ ತನಕ ಉಚಿತವಾಗಿ ಕಾರ್ಯನಿರ್ವಹಿಸುತ್ತದೆ. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ. ಅಭಿಲಾಷ್ ಪಿ. ವಿ. ಇವರು ಈ ವ್ಯವಸ್ಥೆಯ ಉಸ್ತುವಾರಿವಹಿಸಿದ್ದು, ಕಾರ್ಯನಿರ್ವಹಣಾಧಿಕಾರಿ ಜನಾರ್ದನ್ ಜಿ. ಸಿ., ಎಇಒ ಎಚ್. ಕೃಷ್ಣಮೂರ್ತಿ, ವಂಡಬಳ್ಳಿ ಜಯರಾಮ ಶೆಟ್ಟಿ, ನರಸಿಂಹ ಹಳಗೇರಿ ಸಹಕರಿಸುತ್ತಿದ್ದಾರೆ. ನುರಿತ ಹಾಗೂ ತಜ್ಞ ವೈದ್ಯರ ತಂಡ ಕೊಲ್ಲೂರಿನಲ್ಲಿ ಮೊಕ್ಕಾಂ ಹೂಡಿದ್ದು, ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

 

Exit mobile version