ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಪ್ಪಂದ: ಕುಂದಾನಾಡಿನ ಎರಡು ದೀಪ ಸ್ತಂಭಗಳಂತೆ ನಾಡಿನಾದ್ಯಾಂತ ಖ್ಯಾತಿ ಪಡೆದ ಡಾ | ಶಿವರಾಮ ಕಾರಂತರು ಮತ್ತು ಗೋಪಾಲ ಕೃಷ್ಣ ಅಡಿಗರನ್ನು ಅರ್ಥೈಸಿ ಕೊಳ್ಳುವುದು. ಮತ್ತು ಅಭಿಮಾನದಿಂದ ಆಸ್ವಾಧಿಸುವುದು. ನಮ್ಮ ಪೀಳಿಗೆಯ ಕರ್ತವ್ಯ ಎಂದು ಬೆಂಗಳೂರಿನ ’ಕಾರಂಂತ ವೇದಿಕೆ’ ಯ ಸಂಚಾಲಕ ಪಿ.ಸಿ ಚಡಗ ಹೇಳಿದರು.
ಅವರು ಉಪ್ಪುಂದ ಸುವಿಚಾರ ಬಳಗ ಏರ್ಪಡಿಸಿದ ಅಡಿಗರ ಜನ್ಮ ಶತಾಬ್ದಿ ಸಾಹಿತ್ಯ ಸಪ್ತಾಹದ ಸ್ಪರ್ಧೆಗಳ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ನುಡಿದರು.
ಸ್ಪರ್ಧಾಥಿಗಳಿಗೆ ಬಹುಮಾನ ವಿತರಿಸಿದ ಕರ್ನಾಟಕ ಬ್ಯಾಂಕಿನ ನಿವೃತ್ತಿ ಮುಖ್ಯ ಪ್ರಬಂಧಕ ಬಿ.ಎಂ.ರಮೇಶ ಅವರು ಸುವಿಚಾರ ವೇದಿಕೆಯ ಕಾರ್ಯಕ್ರಮಗಳ ವೈವಿಧ್ಯತೆ ಮತು ಹರವಿನ ಕುರಿತು ಶ್ಲಾಘಿಸಿ ಸಹ ಮನಸ್ನ ಪ್ರಜ್ಞಾವಂತರ ಕೂಟ ಇದು ಎಲ್ಲಾಡೆಯಾ ಅವಶ್ಯಕತೆಯಾಗಿದೆ ಎಂದು ನುಡಿದರು.
ಲಲಿತಾ ಜಿ. ಎಸ್. ಭಟ್‌ರವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಯುವ ಕವಿಗೋಷ್ಠಿ ನಡೆಯಿತು. ಪ್ರಗತಿ ಶೆಟ್ಟಿ, ವಿನಯಾ ಶೆಟ್ಟಿ, ಕೀರ್ತಿ ಎಸ್. ಮನಿಷ್ ದೇವಾಡಿಗ ಮತ್ತು ನಮೃತಾ ಸ್ವರಚಿತ ಕವನಗಳನ್ನು ವಾಚಿಸಿದರು. ಪದವಿ ಕಾಲೇಜು ವಿಭಾಗದ ಭಾಷಣ ಸ್ಪರ್ಧೆದಲ್ಲಿ ಬಿ.ಬಿ ಹೆಗ್ಡೆ ಕಾಲೇಜಿನಲ್ಲಿ ಪ್ರಗತಿ ಶೆಟ್ಟಿ, ನಾವುಂದ ರಿಚಾರ್ಡ ಅಲ್ಮೇಡಾ ಕಾಲೇಜಿನ ಅನುಷಾ ಮತ್ತು ಬೈಂದೂರು ಪ್ರಥಮ ದರ್ಜೆ ಕಾಲೇಜಿನ ಚೈತನ್ಯ ಬಹುಮಾನ ಗಳಿಸಿದರು. ಕವನ ಗಾಯನ ಸ್ಪರ್ಧೆಯಲ್ಲಿ ಬಿ.ಬಿ ಹೆಗ್ಡೆ ಕಾಲೇಜಿನ ಶ್ವೇತಾ ಮತ್ತು ಚಿನ್ಮಮಾ, ರಿಚರ್ಡ್ ಅಲ್ಮೇಡಾ ಕಾಲೇಜಿನ ಅನ್ನ ಪೂರ್ಣ ವಿಜೇತರಾದರು. ಫ್ರೌಡಾ ಶಾಲಾ ಶಿಕ್ಷಣ ಮಂಡಳಿಯ ಎಸ್.ಎಸ್,ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನಗಳಿಸಿದ ರೋಹನ್‌ರನ್ನು ಶಾಲು ಹೊಂದಿಸಿ ಪ್ರಶಸ್ತಿ ಪತ್ರ ಗೌರವ ಧನ ನೀಡಿ ಪುರಸ್ಕರಿಸಲಾಯಿತು. ಸಾಹಿತಿ ಯು. ರಮೇಶ ವೈದ್ಯರು ಅಡಿಗರ ಕುರಿತು ಉಪನ್ಯಾಸ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಸುವಿಚಾರ ವೇದಿಕೆಯ ಅಧ್ಯಕ್ಷ ಬಿ.ರಾಮಕೃಷ್ಣ ಶೇರೆಗಾರರು ವಹಿಸಿದ್ದರು. ವೇದಿಕೆಯಲ್ಲಿ ಎಮ್.ಜಯರಾಮ್ ಅಡಿಗರು ಉಪಸ್ಥಿತರಿದ್ದರು. ಆರಂಭದಲ್ಲಿ ಯು.ಸಿ. ಹೊಳ್ಳ ಸ್ವಾಗತಿಸಿದರು. ಕೇಶವ ನಾಯಕ್ ಕಾರ್ಯಕ್ರಮ ನಿರೂಪಿಸಿದ್ದರು. ಯು. ಗಣೇಶ ಪ್ರಸನ್ನ ಮೈಯ್ಯ ಸ್ಪರ್ಧಿಗಳ ಪಟ್ಟಿ ವಾಚಿಸಿದರು. ವಿ.ಹೆಚ್ ನಾಯಕ್ ವಂದಿಸಿದರು.