ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೇಸಿಐ ಕೋಟೇಶ್ವರ ಧ್ವಜಪುರದ ಸ್ಥಾಪಕ ಅಧ್ಯಕ್ಷರಾಗಿ ವಕ್ವಾಡಿ ರಾಕೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ವಕ್ವಾಡಿ ಯುವಶಕ್ತಿ ಮಿತ್ರ ಮಂಡಳಿಯ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಮಂಗಳೂರಿನ ಪ್ರತಿಷ್ಠಿತ ಯೋಗ ಸತ್ಸಂಗದ ಉಡುಪಿ ಜಿಲ್ಲಾ ಪ್ರತಿನಿಧಿಯಾಗಿ, ನಮ್ಮ ಕಲಾಕೇಂದ್ರ ಕೋಟೇಶ್ವರ, ಹಟ್ಟಿಯಂಗಡಿ ಸಿದ್ಧಿವಿನಾಯಕ ಯಕ್ಷಗಾನ ಮೇಳ ಮೊದಲಾದ ಸಾಂಸ್ಕೃತಿಕ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿ ಕೊಂಡಿರುವ ಇವರು ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.