ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಪ್ರತಿಯೊಬ್ಬರಿಗೂ ತಮ್ಮ ರಕ್ತದ ಗುಂಪು ತಿಳಿದಿರಬೇಕಾದ ಅವಶ್ಯಕತೆ ಇದೆ. ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ರಕ್ತದ ಗುಂಪು ಅಗತ್ಯವಾಗಿ ತಿಳಿದಿರಬೇಕು. ರಕ್ತದಾನ ಮಾಡುವ ಸಂದರ್ಭ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ರಕ್ತ ಗುಂಪು ಅತ್ಯಗತ್ಯ. ಆದ್ದರಿಂದ ಪ್ರತಿಯೊಬ್ಬರೂ ತಕ್ತ ಗುಂಪು ವರ್ಗೀಕರಣ ತಪಾಸಣೆ ನಡೆಸಿ ಮುಂದಿನ ಭದ್ರ ಜೀವನಕ್ಕೆ ಅಡಿಪಾಯ ಹಾಕಿಕೊಳ್ಳಬೇಕು ಎಂದು ತ್ರಾಸಿ ಚರ್ಚಿನ ಧರ್ಮಗುರು ಚಾರ್ಲ್ಸ್ ಲೂಯಿಸ್ ಹೇಳಿದರು.
ತ್ರಾಸಿಯ ಕ್ರೈಸ್ತ ದ ಕಿಂಗ್ ಚರ್ಚಿನ ಅಂತರ ಧರ್ಮೀಯ ಆಯೋಗ, ಚರ್ಚಿನ ಆರೋಗ್ಯ ಮಂಡಳಿ, ಲಯನ್ಸ್ ಕ್ಲಬ್ ತ್ರಾಸಿ-ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಲೈಫ್‌ಕೇರ್ ಡಯಾಗ್ನೋಸ್ಟಿಕ್ ಸೆಂಟರ್ ಕುಂದಾಪುರ ಇವರ ಸಹಯೋಗದೊಂದಿಗೆ ತ್ರಾಸಿ ಚರ್ಚಿನ ಮಿಲೇನಿಯಂ ಸಭಾಭವನದಲ್ಲಿ ಭಾನುವಾರ ಜರಗಿದ ಉಚಿತ ರಕ್ತ ಗುಂಪು ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶಾರದಾ ಡಿ. ಬಿಜೂರು, ಕುಂದಾಪುರ ಲೈಫ್‌ಕೇರ್ ಡಯಾಗ್ನೋಸ್ಟಿಕ್ ಸೆಂಟರ್‌ನ ಜಗದೀಶ, ತ್ರಾಸಿಯ ಕ್ರೈಸ್ತ ದ ಕಿಂಗ್ ಚರ್ಚಿನ ಆರೋಗ್ಯ ಮಂಡಳಿಯ ಮಾರ್ಕ ಡಿ’ಅಲ್ಮೇಡಾ ಮತ್ತಿತರರು ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ರೋಬರ್ಟ್ ಒಲಿವೇರಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಾರ್ಜ್ ಡಿ’ಅಲ್ಮೇಡಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲಯನ್ಸ್ ಕ್ಲಬ್ ತ್ರಾಸಿ-ಗಂಗೊಳ್ಳಿ ಕಾರ್ಯದರ್ಶಿ ಜಿ.ಮಹಮ್ಮದ್ ರಫೀಕ್ ವಂದಿಸಿದರು.