Kundapra.com ಕುಂದಾಪ್ರ ಡಾಟ್ ಕಾಂ

ಮನೆಗೆ ಸಿಡಿಲು ಬಡಿದು ಅಪಾರ ನಷ್ಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಸಿಡಿಲು ಬಡಿದು ಮನೆ ಭಾಗಶಹ ಹಾನಿಯಾಗಿದ್ದು, ಓರ್ವ ಮಹಿಳೆ ಹಾಗೂ ಬಾಲಕ ಸಿಡಿಲಾಘಾತಕ್ಕೆ ಒಳಗಾಗಿದ್ದಾರೆ. ಮನೆ ಪೌಂಡೇಶನ್, ಗೋಡೆ ಬಿರುಕುಬಿಟ್ಟಿದ್ದು,ವಿದ್ಯುತ್ ಉಪಕರಣ, ಮೀಟರ್ ಬೋರ್ಡ್ ಸುಟ್ಟು ಕರಕಲಾದ ಘಟನೆ ಸೋಮವಾರ ತಡರಾತ್ರಿ ಹೇರಿಕೆರೆ ಬಳಿ ನಡೆದಿದೆ.

ಕುಂದಾಪುರ ತಾಲೂಕ್ ಕಂದಾವರ ಗ್ರಾಮ, ಹೆರಿಕೆರೆ ಸಿರಾಜುನ್ನೀಸಾ ಹಾಗೂ ಅಬ್ದುಲ್ ಖಾದರ್ ಎಂಬವರ ಎರಡು ವಾಸದ ಮನೆಗೆ ಹಾನಿಯಾಗಿದೆ. ತಸ್ಲೀಮಾ ಬಾನು ಹಾಗೂ ಮೊಹಮ್ಮದ್ ರೈಫ್ ಸಿಡಿಲಾಘಾತಕ್ಕೆ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರುಳಿದ್ದಾರೆ. ಬಾಲಕನ ಕಿವಿ ತಮಟೆಗೆ ಪೆಟ್ಟಾಗಿದ್ದರೆ, ಮಹಿಳೆ ವಾಂತಿ, ತಲೆ ಸುತ್ತುವಿಕೆ ಹಾಗೂ ತೀವ್ರ ಬಳಲಿಕೆಗೆ ಒಳಗಾಗಿದ್ದಾರೆ.

ಮಧ್ಯರಾತ್ರಿ ಸಿಡಿಲು ಎರಗಿದ್ದು, ಮನೆ ಗೋಡೆ ಬಿರುಕು ಬಿಟ್ಟಿದೆ. ವೈಯಿರಿಂಗ್ ಸುಟ್ಟಿದೆ. ಮನೆ ಪೌಂಡೇಶನ್ ಬಳಿ ಹೊಂಡ ಬಿದ್ದಿದ್ದು, ಮನೆ ಹತ್ತರಿದ ದರೆಗೆ ಸಿಡಿಲಪ್ಪಳಿಸಿ ಬಿರುಕು ಬಿಟ್ಟಿದೆ. ವಿದ್ಯುತ್ ಮೀಟರ್ ಬೋರ್ಡ್ ಸಂಪೂರ್ಣ ಸುಟ್ಟು ಹೋಗಿದ್ದು, ಅನತಿ ದೂರದಲ್ಲಿ ಮೀಟರ್ ಬೋರ್ಡ್ ಮುಚ್ಚಳ ಹಾರಿ ಹೋಗಿದೆ. ವಾಸಿಂಗ್ ಮಿಶನ್, ಫ್ಯಾನ್, ಗ್ರೈಂಡರ್ ಸುಟ್ಟು ಹೋಗಿದ್ದು, ಟೂಬ್‌ಲೈಟ್ ಒಡೆದು ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಅಬ್ದುಲ್ ಖಾದರ್ ಎಂಬವರ ಮನೆ ನಾಲ್ಕು ಫ್ಯಾನ್ ಹಾಗೂ ಫ್ರಿಜ್ ಹಾಳಾಗಿದ್ದು, ಒಟ್ಟು ೨.೫ ಲಕ್ಷ ರೂ. ನಷ್ಟ ಸಂಭಿವಿಸಿದೆ ಎಂದು ಅಂದಾಜಿಲಾಗಿದೆ.

 

Exit mobile version