Kundapra.com ಕುಂದಾಪ್ರ ಡಾಟ್ ಕಾಂ

ಹೆಮ್ಮಾಡಿಯಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೊಗವೀರ ಯುವ ಸಂಘಟನೆ ರಿ., ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ, ರಕ್ತನಿಧಿ ಕೆಎಂಸಿ ಮಣಿಪಾಲ ಜಿಲ್ಲಾಡಳಿತ ಉಡುಪಿ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮವನ್ನು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಅಧ್ಯಕ್ಷ ಕೆ.ಕೆ ಕಾಂಚನ್ ಉದ್ಘಾಟಿಸಿ ಶುಭ ಹಾರೈಸಿದರು. ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಅಧ್ಯಕ್ಷ ಮಂಜುನಾಥ ಎನ್.ಚಂದನ್ ಅಧ್ಯಕ್ಷತೆ ವಹಿಸಿದ್ದರು.

ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಅಧ್ಯಕ್ಷ ಗಣೇಶ ಕಾಂಚನ್, ಮಾಜಿ ಅಧ್ಯಕ್ಷ ಸದಾನಂದ ಬಳ್ಕೂರು, ಕೆಎಂಸಿ ರಕ್ತನಿಧಿಯ ವೈದ್ಯ ಡಾ|ಗಣೇಶ್ ಮೋಹನ್, ಮೊಗವೀರ ಮುಂದಾಳು ಮಂಜು ನಾಯ್ಕ್ ಗುಜ್ಜಾಡಿ, ಮಹಾವಿಷ್ಣು ಯುವಕ ಮಂಡಲದ ಸಂಚಾಲಕ ಚಂದ್ರ ನಾಯ್ಕ್, ಮಾನಸ ಯುವತಿ ಮಂಡಲದ ಅಧ್ಯಕ್ಷೆ ಶ್ಯಾಮಲ ಚಂದನ್, ಶ್ರೀ ಹಾಗುಳಿ ಸೇವಾ ಸಮಿತಿಯ ಅಧ್ಯಕ್ಷ ರಮೇಶ ಕಾಂಚನ್ ಬಾಳಿಕೆರೆ, ಶ್ರೀರಾಮ ಭಜನಾ ಮಂಡಳಿ ಬಟ್ಟೆಕುದ್ರು ಇದರ ಅಧ್ಯಕ್ಷ ಗಿರೀಶ್ ಬಟ್ಟೆಕುದ್ರು, ಶ್ರೀ ಮಹಾವಿಷ್ಣು ಭಜನಾಮಂಡಳಿ ದೇವಲ್ಕುಂದ ಇದರ ಉಪಾಧ್ಯಕ್ಷ ಸುಕುಮಾರ್ ಶೆಟ್ಟಿ, ಜೇಸಿಐ ಹೆಮ್ಮಾಡಿ ಅಧ್ಯಕ್ಷ ರಾಘವೇಂದ್ರ ಕುಲಾಲ್, ಸ್ಪಂದನ ಯುವಕ ಮಂಡಲ ಗುಜ್ಜಾಡಿ ಇದರ ಅಧ್ಯಕ್ಷ ಕಿಶೋರ್ ದೇವಾಡಿಗ, ದೀಕ್ಷಾ ಯೂತ್ ಫ್ರೆಂಡ್ಸ್ ಆರಾಟೆ ಅಧ್ಯಕ್ಷ ಸುದೀಪ್ ಮೆಂಡನ್, ರಾಘವೇಂದ್ರ ದೇವಾಡಿಗ ಹೆಮ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.

ರಾಷ್ಟ್ರೀಯ ರಕ್ತದಾನ ದಿನಾಚರಣೆಯ ಅಂಗವಾಗಿ ರಕ್ತದಾನಿಗಳಾದ ರಾಘವೇಂದ್ರ ಎಂ.ಎನ್.ನೆಂಪು, ಪ್ರವೀಣ್ ದೇವಾಡಿಗ ಹೆಮ್ಮಾಡಿ, ಸಂತೋಷ ಮಂಗಲ್ಸನಕಟ್ಟೆ ಇವರನ್ನು ಸನ್ಮಾನಿಸಲಾಯಿತು.

ಹೆಮ್ಮಾಡಿ ಘಟಕದ ಮಾಜಿ ಅಧ್ಯಕ್ಷ ಮಂಜುನಾಥ ಆರ್.ಆರಾಟೆ ಸ್ವಾಗತಿಸಿ, ಪ್ರೇಮ ಬಂಟ್ವಾಡಿ ಪ್ರಾರ್ಥಿಸಿದರು. ಹೆಮ್ಮಾಡಿ ಘಟಕದ ಕಾರ್ಯದರ್ಶಿ ಲೋಹಿತಾಶ್ವ ಆರ್.ಕುಂದರ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಶಿಬಿರದಲ್ಲಿ ೩೨೮ ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ರಕ್ತದಾನ ಶಿಬಿರಕ್ಕೆ ವಿನಾಯಕ ಯುವಕ ಮಂಡಲ ನೆಂಪು, ಹಳೆ ವಿದ್ಯಾರ್ಥಿ ಸಂಘ ರಿ,ಜನತಾ ಪ್ರೌಢಶಾಲೆ ಹೆಮ್ಮಾಡಿ, ಮಹಾವಿಷ್ಣು ಯುವಕ ಮಂಡಲ, ಮಾನಸ ಯುವತಿ ಮಂಡಲ ಹರೇಗೋಡು ಕಟ್‌ಬೇಲ್ತೂರು, ಶ್ರೀ ಮಹಾವಿಷ್ಣು ಭಜನಾ ಮಂಡಲ ದೇವಲ್ಕುಂದ, ಡಿವೈಎಫ್‌ಐ ಪಡುಕೋಣೆ, ಸ್ಪಂದನ ಯುವಕ ಮಂಡಲ ಮಂಕಿ ಗುಜ್ಜಾಡಿ, ದೀಕ್ಷಾ ಯೂತ್ ಫ್ರೆಂಡ್ಸ್ ಆರಾಟೆ, ಶ್ರೀ ಹಾಗುಳಿ ಸೇವಾ ಸಮಿತಿ ಬಾಳಿಕೆರೆ, ಸಂಜೀವಿನಿ ಪೈಪ್ಸ್ ಮತ್ತು ಪಿಟ್ಟಿಂಗ್ಸ್ ಪ್ರೈ.ಲಿ ದೇವಲ್ಕುಂದ ಹೆಮ್ಮಾಡಿ, ಮಲ್ಪೆ ಪ್ರೆಶ್ ಮೆರೈನ್ ಎಕ್ಸ್‌ಪೋರ್ಟ್ ಪ್ರೈ.ಲಿ ದೇವಲ್ಕುಂದ, ಜೆಸಿಐ ಹೆಮ್ಮಾಡಿ, ಶ್ರೀರಾಮ ಭಜನಾ ಮಂಡಳಿ ಬಟ್ಟೆಕುದ್ರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ದೇವಲ್ಕುಂದ, ಕೆಂಚನೂರು, ಕರ್ಕುಂಜೆ ಸಹಯೋಗ ನೀಡಿದ್ದವು.

Exit mobile version