Kundapra.com ಕುಂದಾಪ್ರ ಡಾಟ್ ಕಾಂ

ಗೋಕಳ್ಳರಿಗೆ ಕಾಂಗ್ರೆಸ್ ಅಭಯ ಹಸ್ತ: ಸುಲೋಚನಾ ಭಟ್ ಆರೋಪ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾ ಅಧಿಕಾರಕ್ಕೆ ಬಂದ ಬಳಿಕ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಆಗಂತುಕರು ಮಾರಕಾಯುಧ ಹಿಡಿದು ಜನರಲ್ಲಿ ಭಯಸೃಷ್ಟಿಸಿ ಗೋವುಗಳ ಕಳವು ಮಾಡುತ್ತಿದ್ದರೂ ದೂರು ದಾಖಲಿಸುವ ಬದಲು ಪೊಲೀಸರು ಹಸು ಕಳೆದುಕೊಂಡವರನ್ನೇ ಪ್ರಶ್ನಿಸುವ ಸ್ಥಿತಿ ಬಂದಿದೆ. ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದವರು ಗೊಕಳ್ಳರಿಂದ ಬೀದಿಗೆ ಬಂದರೂ ಅವರಿಗೆ ಪರಿಹಾರ ಇರಲಿ ಕಾನೂನು ರಕ್ಷಣೆ ಕೂಡಾ ಇಲ್ಲದಂತಾಗಿದೆ ಎಂದು ಬಿಜೆಪಿ ಮಾಧ್ಯಮ ಸಹಾಯಕ ವಕ್ತಾರೆ ಸುಲೋಚನಾ ಭಟ್ ಆರೋಪಿಸಿದರು.

ಅವರು ಭಾರತೀಯ ಜನತಾ ಪಾರ್ಟಿ ಕುಂದಾಪುರ ವಿಧಾನ ಸಭಾ ಕ್ಷೇತ್ರ ಗೋಸಂರಕ್ಷಣಾ ಪ್ರಕೋಷ್ಠದ ಆಶ್ರಯದಲ್ಲಿ ಕುಂದಾಪುರ ಶಾಸ್ತ್ರಿ ವೃತ್ತದ ಬಳಿ ನಡೆದ ಗೋಹತ್ಯೆ ಹಾಗೂ ಗೊಳ್ಳತನ ವಿರುದ್ಧ ಪ್ರತಿಭಟನೆಯಲ್ಲಿ ಮಾತನಾಡಿ ಗೋಹತ್ಯಗೆ ಮುಂದೆ ನಿಂತು ಪೋಷಿಸುತ್ತಿರುವುದರಿಂದ ನಿರ್ಭ್ಯಯವಾಗಿ ಗೋಕಳವು ನಡೆಯುತ್ತಿದ್ದು, ಕರಾವಳಿಯಲ್ಲಂತೂ ಕಳ್ಳತನ ಎಗ್ಗಿಲ್ಲದೆ ನಡೆಯುತ್ತಿದೆ. ಮಾದಕ ವಸ್ತುಗಳ ಮಾರಾಟದ ಬಗ್ಗೆ ಮಾಹಿತಿ ನೀಡಿದರೆ ನಿರ್ಧಾಕ್ಷಿಣ್ಯವಾಗಿ ಕೊಲ್ಲಲಾಗುತ್ತಿದೆ. ಈ ಕೊಲೆಯ ಹಿಂದೆ ಟಾರ‍್ಗೆಟ್ ಗ್ರೂಫ್ ಇದ್ದು, ಇವರ ರಕ್ಷಣೆ ದಕ ಜಿಲ್ಲೆ ಸಚಿವರೇ ಮಾಡುತ್ತಾರೆ. ಪೊಲೀಸರು ಆಡಳತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಾರೆ ಎಂದು ಹರಿಹಾಯ್ದರು.

ಗೋಹತ್ಯೆ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿಜೆಪಿ ಅಲ್ಲಲ್ಲಿ ಪ್ರತಿಭಟನೆ ಮೂಲಕ ಸರಕಾರ ಎಚ್ಚರಿಸುವ ಕೆಲಸ ಮಾಡುತ್ತಿದ್ದು, ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಪ್ರತಿಭmನೆ ಆಯೋಜಿಸಲಾಗಿದೆ. ಇದರೆಲ್ಲಿ ಸಾಧುಸಂತರು ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ನೀಡಿದರು.

ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ವಿಶ್ವಹಿಂದೂ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಸುಪ್ರಸಾದ್ ಶೆಟ್ಟಿ ಬೈಕಾಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ಸಂಧ್ಯಾ ರಮೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್ ಬಿ, ಜಿಪಂ ಸದಸ್ಯರಾದ ಶ್ರೀಲತಾ ಸುರೇಶ್ ಶೆಟ್ಟಿ, ಲಕ್ಷ್ಮೀ ಮಂಜು ಬಿಲ್ಲವ, ತಾಪಂ ಸದಸ್ಯರಾದ ರೂಪಾ ಪೈ, ಕರಣ್ ಪೂಜಾರಿ, ಕುಂದಾಪುರ ವಿಧಾನ ಸಭಾ ಕ್ಷೇತ್ರ ಗೋಸಂರಕ್ಷಣಾ ಪ್ರಕೋಷ್ಟ ಅವಿನಾಶ್ ಉಳ್ಳೂರು, ಕ್ಷೇತ್ರ ಬಿಜೆಪಿ ಪ್ರಧಾನ ಕಾರ‍್ಯದರ್ಶಿ ಶಂಕರ ಆಂಕದಕಟ್ಟೆ ಇದ್ದರು.

Exit mobile version