Kundapra.com ಕುಂದಾಪ್ರ ಡಾಟ್ ಕಾಂ

ಸಿಪಿಐ(ಎಂ) ರಾಜಕೀಯ ಸಮಾವೇಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೈಂದೂರು ವಲಯ ಸಮತಿ ನೇತೃತ್ವದಲ್ಲಿ, ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಮಿಕ ಸಂಘಟನೆಗಳ ಸದಸ್ಯರ ರಾಜಕೀಯ ಸಮಾವೇಶವು ಬೈಂದೂರು ರೋಟರಿ ಭವನದಲ್ಲಿ ಜರಗಿತು.

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ನಿತ್ಯಾನಂದ ಸ್ವಾಮಿ ರಾಜಕೀಯ ಸಮಾವೇಶ ಉದ್ಘಾಟಿಸಿ ಮಾತನಾಡುತ್ತ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಹಾಗೂ ಮೋದಿಯವರ ಚುನಾವಣಾ ಪ್ರಚಾರ ಭಾಷಣದಲ್ಲಿ ಅಭಿವೃದ್ಧಿಯೇ ಬಿಜೆಪಿ ಮೂಲಮಂತ್ರ, ೬೦ ವರ್ಷದಲ್ಲಾಗದ ಅಭಿವೃದ್ಧಿ ಕೆಲಸ ಆರು ತಿಂಗಳಲ್ಲಿ ಸಾಧಿಸುತ್ತೇವೆ. ಎಲ್ಲಾ ಸಮಸ್ಯೆಗಳಿಗೆ ಬಿಜೆಪಿ ಪರಿಹಾರ ಅಚ್ಚೆದಿನ ಆನೆವಾಲೆ ಹೈ – ಒಳ್ಳೆಯ ದಿನಗಳು ಬರಲಿವೆ, ಅಧಿಕಾರಕ್ಕೆ ಬಂದ ೧೦೦ ದಿನಗಳಲ್ಲಿ ಬೆಲೆ ಏರಿಕೆ ತಡೆಯಾಡೆಯಲಾಗುತ್ತದೆ, ಬೃಷ್ಠಾಚಾರ ರಹಿತ ದೇಶ ಕಟ್ಟುತ್ತೇವೆ ಎಂದು ಮೋದಿ, ಅಮಿತ್‌ಷಾ ಹೇಳಿದರು. ನ ಕಾವೂಂಗ ನ ಕಾನೆ ದೂಂಗ ತಾನೂ ತಿನ್ನೊಲ್ಲ, ತಿನ್ನಲೂ ಬಿಡೋಲ್ಲ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳಿ ಅಧಿಕಾರಕ್ಕೆ ಏರಿದ ನಂತರ ಸಬ್ ಕಾ ವಿನಾಸ್ ಕಾರ್ಪೋರೇಟ್ ವಿಕಾಸ್ ವಿದೇಶಿ ಕಂಪನಿ ವಿಕಾಸ್ ಆಗಿದೆ.

೨೦೧೪ ರ ಚುನಾವಣಾ ಪ್ರಚಾರದ ಅಬ್ಬರದ ಮತ್ತು ಬಣ್ಣ ಬಣ್ಣದ ಆಶ್ವಾಸನೆಯೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂತು. ದೇಶದ ಯುವಜನಾಂಗ ನಿರುದ್ಯೋಗ ಹೋಗಲಾಡುತ್ತದೆ ಎಂಬ ಭೃಮೆಯಲ್ಲಿ ಮತ ಹಾಕಿದರು. ನಿರುದ್ಯೋಗ ತಾಂಡವಾಡುತ್ತಿದೆ, ವರ್ಷಕ್ಕೆ ೨ ಕೋಟಿಯಂತೆ ಮುಂದಿನ ಚುನಾವಣಾ ವೇಳೆಗೆ ೧೦ ಕೋಟಿ ಉದ್ಯೋಗಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು, ಮೋದಿಯವರ ಈ ಭರವಸೆ ಕೇವಲ ಚುನಾವಣಾ ಪೊಳ್ಳು ಮಾತು ಎಂಬುವುದು ೩ ವರ್ಷ ಕಳೆಯುವ ವೇಳೆಗೆ ದೃಢಪಟ್ಟಿದೆ ಎಂದು ನಿತ್ಯಾನಂದ ಸ್ವಾಮಿ ಆರೋಪ ಮಾಡಿದರು.

೮ ಕೃಷಿಯೇತರ ಉತ್ಪಾದನಾ ವಲಯಗಳಲ್ಲಿ ಮೋದಿ ಸರ್ಕಾರದ ೨ನೇ ವರ್ಷದ ಅಂತ್ಯದಲ್ಲಿ ಇದ್ದದ್ದು, ೨.೫ ಕೋಟಿ ಉದ್ಯೋಗಗಳಷ್ಟೆ, ಈ ಒಂದು ವರ್ಷದಲ್ಲಿ ಅದಕ್ಕೆ ಸೇರಿಸಿದ ಕೇವಲ ೨ ಲಕ್ಷ ಮೂವತ್ತು ಸಾವಿರ ಮಾತ್ರ ಅದರಲ್ಲಿ ೧ ಲಕ್ಷ ೧೦ ಸಾವಿರದಷ್ಟು ಶಿಕ್ಷಣ ಮತ್ತು ಆರೋಗ್ಯ ಈ ಎರಡು ಕ್ಷೇತ್ರದಿಂದಲೇ ಎಂದು ನಿತ್ಯಾನಂದ ಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಗ್ರಾಮೀಣ ಉದ್ಯೋಗಕಾಂಕ್ಷಿಗಳ ಪಾಡು ಸೋಚನೀಯ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಉದ್ಯೋಗಗಳ ಬೇಡಿಕೆ ಇದಕ್ಕೆ ಒಂದು ಪ್ರಮುಖ ನಿರ್ದಶನ. ೨೦೧೪-೧೫ ರಲ್ಲಿ ೪.೮೫ ಕೋಟಿ ಕುಟುಂಬ ಉದ್ಯೋಗ ಕೇಳಿದರು. ೨೦೧೬-೧೭ರಲ್ಲಿ ೫.೬೯ ಕೋಟಿಗೆ ಏರಿತು. ೨೦೧೭-೧೮ರ ಒಂದೇ ತಿಂಗಳಲ್ಲಿ ೧.೩೮ ಕೋಟಿ ಕುಟುಂಬ ಉದ್ಯೋಗ ಕೇಳಿದೆ. ಅತೀ ಕಡಿಮೆ ಕೂಲಿ ಕೊಟ್ಟು ವರ್ಷಕ್ಕೆ ಕೇವಲ ೧೦೦ ದಿನಗಳ ಕೆಲಸ ಕೊಡುವ ಯೋಜನೆ ಇದಕ್ಕೂ ಇಷ್ಟೊಂದು ಬೇಡಿಕೆ ಇದೆ. ಕೆಲಸ ಸಿಗಲಿ ಎಂದು ಅರ್ಜಿ ಹಾಕುವ ಕುಟುಂಬಗಳಿಗೆ ೧೦.೧೧ ಶೇ. ಕುಟುಂಬಗಳಿಗೆ ೨೦೧೬-೧೭ರಲ್ಲಿ ೫೮ ಲಕ್ಷ ಕುಟುಂಬಗಳಿಗೆ ಕೆಲಸ ಸಿಕ್ಕಿಲ್ಲ ಎಂದು ಆತಂಕ ವ್ಯಕ್ತ ಪಡಿಸಿದರು. ಉತ್ಪಾದನಾ ಚಟುವಟಿಕೆಗಳಲ್ಲಿ ಬಂಡವಾಳ ಹೂಡಲು ಹೊಸ ಹೂಡಿಕೆಗಳ ಪ್ರಮಾಣ ೨೦೧೫-೧೬ರಲ್ಲಿ ೬.೧ ಶೇಕಡಾ ಇದ್ದದ್ದು ೨೦೧೬-೧೭ರಲ್ಲಿ ೦.೦೬ಶೇಕಡಾಕ್ಕೆ ಇಳಿದಿದೆ.

ಭಾರತೀಯ ರಿಜಿರ್ವೋ ಬ್ಯಾಂಕ್ ಇತ್ತೀಚಿನ ಮಾಹಿತಿ ಪ್ರಕಾರ ಕೈಗಾರಿಕೆಗಳಿಗೆ ಬ್ಯಾಂಕ್ ಸಾಲಗಳ ಪ್ರಮಾಣದಲ್ಲಿ ಆಗಿರುವ ಹೆಚ್ಚಳ ಕೇವಲ ೦.೩ ಶೇಕಡ ಅಂದರೆ ಹೊಸ ಹೂಡಿಕೆಗಳಲ್ಲಿ ಹೊಸ ಉದ್ಯೋಗಗಳ ನಿರೀಕ್ಷೆಯನ್ನು ಇಟ್ಟುಕೊಳ್ಳುವಂತಿಲ್ಲ ಎಂದು ನಿತ್ಯಾನಂದ ಸ್ವಾಮಿ ಹೇಳಿದರು.

ಸಿಪಿಐ(ಎಂ) ಪಕ್ಷದ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಶಿರೂರಿನ ವಿದ್ಯಾರ್ಥಿನಿ ರತ್ನಾ ಕೊಠಾರಿ ನಿಗೂಡ ಸಾವಿನ ತನಿಖೆಗೆ ಒತ್ತಾಯಿಸಿ ಹಾಗೂ ಸರ್ಕಾರದ ವತಿಯಿಂದ ಮೃತಳ ಕುಟುಂಬಕ್ಕೆ ಪರಿಹಾರ ವರ್ಷ ಕಳೆದರೂ ಪರಿಹಾರ ದೊರಕದ ಕಾರಣ ಬೀದಿಗಿಳಿದು ಹಣ ಬಿಡುಗಡೆ ಮಾಡಲು ಹೋರಾಟ ಮಾಡಿದ ಗೌರವ ಸಿಪಿಐ(ಎಂ) ಪಕ್ಷಕ್ಕೆ ಸಲ್ಲುತ್ತದೆ ಎಂದು ಅವರು ಹೇಳಿದರು. ಈ ಹೋರಾಟದಲ್ಲಿ ಪಾಲ್ಗೊಂಡ ಬೈಂದೂರಿನ ಕಾರ್ಮಿಕ ಸಂಘಗಳ ಸದಸ್ಯರನ್ನು ಅವರು ಅಭಿನಂದಿಸಿದರು.

ಸಿಪಿಐ(ಎಂ) ಪಕ್ಷದ ಬೈಂದೂರು ವಲಯ ರಾಜಕೀಯ ಸಮ್ಮೇಳನದಲ್ಲಿ ಮುಖಂಡರಾದ ಕೆ. ಶಂಕರ, ಎಚ್. ನರಸಿಂಹ, ಸುರೇಶಕಲ್ಲಾಗರ, ರಾಜೀವ ಪಡುಕೋಣೆ, ನಾಗರತ್ನ ನಾಡ, ಸಂತೋಷ ಹೆಮ್ಮಾಡಿ, ಮಹಾಬಲ ವಡೇರ ಹೋಬಳಿ, ಯು. ದಾಸಭಂಡಾರಿ, ದಿನೇಶ ಮೊಗವೀರ, ಜಯಶ್ರೀ, ಉಪಸ್ಥಿತರಿದ್ದರು.

ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಮುಖಂಡ ವೆಂಕಟೇಶ ಕೋಣಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಗಣೇಶ ತೊಂಡೆಮಕ್ಕಿ ವಂದಿಸಿದರು.

Exit mobile version