Site icon Kundapra.com ಕುಂದಾಪ್ರ ಡಾಟ್ ಕಾಂ

ಉದ್ದ ಜಿಗಿತ ಸ್ಪರ್ಧೆ: ವಂಡ್ಸೆ ಶಾಲೆ ವಿದ್ಯಾರ್ಥಿ ಸುಜನ್ ರಾಜ್ಯ ಮಟ್ಟಕ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇತ್ತೀಚೆಗೆ ಉಡುಪಿ ಜಿಲ್ಲೆಯ ಮೂಡುಬೆಳ್ಳೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿನ ೭ನೇ ತರಗತಿ ವಿದ್ಯಾರ್ಥಿ ಸುಜನ್ ಉದ್ದ ಜಿಗಿತ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈಗಾಗಲೇ ವೃತ್ತ ಮಟ್ಟದಲ್ಲಿ ಚಾಂಪಿಯನ್ ಆಗಿ, ಬೈಂದೂರು ವಲಯ ಮಟ್ಟದಲ್ಲಿ ಉದ್ದ ಜಿಗಿತ ಮತ್ತು ಎತ್ತರ ಜಿಗಿತದಲ್ಲಿ ಪದಕ ಪಡೆದಿದ್ದಾನೆ. ವಂಡ್ಸೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜು ಎನ್ ಗುಜ್ಜಾಡಿ ತರಬೇತಿ ನೀಡಿದ್ದು, ಈತ ಉದ್ದಿನಬೆಟ್ಟು ಸುಧಾಕರ ಪೂಜಾರಿ ಮತ್ತು ಭಾರತಿ ದಂಪತಿಗಳ ಪುತ್ರ.

Exit mobile version