Kundapra.com ಕುಂದಾಪ್ರ ಡಾಟ್ ಕಾಂ

ಡಿಜಿಟಲ್ ಗಾರ್ಡನ್ – ಎ ನ್ಯೂ ಅಪ್ರೋಚ್ ಇನ್ ಪ್ಲಾಂಟ್ ಕನ್ಸರ್ವೇಶನ್ ಉಪನ್ಯಾಸ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡರ್ಕಾರ್ಸ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಸಸ್ಯಶಾಸ್ತ್ರ ಅಧ್ಯಾಪಕರ ಸಂಘ “ವನಶ್ರೀ” ಸಹಯೋಗದಲ್ಲಿ ಡಿಜಿಟಲ್ ಗಾರ್ಡನ್ – ಎ ನ್ಯೂ ಅಪ್ರೋಚ್ ಇನ್ ಪ್ಲಾಂಟ್ ಕನ್ಸರ್ವೇಶನ್” ವಿಷಯದ ಕುರಿತು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಒಂದು ದಿನದ ಸೆಮಿನಾರ್ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಕಾಡೆಮಿ ಆಫ್ ಜನರಲ್ ಎಜುಕೇಶನ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಅವರು ಹೊಸ ಹೊಸ ಆವಿಷ್ಕಾರಗಳು ಮತ್ತು ವಸ್ತು-ವಿಷಯಗಳು ಇಂದಿನ ಯುವ ಜನಾಂಗದ ಮುಂದಿದೆ. ನಮ್ಮ ಸಂಶೋಧನಾತ್ಮಕತೆಯನ್ನು ಮತ್ತು ಜ್ನಾನವನ್ನು ವಿಸ್ತರಿಸಿಕೊಳ್ಳಲು ಸಾಕಷ್ಟು ತಂತ್ರಜ್ನಾನದ ನೆಲೆಯಲ್ಲಿ ಅವಕಾಶಗಳಿವೆ. ಅದನ್ನು ಹೆಚ್ಚೆಚ್ಚು ನಮ್ಮ ತಿಳುವಳಿಕೆ ಮತ್ತು ಕಲಿಯುವಿಕೆಯಲ್ಲಿ ಉಪಯೋಗಿಸಿಕೊಳ್ಳಬೇಕು. ಇದರಿಂದ ವ್ಯಕ್ತಿತ್ವ ವಿಕಸನ ಮತ್ತು ಜ್ನಾನಾಭಿವೃದ್ಧಿಯಾಗುತ್ತದೆ. ಅಲ್ಲದೇ ಮಾನವೀಯ ನೆಲೆಗಳು ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವು ಅಷ್ಟೇ ಮುಖ್ಯವಾಗಿರುತ್ತದೆ. ಮಾನವೀಯತೆಯನ್ನು ನಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ ಎನ್.ಪಿ.ನಾರಾಯಣ ಶೆಟ್ಟಿ ಮಾತನಾಡಿ ಕಾಲೇಜಿನಲ್ಲಿ ಎಲ್ಲಾ ವಿಭಾಗಗಳು ವಿವಿಧ ಪ್ರಯೋಗಾತ್ಮಕ ಮತ್ತು ಸಂಶೋಧನಾತ್ಮಕ ಆಲೋಚನೆಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮ ಸಂಸ್ಥೆಯನ್ನು ಎಲ್ಲರೂ ಗುರುತಿಸುವಂತಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಸಸ್ಯಶಾಸ್ತ್ರ ಅಧ್ಯಾಪಕರ ಸಂಘ “ವನಶ್ರೀ” ಇಅದರ ಉಪಾಧ್ಯಕ್ಷರಾದ ಉಷಾರಾಣಿ ಎಸ್. ಸುವರ್ಣ ಉಪಸ್ಥಿತರಿದ್ದರು.

ಭಂಡರ್ಕಾರ್ಸ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಗಾಯತ್ರಿ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಭುವನೇಂದ್ರ ಕಾಲೇಜಿನ ಉಪನ್ಯಾಸಕಿಯಾದ ರಮ್ಯಾ ಭಟ್ ಸ್ವಾಗತಿಸಿದರು. ಭಂಡರ್ಕಾರ್ಸ ಕಾಲೇಜಿನಲ್ಲಿ ಇಂಗ್ಲೀಷ್ ವಿಭಾಗದ ಉಪಾನ್ಯಾಸಕಿ ಜೆವಿಲ್ಲಾ ರೋಡ್ರಿಗಸ್ ಕಾರ್ಯಕ್ರಮ ನಿರ್ವಹಿಸಿದರು. ಭಂಡರ್ಕಾರ್ಸ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಉಪಾನ್ಯಾಸಕಿ ಗೀತಾಪ್ರಭು ವಂದಿಸಿದರು.

Exit mobile version