Site icon Kundapra.com ಕುಂದಾಪ್ರ ಡಾಟ್ ಕಾಂ

ಕಾಂಗ್ರೆಸ್‌ಗೆ ವಿನಾಶಕಾಲೇ ವಿಪರೀತ ಬುದ್ದಿ ಎಂಬಂತಾಗಿದೆ: ಬಿ.ಎಂ. ಸುಕುಮಾರ್ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ರಾಜ್ಯ ಸಚಿವ ರೋಷನ್‌ಬೇಗ್ ರಾಜೀನಾಮೆಗೆ ಆಗ್ರಹಿಸಿ ನಾವುಂದ, ಮರವಂತೆ, ಕಿರಿಮಂಜೇಶ್ವರ ಬಿಜೆಪಿ ಘಟಕದ ವತಿಯಿಂದ ಅರೆಹೊಳೆ ಬೈಪಾಸಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯ ನೇತೃತ್ವವಹಿಸಿದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ. ಎಂ. ಸುಕುಮಾರ್ ಶೆಟ್ಟಿ ಮಾತನಾಡಿ, ಕಾಂಗ್ರೆಸ್‌ಗೆ ವಿನಾಶಕಾಲೇ ವಿಪರೀತ ಬುದ್ದಿ ಬಂದಿದ್ದು, ಅದರ ಅವನತಿಗೆ ಭಸ್ಮಾಸುರ ಕೈ ಎಳೆದಾಯಿತು. ಮುಂದಿನ ಚುನಾವಣೆಯಲ್ಲಿ ಹಿಂದು ವಿರೋಧಿ ಕಾಂಗ್ರೆಸ್ ಸಂಪೂರ್ಣ ನಿರ್ನಾಮವಾಗಲಿದೆ ಎಂದು ಭವಿಷ್ಯ ನುಡಿದರು. ಇನ್ನುಳಿದ ಕಾಲದಲ್ಲಾದರೂ ಸರ್ಕಾರದಲ್ಲಿರುವ ಸಚಿವರುಗಳಿಗೆ ದೇವರು ಒಳ್ಳೆಯ ಬುದ್ದಿಕೊಡಲಿ. ಕಾಂಗ್ರೆಸ್ ರಾಜ್ಯದಿಂದಲೇ ತೊಲಗಲಿ ಎಂದರು.

ಈ ಸಂದರ್ಭ ತಾಪಂ ಸದಸ್ಯ ಮಹೇಂದ್ರ ಪೂಜಾರಿ, ಮಂಡಲ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಶೆಟ್ಟಿ, ಮರವಂತೆ ಗ್ರಾಪಂ ಅಧ್ಯಕ್ಷೆ ಅನಿತಾ ಆರ್. ಕೆ. ಮಾತನಾಡಿದರು. ಕಿರಿಮಂಜೇಶ್ವರ ಗ್ರಾಪಂ ಉಪಾಧ್ಯಕ್ಷ ಶೇಖರ ಖಾರ್ವಿ, ಮರವಂತೆ ಗ್ರಾಪಂ ಉಪಾಧ್ಯಕ್ಷ ಗಣೇಶ ಪೂಜಾರಿ, ರಾಜೇಂದ್ರ ಬಿಜೂರು, ಮೂರು ಗ್ರಾಮಗ ಬಿಜೆಪಿ ಪ್ರಮುಖರು, ಯುವ ಕಾರ್ಯಕರ್ತರು ಇದ್ದರು.

 

Exit mobile version