Kundapra.com ಕುಂದಾಪ್ರ ಡಾಟ್ ಕಾಂ

ಯೋಗಾಸನ ಸ್ಪರ್ಧೆ: ಸುದರ್ಶನ್ ಶೆಟ್ಟಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ, ಅಭಿನಂದನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗದಗದಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೆಟ್ಟಿನಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಸುದರ್ಶನ್ ಶೆಟ್ಟಿ ಪ್ರಥಮ ಸ್ಥಾನ ಪಡೆದು ಛತ್ತೀಸ್‌ಗಡದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಈ ನೆಲೆಯಲ್ಲಿ ಕಾಲ್ತೋಡು ಗ್ರಾಮಸ್ಥರ ಪರವಾಗಿ ಪಂಚಾಯತ್ ಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಭಟ್ನಾಡಿ ಅಣ್ಣಪ್ಪ ಶೆಟ್ಟಿ ಇವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯದ ಸುದರ್ಶನ್ ಶೆಟ್ಟಿ ಇವರನ್ನು ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭ ಉಪಾಧ್ಯಕ್ಷ ರಾಜು ಪೂಜಾರಿ, ಮಾಜಿ ಅಧ್ಯಕ್ಷ ಮಾದಯ್ಯ ಶೆಟ್ಟಿ, ಸದಸ್ಯರಾದ ಚಂದು ಕುಲಾಲ್ತಿ, ಲಲಿತಾ ಶೆಟ್ಟಿ ಮುರೂರು, ಸುಜಾತಾ ಪೂಜಾರಿ, ಗಣೇಶ ಶೆಟ್ಟಿ, ಬೇಬಿ ಭೋವಿ, ವಿನೋದ, ಪಿಡಿಒ ಸತೀಶ್ ತೋಳಾರ್, ಮೆಟ್ಟಿನಹೊಳೆ ಶಾಲಾ ಮುಖ್ಯಶಿಕ್ಷಕ ಹಾಗೂ ಯೋಗಾ ತರಬೇತುದಾರ ಸುಬ್ಬಯ್ಯ ದೇವಾಡಿಗ, ಶಿಕ್ಷಕ ಮಂಜುನಾಥ ದೇವಾಡಿಗ ಹಾಗೂ ಪಂಚಾಯತ್ ಸಿಬ್ಬಂದಿಗಳು ಇದ್ದರು.

 

Exit mobile version