Kundapra.com ಕುಂದಾಪ್ರ ಡಾಟ್ ಕಾಂ

ಅಂತರ್‌ ಕಾಲೇಜು ಮಟ್ಟದ ವ್ಯವಹಾರ ಉತ್ಸವ

BCK COMಕುಂದಾಪುರ: ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮ ಪಟ್ಟರೆ ಖಂಡಿತ ಯಶಸ್ಸು ಸಾಧ್ಯ ಎಂದು ಕೋಟೇಶ್ವರದ ಸಹನಾ ಬಿಲ್ಡರ್ನ ವ್ಯವಸ್ಥಾಪಕ ನಿರ್ದೇಶಕ ಸುರೇಂದ್ರ ಶೆಟ್ಟಿ ಹೇಳಿದರು.

ಅವರು ಭಂಡಾರ್ಕಾರ್ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಭಾಗವು ಆಯೋಜಿಸಿದ್ದ ಅಂತರ್‌ ಕಾಲೇಜು ಮಟ್ಟದ ವ್ಯವಹಾರ ಉತ್ಸವ (ಮ್ಯಾನೇಜ್‌ಮೆಂಟ್‌ ಫೆಸ್ಟ್‌) “ಸ್ಪರ್ಧಾ’ ಉದ್ಘಾಟಿಸಿ ಮಾತನಾಡಿದರು. ಇಂದು ನಾವು ಸ್ಪರ್ಧಾ ಜಗತ್ತಿನಲ್ಲಿದ್ದೇವೆ. ಇದಕ್ಕೆ ಪೂರಕವಾಗಿ ನಮ್ಮ ಜ್ಞಾನ, ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಪರಿಶ್ರಮ ವಿದ್ದಲ್ಲಿ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಣಿಪಾಲದ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಇದರ್‌ ಆಡಳಿತಾಧಿಕಾರಿ ಡಾ| ಎಚ್‌. ಶಾಂತಾರಾಮ ಮಾತನಾಡಿ ಈ ಕಾರ್ಯಕ್ರಮದಲ್ಲಿ ಪಡೆದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೇವಲ ಪಠ್ಯದ ಹುಳುವಾಗುವುದ ಅಧ್ಯಯನದ ಲಕ್ಷಣವಲ್ಲ. ಪಡೆದ ಜ್ಞಾನವನ್ನು ಬದುಕಿನ ಯಶಸ್ಸನ್ನು ಪಡೆ ಯುವಲ್ಲಿ ಬಳಸಿಕೊಳ್ಳಬೇಕು. ಸ್ಪರ್ಧೆ ಯಲ್ಲಿ ಭಾಗವಹಿಸುವುದಷ್ಟೇ ಮುಖ್ಯ ಹೊರತು ಗೆಲುವು ಅಥವಾ ಸೋಲು ಮುಖ್ಯವಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ|ಎನ್‌ . ಪಿ.ನಾರಾಯಣ ಶೆಟ್ಟ ಮಾತನಾಡಿ ಮೊದಲ 25 ವರ್ಷಗಳ ನಿಮ್ಮ ಪರಿಶ್ರಮ ನಿಮ್ಮ ಮುಂದಿನ 25 ವರ್ಷಗಳನ್ನು ಪ್ರಕಾಶಿಸುತ್ತದೆ ಎಂದು ಹೇಳಿದರು.

ವಿಶ್ವಸ್ಥ ಮಂಡಳಿಯ ಸದಸ್ಯ ರಾಜೇಂದ್ರ ತೋಳಾರ್‌, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಜಿ.ಎಸ್‌.ಹೆಗ್ಡೆ, ಮತ್ತು ಪ್ರಾಧ್ಯಾಪಕರಾದ ಪ್ರೊ| ಅರುಣಾಚಲ ಮಯ್ಯ ಮತ್ತು ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥೆ ಅರ್ಚನಾ ಅರವಿಂದ್‌ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಚಾಲಕ ಸಂಪತ್‌ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾರ್ಥಿಗಳಾದ ಅಕ್ಷತಾ ವಿ. ಸ್ವಾಗತಿಸಿ, ಅಬುಲ್ಲಾ ಸುಬಾಸ್‌ ವಂದಿಸಿದರು.

Exit mobile version