ಕುಂದಾಪುರ: ಭಂಡಾರ್‌ಕಾರ್ಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ಆಯೋಜಿಸಿದ ನಾಲ್ಕು ದಿನಗಳ ಬಯಲು ರಂಗೋತ್ಸವ ಸಂಜೆ ಡಾ| ಎಚ್. ಶಾಂತಾರಾಮ್ ಬಯಲು ರಂಗಮಂಟಪದಲ್ಲಿ ಉದ್ಘಾಟನೆಗೊಂಡಿತು.
ಮಂಗಳೂರಿನ ಭೂಮಿಕ ರಂಗತಂಡದ ಕಲಾವಿದ ಲಕ್ಷ್ಮಣ ಮಲ್ಲೂರು ಉದ್ಘಾಟಿಸಿ ಮಾತನಾಡಿ, ರಂಗ ಅಧ್ಯಯನ ಕೇಂದ್ರದ ಮೂಲಕ ನಾಟಕಾಸಕ್ತರನ್ನು ರಂಗದತ್ತ ಸೆಳೆಯುವ ಮಹತ್ತರವಾದ ಪ್ರಯತ್ನವನ್ನು ಮಾಡಿದ್ದಾರೆ. ಇಲ್ಲಿನ ರಂಗ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರಲಿ ಎಂದರು.
ಸಮಾರಂಭದ ಅದ್ಯಕ್ಷತೆ ವಹಿಸಿದ್ದ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ| ಎಚ್. ಶಾಂತಾರಾಮ್ ಮಾತನಾತ್ತಾ ರಂಗ ಚಟುವಟಿಕೆಗಳನ್ನು ಉತ್ತೇಜಿಸಲು ಕಳೆದ ವರ್ಷ ರಾಷ್ಟ್ರೀಯ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ಭಾರಿ ಯಕ್ಷಗಾನ ಉತ್ಸವ ಹಮ್ಮಿಕೊಂಡಿದ್ದು, ಮೂರು ದಿನಗಳ ಕಾಲ ಬಡಗು, ತೆಂಕು ಹಾಗೂ ಬಡಾಬಡಗು ತಿಟ್ಟುಗಳ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಮೂಲಕ ಕುಂದಾಪುರದ ಸಾಂಸ್ಕೃತಿಕ ರಂಗ ಬೆಳಗಲಿದೆ ಎಂದರು.
ರಂಗ ಅಧ್ಯಯನ ಕೇಂದ್ರದ ಸಂಚಾಲಕ ವಸಂತ ಬನ್ನಾಡಿ ಉಪಸ್ಥಿತರಿದ್ದರು. ರಂಗ ಅಧ್ಯಯನ ಕೇಂದ್ರದ ಕಾರ್ಯದರ್ಶಿ ಡಾ|ಎನ್.ಪಿ. ನಾರಾಯಣ ಶೆಟ್ಟಿ ಸ್ವಾಗತಿಸಿದರು. ರಂಗ ಶಿಕ್ಷಣ ವಿನಾಯಕ ನಿರೂಪಿಸಿದರು.