Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ವಾಟ್ಸಾಪ್‌ನಲ್ಲಿ ಯಡಿಯೂರಪ್ಪ, ಶೋಭಾರ ಅವಹೇಳನ ಆರೋಪ. ಮೂವರು ಬಿಜೆಪಿ ನಾಯಕರ ವಿರುದ್ದ ದೂರು!

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರ ಕುರಿತು ಅವಹೇಳನ ಮಾಡಿ, ಅಶ್ಲೀಲ ಫೋಟೊಗಳನ್ನು ವಾಟ್ಸ್ಯಾಪ್ ಗ್ರೂಪಿನಲ್ಲಿ ರವಾನೆ ಮಾಡಿದ್ದಾರೆಂದು ಆರೋಪಿಸಿ ಕುಂದಾಪುರದ ಮೂವರು ಬಿಜೆಪಿ ಮುಖಂಡರ ವಿರುದ್ದ ಉಡುಪಿ ಸೆನ್ ಅಪರಾಧ ಪೋಲಿಸ್ ಠಾಣೆಯಲ್ಲಿ ಬಿಜೆಪಿ ಕುಂದಾಪುರ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ ಗುರುವಾರ ಪ್ರಕರಣ ದಾಖಲಾಗಿದೆ.

ಕುಂದಾಪುರ ಬಿಜೆಪಿಯ ಮೂವರು ಮುಖಂಡರುಗಳಾದ ರಾಜೇಶ್ ಕಾವೇರಿ, ಬಿ. ಕಿಶೋರ್ ಕುಮಾರ್ ಮತ್ತು ರಾಜು ಪೂಜಾರಿ ಎಂಬುವವರ ವಿರುದ್ದ ದೂರು ದಾಖಲಿಸಿದ್ದು, ಮೂವರು ಮುಖಂಡರು ನವೆಂಬರ್ ೧೩ ರ ಬಳಿಕ ಬಿ.ಜೆ.ಪಿ. ಕುಂದಾಪುರ ಎನ್ನುವ ಅನಧಿಕೃತ ವಾಟ್ಸ್‌ಪ್ ಗ್ರೂಪ್‌ನಲ್ಲಿ ಬಿ.ಜೆ.ಪಿ. ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಾಂದ್ಲಾಜೆ ಅವರ ಬಗ್ಗೆ ಅವಹೇಳನಕರವಾಗಿ ವಾಟ್ಸ್‌ಅಪ್ ನಲ್ಲಿ ಬರಹಗಳನ್ನು ಪೋಸ್ಟ್ ಮಾಡಿದ್ದು, ಅಲ್ಲದೇ ಅವರಿಬ್ಬರ ಫೋಟೋಗಳನ್ನು ಎಡಿಟ್ ಮಾಡಿ ಅಶ್ಲೀಲವಾಗಿ ವಾಟ್ಸ್‌ಅಪ್ ಮೂಲಕ ಕಳುಹಿಸಿ, ಮಾನ ಹಾನಿ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

Exit mobile version