Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಖಾಸಗಿ ಆಸ್ಪತ್ರೆಗೆ ಬಾರದ ವೈದ್ಯರು: ಸರಕಾರಿ ಆಸ್ಪತ್ರೆಯಲ್ಲಿ ಸೇವೆ ವ್ಯತ್ಯಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಖಾಸಗಿ ಆಸ್ಪತ್ರೆಗೆ ಹಾಜರಾಗದ ವೈದ್ಯರು, ಬಾಗಿಲು ತೆರೆಯದ ಆಸ್ಪತ್ರೆ ಔಷಧಾಲಯ. ಸರ್ಕಾರಿ ಆಸ್ಪತ್ರೆಗೆ ಮುಗಿಬಿದ್ದ ರೋಗಿಗಳು. ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ಪರದಾಡಿದ ರೋಗಿಗಳು. ವೈದ್ಯರ ರಜೆ ಬೋರ್ಡ್, ವೈದ್ಯರ ಕೊಠಡಿಯಲ್ಲಿ ಖಾಲಿ ಕುರ್ಚಿ! ಇದು ಖಾಸಗಿ ಆಸ್ಪತ್ರೆ ವೈದ್ಯರು ಪ್ರತಿಭಟನೆ ಹಿನ್ನೆಲೆಯಲ್ಲಿ ಕುಂದಾಪುರದಲ್ಲಿ ಗುರುವಾರ ಕಂಡು ಬಂದ ದೃಶ್ಯ.

ಖಾಸಗಿ ಆಸ್ಪತ್ರೆ ನಿಯಂತ್ರಣ ಮಸೂದೆ ವಿರೋಧಿಸಿ ಖಾಸಗಿ ವೈದ್ಯರು ಸೇವೆ ಸ್ಥಗಿತಗೊಳಿಸಿ ಹೂಡಿದ್ದ ಮುಷ್ಕರದಿಂದಾಗಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಅನಿವಾರ್ಯ ಕಾರಣಗಳಿಂದ ಗೈರು ಹಿನ್ನೆಲೆಯಲ್ಲಿ ಆರೋಗ್ಯ ಸೇವೆಯ ಬಗ್ಗೆ ಕುಂದಾಪ್ರ ಡಾಟ್ ಕಾಂ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಕಂಡುಬಂದ ಸಾಮಾನ್ಯ ದೃಶ್ಯ.

ಖಾಸಗಿ ವೈದ್ಯರ ಮುಷ್ಕರ ಹಿನ್ನೆಲೆಯಲ್ಲಿ ಸರ್ಕಾರ ಸರಕಾರಿ ಅಸ್ಪತ್ರೆ ವೈದ್ಯರು ಹಾಜರಾತಿ ಕಡ್ಡಾಯ ಎಂಬ ಆದೇಶ ಮಾಡಿದ್ದರೂ ವಿವಿಧ ಕಾರಣಗಳ ಹಿನ್ನೆಲೆಯಲ್ಲಿ ವೈದ್ಯರ ಅನುಪಸ್ಥಿತಿಯಲ್ಲಿ ರೋಗಿಗಳು ಪರದಾಡುವ ಸ್ಥಿತಿ ಕಂಡು ಬಂತು.

ಕುಂದಾಪುರ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ರಾಬರ್ಟ್ ರೆಬೊಲ್ಲೊ ಬೆಂಗಳೂರು ತರಬೇತಿಗೆ ತೆರಳಿದ್ದು, ೧೧ಕ್ಕೆ ಆಸ್ಪತ್ರಗೆ ಆಗಮಿಸಿದರೆ, ದಂತ ಚಿಕಿತ್ಸಕರ ಕೊಠಡಿ ಮುಂದೆ ಇಂದು ವೈದ್ಯಾಧಿಕಾರಿ ರಜೆಯಲ್ಲಿರುತ್ತಾರೆ ದಯವಿಟ್ಟು ಸಹಕರಿಸಿ ಎನ್ನುವ ಬೋರ್ಡ್ ತೂಗುಹಾಕಲಾಗಿತ್ತು. ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಜನಸಂಖ್ಯೆಯಲ್ಲಿ ರೊಗಿಗಳು ಬಂದಿದ್ದು, ಸ್ಕ್ಯಾನಿಂಗ್ ವೈದ್ಯರಿಲ್ಲದಿದ್ದು, ಒಂದೆರಡು ವಿಭಾಗದ ವೈದ್ಯರು ಅನಿವಾರ್ಯ ಕಾರಣದಿಂದ ರಜೆಯಲ್ಲಿ ತೆರಳಿರುವುದರಿಂದ ಚಿಕಿತ್ಸೆಗೆ ಬಂದ ರೋಗಿಗಳು ಸಂಕಷ್ಟ ಅನುಭವಿಸಿದರು.

ಚರ್ಮ ರೋಗದ ಚಿಕಿತ್ಸೆಗೆ ವಯಸ್ಸಾದ ಮಹಿಳೆಯೊಬ್ಬರು ಅಮಾಸೆಬಲಿನಿಂದ ಬಂದಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಬುಧವಾರ ಮಾತ್ರ ಚರ್ಮ ರೋಗ ವೈದ್ಯರ ಸೇವೆ ಲಭ್ಯವಿದ್ದು, ಇದು ಆ ಮಹಿಳೆಗೆ ತಿಳಿದಿಲ್ಲದ್ದರಿಂದ ಅವರು ಬೇರೆ ದಾರಿ ಕಾಣದೆ ಮನೆಗೆ ಮರಳಬೇಕಾಯಿತು.

ಕುಂದಾಪುರ ಪೇಟೆ ಖಾಸಗಿ ಆಸ್ಪತ್ರೆ ಹೊರರೋಗಿ ವಿಭಾಗ ಬಂದ್ ಮಾಡಲಾಗಿತ್ತು. ಹೊರ ರೋಗಿ ಚಿಕಿತ್ಸೆ ಸ್ಥಗಿತಗೊಂಡಿತ್ತು. ಬೇರೆ ಬೇರೆ ಕಡೆಯಿಂದ ಬಂದವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದ ಕಾರಣ ಸರಕಾರಿ ಆಸ್ಪತ್ರೆ ಕಡೆ ಮುಖ ಮಾಡಿದರು. ಹೆಸರು ನೋಂದಾವಣೆ ವಿಭಾಗದಲ್ಲೂ ಜನ ಸರತಿ ಸಾಲಿನಲ್ಲಿ ನಿಂತಿದ್ದರು. ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಏರುತ್ತಿದ್ದರೂ, ವೈದ್ಯರಿಗೆ ಅನಿವಾರ್ಯ ಕಾರಣಕ್ಕಾಗಿ ರಜೆ, ಬೆಂಗಳೂರಿನಲ್ಲಿ ತರಬೇತಿಗೆ ಹೋಗಿದ್ದು, ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗಲು ಕಾರಣ.

ಶಸ್ತ್ರಚಿಕಿತ್ಸಾ ವಿಭಾಗ, ಮಕ್ಕಳ ಚಿಕಿತ್ಸಾ ವಿಭಾಗ, ಹೊರರೋಗಿ ವಿಭಾಗ, ತುರ್ತುಚಿಕಿತ್ಸಾ ವಿಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿತ್ತು. ವೈದ್ಯರು,ಖಾಸಗಿ ಆಸ್ಪತ್ರೆಎದುರುವೈದ್ಯರ ಸೇವೆ ಇಲ್ಲ ಎನ್ನುವ ಫಲಕಕಂಡು ಬಂತು.

ಸೇವೆಗೆ ನೆರವಾದ ಗಂಗೊಳ್ಳಿ ಹೆಲ್ಪ್‌ಲೈನ್:
ಖಾಸಗಿ ವೈದ್ಯರ ಮುಷ್ಕರದಿಂದಾಗಿ ಜನ ಸಾಮಾನ್ಯರಿಗೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಗಂಗೊಳ್ಳಿ 24×7 ಹೆಲ್ಪ್‌ಲೈನ್ ಬುಧವಾರದಿಂದ ಉಚಿತ ಸೇವಾ ಅರಂಭಿಸಿದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸಗೆ ಉಡುಪಿ ಅಜ್ಜರಕಾಡು ಆಸ್ಪತ್ರಗೆ ಹೋಗಬೇಕಾದ ರೋಗಿಗಳಿಗೆ ಅಂಬುಲೆನ್ಸ್ ಸೇವೆ ಉಚಿತವಾಗಿದ್ದು, ಪಾರ್ಶ್ವವಾಯು ಪೀಟಿತ ರೋಗಯೊಬ್ಬರು ಅಂಬುಲೆನ್ಸ್ ಮೂಲಕ ಅಜ್ಜರಕಾಡು ಆಸ್ಪತ್ರೆಗೆ ಸಾಗಿಸಲಾಯಿತು. ತುರ್ತು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ರೋಗಿಗಳನ್ನು ಉಚಿತವಾಗಿ ತನ್ನ ಆಂಬುಲೆನ್ಸ್ ಮೂಲಕ ಸಾಗಿಸುತಿದ್ದ ಇಬ್ರಾಹಿಂ ಗಂಗೊಳ್ಳಿ ಉಚಿತ ಸೇವೆ ಮೂಲಕ ಮಾನವೀಯತೆ ತೋರಿದ್ದಾರೆ. ಇವರಿಗೆ ಗಂಗೊಳ್ಳಿ ಅದಿಲ್, ಅಕ್ಷಯ್ ಖಾರ್ವಿ ಸಹಕಾರ ನೀಡುತ್ತಿದ್ದರು.

  

Exit mobile version