Kundapra.com ಕುಂದಾಪ್ರ ಡಾಟ್ ಕಾಂ

ಕಾನೂನು ತಿಳುವಳಿಕೆ ಮೂಲಕ ಉತ್ತಮ ಸಮಾಜ ನಿರ್ಮಾಣ: ಲೋಕಾಯುಕ್ತ ವಿಶ್ವನಾಥ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಸಮಾನತೆ ಕಮ್ಮಿ ಮಾಡಿ, ಸಮಾನತೆ ಮೂಲಕ ಎಲ್ಲರಿಗೂ ಉತ್ತಮ ಜೀವನ ಕಾನೂನು ಮೂಲಕ ಸಿಗಬೇಕು. ಕೋರ್ಟಿಗೆ ಹೋಗುವವರ ಸಂಖ್ಯೆಗೆ ಅನುಗುಣವಾಗಿ ನ್ಯಾಯಾಲಯ, ನ್ಯಾದೀಶರು ಇಲ್ಲದಿದ್ದರಿಂದ ನ್ಯಾಯದಾನ ವಿಳಂಬ. ಉತ್ತಮ ಕಾನೂನು ವ್ಯವಸ್ಥೆಯಿಂದ ಸ್ವಾಸ್ಥ್ಯ ಸಮಾಜ ಹಾಗೂ ದೇಶಕಟ್ಟಲು ಸಾಧ್ಯ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಹೇಳಿದರು.

ಕುಂದಾಪುರ ಕಾನೂನು ಸೇವೆಗಳ ಪ್ರಾಧಿಕಾರಿ, ವಕೀಲರ ಸಂಘ, ಅಭಿಯೋಗ ಇಲಾಖೆ, ತಾಲೂಕ್ ಆಡಳಿತ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜೆಸಿಐ ಆಶ್ರಯದಲ್ಲಿ ಕುಂದಾಪುರ ನ್ಯಾಯಾಲಯ ವಠಾರದಲ್ಲಿ ನಡೆದ ಕಾನೂನು ಅಭಿಯಾನ ಸಮಾರೋಪದಲ್ಲಿ ಮಾತನಾಡುತ್ತಿದ್ದರು.

ನ್ಯಾಯಾಲಯದಲ್ಲಿ ಸಾಕಷ್ಟು ದೂರುಗಳು ಬಾಕಿಯುದ್ದು, ಅದರ ವಿಲೇವಾರಿಗೆ ಬೇಕಾಗುವಷ್ಟು ನ್ಯಾಯಾಲಯ, ನ್ಯಾಯಾದೀಶ, ಹಾಗೂ ಸಿಬ್ಬಂದಿ ಕೊರತೆಸಮಸ್ಯೆ ಪರಿಹಾರದ ದೃಷ್ಟಿಯಲ್ಲಿ ಸರ್ಕಾರ ಕಾನೂನು ಪ್ರಾಧಿಕಾರದ ಮೂಲಕ ದೂರುಗಳ ವಿಲೇವಾರಿ ಮಾಡುವ ಪ್ರಯತ್ನ ಮಾಡುತ್ತಿದೆ. ಲೋಕಾಯುಕ್ತ ಹಾಗೂ ಕಾನೂನು ಪ್ರಾಧಿಕಾರ ಜತೆಜತೆಯಾಗಿ ಹೆಚ್ಚಿನ ಹಾಕಬೇಕು ಎಂದು ಸಲಹೆ ಮಾಡಿದರು.

ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾದೀಶ ವೆಂಕಟೇಶ ನಾಯಕ್ ಟಿ. ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾದೀಶ ಪ್ರಕಾಶ್ ಖಂಡೇರಿ, ವಕೀಲರ ಸಂಘ ಪ್ರಧಾನ ಕಾರ‍್ಯದರ್ಶಿ ರವೀಶ್ಚಂದ್ರ ಶೆಟ್ಟಿ ಇದ್ದರು.

ಕುಂದಾಪುರ ವಕೀಲರ ಸಂಘ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಸ್ವಾಗತಿಸಿದರು. ಹಿರಿಯ ವಕೀಲೆ ಶ್ಯಾಮಲಾ ಭಂಡಾರಿ ನಿರೂಪಿಸಿದರು. ವಕೀಲೆ ಚಂದ್ರಿಕಾ ಪ್ರಾರ್ಥಿಸಿದರು. ಕಾನೂನು ಕಾರ‍್ಯಗಾರ ಹಿನ್ನೆಲೆಯಲ್ಲಿ ನಡೆದ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಕೀಲರ ಸಂಘ ಸದಸ್ಯೆಯರಿಂದ ಸಾಂಸ್ಕೃತಿ ಕಾರ‍್ಯಕ್ರಮ ಹಾಗೂ ವಿದ್ಯಾರ್ಥಿಗಳಿಂದ ಪ್ರಹಸನ ನಡೆಯಿತು.

Exit mobile version