Kundapra.com ಕುಂದಾಪ್ರ ಡಾಟ್ ಕಾಂ

ಚಿಕಾಗೋದ ಎರಡೂವರೆ ನಿಮಿಷದ ಭಾಷಣದಿಂದ ಹಿಂದೂ ಧರ್ಮದ ಮಹತ್ವ ಜಗತ್ತಿಗೆ ತಿಳಿಯಿತು: ಧರ್ಮವೃತಾನಂದ ಸ್ವಾಮೀಜಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜನ್ಮ ಶತಾಬ್ದಿ, ಸಿಲ್ವರ್ ಜೂಬಲಿ, ಗೋಲ್ಡನ್ ಜೂಬಲಿ ಆಚರಣೆ ನಡೆಯೋದು ಸಹಜ. ಆದರೆ ಒಬ್ಬ ವ್ಯಕ್ತಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ೧೨೫ನೇ ವರ್ಷ ಆಚರಣೆ ಮಾಡಲಾಗುತ್ತದೆ! ಇದಕ್ಕೆ ಕಾರಣ ಚಿಕಾಗೋ ಭಾಷಣ. ವಿವೇಕಾನಂದರು ಓದಿದ್ದು ಮಾತ್ರ ಅಲ್ಲ ಅಮೂಲಾಗ್ರ ಅಧ್ಯಯನದ ಮೂಲಕ ಭಾರತವನ್ನು ಅರಿತುಕೊಂಡರು. ಒಮ್ಮೆ ವಿವಾಕಾನಂದ ಹುಟ್ಟಿರದಿದ್ದರೆ ಎಂಬ ಕಲ್ಪನೆಯೇ ಭಯ ಹುಟ್ಟಿಸುತ್ತದೆ. ಭಾರತೀಯ ಸಂಸ್ಕೃತಿ, ಧರ್ಮ ಜೀವಂತವಾಗಿದೆ ಎಂದರೆ ಅದಕ್ಕೆ ಕಾರಣ ಸ್ವಾಮಿ ವಿವೇಕಾನಂದರು ಎಂದು ಮಂಗಳೂರು ಶ್ರೀ ರಾಮಕೃಷ್ಣ ಮಠ ಧರ್ಮವೃತಾನಂದ ಸ್ವಾಮೀಜಿ ಹೇಳಿದರು.

ಕುಂದಾಪುರ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ಯುವ ಬ್ರಿಗೇಡ್ ಕುಂದಾಪುರ ಹಮ್ಮಿಕೊಂಡ ಸ್ವಾಮಿ ವಿವೇಕಾನಂದ ಸಿಡಿಲ ಭಾಷಣಕ್ಕೆ ೧೨೫ ’ಮತ್ತೊಮೆ ದಿಗ್ವಿಜಯ’ ಕಾರ‍್ಯಕ್ರಮ ಉದ್ಘಾಟಿಸಿ ಮಾಡತಾಡುತ್ತಿದ್ದರು. ನಮ್ಮ ಧರ್ಮವೇ ಶ್ರೇಷ್ಠ ಎಂದು ವಿಶ್ವಕ್ಕೆ ತೋರಿಸುವ ಹಿನ್ನೆಲೆಯಲ್ಲಿ ನಡೆದ ಚಿಕಾಗೋ ಸರ್ಮಧರ್ಮ ಸಮ್ಮೇಳನದಲ್ಲಿ ವಿವೇಕಾನಂದರ ಭಾಗವಹಿಸದಿದ್ದರೆ ಏನಾಗುತ್ತಿತ್ತು ಎನೋದನ್ನ ಉಹಿಸುವುದು ಕಷ್ಟ. ಕೇವಲ ಎರಡೂವರೆ ನಿಮಿಷ ಮಾಡಿದ ಭಾಷಣದಲ್ಲಿ ಹಿಂದೂ ಧರ್ಮ ಸಂಸ್ಕೃತಿ ಶ್ರೇಷ್ಟ ಎಂದು ವಿಶ್ವಕ್ಕೆ ತೋರಿಸಿಕೊಟ್ಟಿದ್ದರಿಂದ ವಿದೇಶಿಯರು ಭಾರತ ನೋಡುವ ಸ್ಥಿತಿ ಬದಲಾಯಿತು. ಭಾಷಣದ ಆರಂಭವೇ ಎಲ್ಲರನ್ನು ಮಂತ್ರಮಗ್ನರನ್ನಾಗಿಸಿದ ವಿವೇಕವಾಣಿ ಸರ್ವಕಾಲಿಕ ಶ್ರೇಷ್ಠ ಸಂತ ಎಂದರು.

ಚಿಕಾಗೋ ಸಮ್ಮೇಳನಕ್ಕೂ ಮುನ್ನಾ ಅಮೆರಿಕಾದಲ್ಲಿ ಭಾರತದ ಬಗ್ಗೆ ಕೀಳರಿಮೆ, ದರಿದ್ರ ಹಾವಾಡಿರ ದೇಶ ಎಂಬ ಕೀಳರಿಮೆ ಇತ್ತು. ವಿವೇಕಾನಂzರ ಭಾಷಣದಿಂದ ಭಾರತೀಯ ಹಿಂದೂ ಧರ್ಮ ಶ್ರೇಷ್ಟ ಎಂದು ನಿರೂಪಿಸುವ ಜತೆ ಭಾರತದ ಮೇಲಿದ್ದ ತಪ್ಪು ಕಲ್ಪನೆ ದೂರಮಾಡಿದ್ದು, ಇಡೀ ವಿಶ್ವವೇ ಭಾರತ ಕಡೆ ತಿರುಗಿ ನೋಡುವಂತೆ ಮಾಡಿತು ಎಂದು ಬಣ್ಣಿಸಿದರು.

ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಕಾಲೇಜು ಪ್ರಾಂಶುಪಾಲ ಪ್ರೊ. ದೋಮ ಚಂದ್ರಶೇಖರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿಭಾಗ ಕಾರ‍್ಯಕಾರಿಣಿ ಸದಸ್ಯ ಸುಬ್ರಹ್ಮಣ್ಯ ಹೊಳ್ಳ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಇದ್ದರು.

ಮತ್ತೊಮ್ಮೆ ದಿಗ್ವಿಜಯ ಕಾರ‍್ಯಕ್ರಮಕ್ಕೂ ಮುನ್ನಾ ಕುಂದಾಪುರದಲ್ಲಿ ವೈಭವದ ಶೋಭಾಯಾತ್ರೆ ನಡೆಯಿತು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಆಡಳಿತ ಮಂಡಳಿ ಮಾಜಿ ಮೊಕ್ತೇಸರ ಬಿ.ಎಂ.ಸುಕುಮಾರ್ ಶೆಟ್ಟಿ ಶ್ರೀ ಕುಂದೇಶ್ವರ ದೇವಸ್ಥಾನ ಮುಂಭಾಗ ಶೋಭಾಯಾತ್ರೆಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಶೋಭಾಯಾತ್ರೆ, ನಗರದ ಮುಖ್ಯರಸ್ತೆ ಮೂಲಕ ಪಾರಿಜಾತ ವೃತ್ತ ಬಳಸಿ ಶಾಸ್ತ್ರಿ ವೃತ್ತದ ಮೂಲಕ ಕಾರ‍್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿತು. ಸ್ವಾಮಿ ವಿವೇಕಾನಂದ ಪ್ರತಿಮೆ ಜೊತೆ ನೂರಾರು ಮಂದಿ ಘೋಷಣೆ ಕೂಗಿತ್ತಾ ಶೋಭಾಯಾತ್ರೆಯಲ್ಲಿ ಸಾಗಿಬಂದರು.

ಸರಿಯಾದ ದಿಕ್ಕು ದಿಶೆ ಜೀವನಕ್ಕೆ ಸ್ವಾಮಿ ವಿವಾಕಾನಂದ ಆದರ್ಶಗಳು ಅಳವಡಿಕೆ ಅನಿವಾರ್ಯವಾಗಿದ್ದು, ಪ್ರಸಕ್ತ ಜನಾಂಗವಲ್ಲದೆ ಮುಂದಿನ ಜನಾಂಗಕ್ಕೂ ವಿಕಾನಂದರ ಆದಶ ಗಳು ಅನಿವಾರ್ಯ. ವಿವೇಕಾನಂದ ಗ್ರಹಿಸುವುದು, ಅರಿಯುವುದು ಕಷ್ಟವಾದರೂ ಒಮ್ಮೆ ವಿವಾಕನಂದ ಅರ್ಥವಾದರೆ ಬದುಕಿಗೆ ಹೊಸ ಅರ್ಥ ಸಿಗುತ್ತದೆ. ಪರಿಶುದ್ಧ ಮನಸ್ಸಿನಿಂದ ವಿವೇಕಾನಂದ ಅರಿಯುವ ಪ್ರಯತ್ನ ಮಾಡಬೇಕು. ವಿವೇಕಾನಂದರ ಓದಿದಾಗಲೆಲ್ಲ ಹೊಸ ಹೊಸ ಅರ್ಥ ಸಿಗುತ್ತದೆ. ಒಮ್ಮೆ ಅರ್ಥವಾದರೆ ಬದುಕಿಗೆ ಹೊಸ ಅರ್ಥ ಸಿಗುತ್ತದೆ. ವಿವಾಕಾನಂದ ಭಾಷಣ ನೆನಪುಗಳ ಜತೆ ಅನುಕರಣೆ ಮೂಲಕ ನಮ್ಮತನ ಕಟ್ಟಿಕೊಳ್ಳಬೇಕು. – ದೋಮ ಚಂದ್ರಶೇಖರ್, ಪ್ರಾಂಶುಪಾಲರು, ಬಿಬಿ ಹೆಗ್ಡೆ ಕಾಲೇಜು ಕುಂದಾಪುರ

► ಸ್ವಾಮಿ ವಿವೇಕಾನಂದರ ಸಿಡಲ ಭಾಷಣದ ಮೂಲಕ ಇಂದಿಗೂ ಭಾರತದ ಶ್ರೇಷ್ಠತೆ ಉಳಿದಿದೆ: ಚಕ್ರವರ್ತಿ ಸೂಲಿಬೆಲೆ – http://kundapraa.com/?p=26878

Exit mobile version