Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರಿನಲ್ಲಿ ಡಿ.23-31 ರಂಗ ಸುರಭಿ 2017: ನಾಟಕೋತ್ಸವ & ಸಂವಾದ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ ಬೈಂದೂರು ಆಶ್ರಯದಲ್ಲಿ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನಾಡೋಜ ಏಣಗಿ ಬಾಳಪ್ಪ ಸಂಸ್ಮರಣೆಯ ರಂಗ ಸುರಭಿ 2017 ರಾಜ್ಯ ಮಟ್ಟದ ನಾಟಕೋತ್ಸವವು ಡಿಸೆಂಬರ್ 23ರಿಂದ ಡಿಸೆಂಬರ್ 31ರ ವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ಬೈಂದೂರಿನ ಶ್ರೀ ಶಾರದಾ ವೇದಿಕೆ ಜರುಗಿದೆ ಎಂದು ಸುರಭಿ ರಿ. ಬೈಂದೂರು ಇದರ ನಿರ್ದೇಶಕ ಸುಧಾಕರ ಪಿ. ಬೈಂದೂರು ತಿಳಿಸಿದರು.
ಬೈಂದೂರಿನಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಾಟಕೋತ್ಸವದ ವಿವರ ನೀಡಿದರು.

ಡಿಸೆಂಬರ್23 ಶನಿವಾರ ಭೂಮಿಕಾ ಹಾರಾಡಿ ಪ್ರಸ್ತುತಿಯ ನಾಟಕ ’ಮದುವೆ ಹೆಣ್ಣು’ ರಚನೆ ಡಾ. ಎಚ್. ಎಸ್ ಶಿವಪ್ರಕಾಶ್, ನಿರ್ದೇಶನ: ರೋಹಿತ್ ಎಸ್. ಬೈಕಾಡಿ, ಡಿಸೆಂಬರ್24 ಭಾನುವಾರ ಚಿತ್ತಾರ ಬೆಂಗಳೂರು ಪ್ರಸ್ತುತಿಯ ನಾಟಕ ’ಸಂಜೆ ಹಾಡು’ ರಚನೆ ಹಾಗೂ ನಿರ್ದೇಶನ ರಾಜೇಂದ್ರ ಕಾತಂತ್ ಬೆಂಗಳೂರು, ಡಿಸೆಂಬರ್25 ಸೋಮವಾರ ರಂಗಸೌರಭ ಬೆಂಗಳೂರು ಪ್ರಸ್ತುತಿಯ ನಾಟಕ ’ಮಾವಿನಗುಡಿ ಕಾಲೋನಿ’ ರಚನೆ ಹಾಗೂ ನಿರ್ದೇಶನ: ಶಂಕರ ಗಣೇಶ್, ಡಿಸೆಂಬರ್26 ಮಂಗಳವಾರ ನಟನಾ ಮೈಸೂರು ಪ್ರಸ್ತುತಿಯ ನಾಟಕ ’ಬಹುಮುಖಿ’ ರಚನೆ: ವಿವೇಕ್ ಶ್ಯಾನುಭೋಗ್, ನಿರ್ದೇಶನ ಮೇಘ ಸಮೀರ, ಡಿಸೆಂಬರ್27 ಬುಧವಾರ ಥೇಮಾ ಬೆಂಗಳೂರು ಪ್ರಸ್ತುತಿಯ ನಾಟಕ ’ಅಂದ್ರೆ?’ ಸ್ನೇಹಾ ಕಪ್ಪಣ್ಣ ಹಾಗೂ ಸುಷ್ಮಾರವರ ಯೋಜಿತ ರಂಗಕೃತಿ, ನಿರ್ದೇಶನ: ಸುಷ್ಮಾ ಎಸ್.ವಿ ಡಿಸೆಂಬರ್30 ಶನಿವಾರ ಕೆ.ವಿ ಸುಬ್ಬಣ್ಣ ರಂಗ ಸಮೂಹ ಹೆಗ್ಗೋಡು ಪ್ರಸ್ತುತಿಯ ನಾಟಕ ’ಸಂದೇಹ ಸಾಮ್ರಾಜ್ಯ’ ರಚನೆ: ವಾಮನರಾಯರು ನಿರ್ದೇಶನ: ಮಂಜುನಾಥ ಎಲ್ ಬಡಿಗೇರ ಡಿಸೆಂಬರ್31 ಭಾನುವಾರ ಸಂಗಮ ಕಲಾವಿದೆರ್ ಮಣಿಪಾಲ ಪ್ರಸ್ತುತಿಯ ನಾಟಕ ’ವಾಲಿವಧೆ’ ರಂಗರೂಪ ಹಾಗೂ ನಿರ್ದೇಶನ: ಗಣೇಶ್ ಎಮ್ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಡಿ. 31ರ ಭಾನುವಾರ ಬೆಳಿಗ್ಗೆ 9:30ಕ್ಕೆ ಪಡುವರಿ ಮಾವಿನಕುಳಿಯ ಸುರಭಿ ಕಲಾಗ್ರಾಮದಲ್ಲಿ ರಂಗಭೂಮಿಯ ವರ್ತಮಾನ-ಸವಾಲು-ಸಾಧ್ಯತೆ ವಿಷಯದ ಕುರಿತು ‘ರಂಗ ಸಂವಾದ’ ನಡೆಯಲಿದ್ದು ರಂಗ ನಿರ್ದೇಶಕ ಡಾ. ಶ್ರೀಪಾದ್ ಭಟ್ ಆಶಯ ನುಡಿಗಳನ್ನಡಲಿದ್ದಾರೆ. ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ರಂಗಕಲಾವಿದರು ಸಂವಾದದಲ್ಲಿ ಭಾಗವಹಿಸಲಿದ್ದಾರೆ.

ಡಿ.23ರಂದು ಖ್ಯಾತ ಚಲನಚಿತ್ರ ಹಾಗೂ ರಂಗಭೂಮಿ ನಟ ಮಂಡ್ಯ ರಮೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಡಾ. ಗಣೇಶ್ ಅಮಿನಗಡ ಏಣಗಿ ಬಾಳಪ್ಪ ಅವರ ಸಂಸ್ಕರಣ ಮಾಡಲಿದ್ದಾರೆ. ಹಿರಿಯ ಸಾಹಿತಿ ಯು. ಚಂದ್ರಶೇಖರ ಹೊಳ್ಳ ಅವರು ಅಧ್ಯಕ್ಷತೆ ವಹಿಸಿದ್ದಾರೆ. ರಂಗ ನಿರ್ದೇಶಕಿ ಅಭಿಲಾಷ ಹಂದೆ ಅವರನ್ನು ಸನ್ಮಾನಿಸಲಾಗುವುದು.

ಡಿ.24ರ ಸಂಜೆ ಸಾಹಿತಿ ಹಾಗೂ ರಂಗಭೂಮಿ ಕಲಾವಿದೆ ಮಮತಾ ಅರಸಿಕೆರೆ ದಿನದನುಡಿಗಳನ್ನಾಡಲಿದ್ದು, ರಾಜ್ಯ ಕೆಎಸ್‌ಆರ್‌ಟಿಸಿ ಅಧ್ಯಕ್ಷ, ಶಾಸಕ ಕೆ. ಗೋಪಾಲ ಪೂಜಾರಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಹೆಚ್. ಆರ್ ಸ್ವಾಮಿ ಅರಸಿಕೆರೆ ಇವರನ್ನು ಸನ್ಮಾನಿಸಲಾಗುವುದು.

ಡಿ. 25ರಂದು ಕರ್ನಾಟಕ ರಂಗ ಪರಿಷತ್ ಕಾರ್ಯದರ್ಶಿ ಸಂಸ ಸುರೇಶ್ ದಿನದ ನುಡಿಗಳನ್ನಾಡಲಿದ್ದಾರೆ. ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು ರಂಗ ಸಂಘಟಕ ಆರ್.ಪಿ ಉಮಾಶಂಕರ್ ಬೆಂಗಳೂರು ಅವರನ್ನು ಸನ್ಮಾನಿಲಾಗುವುದು.

ಡಿ.26ರಂದು ರಂಗ ನಿರ್ದೇಶಕ ಸದಾನಂದ ಬೈಂದೂರು ದಿನದ ನುಡಿಗಳನ್ನಾಡಲಿದ್ದು, ನಿವೃತ್ತ ಐಎಫ್‌ಎಸ್ ಬಿ. ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ರಂಗ ಸಂಘಟಕ ಜಿ.ವಿ ಕಾರಂತ್ ಕೋಣಿ ಅವರನ್ನು ಸನ್ಮಾನಿಲಾಗುವುದು.

ಡಿ.27ರಂದು ಭರತನಾಟ್ಯ ಹಾಗೂ ರಂಗಭೂಮಿ ಕಲಾವಿದೆ ವಿದೂಷಿ ಮಂಜುಳಾ ಸುಬ್ರಹ್ಮಣ್ಯ ದಿನದ ನುಡಿಗಳನ್ನಾಡಲಿದ್ದು, ಯಡ್ತರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ರಂಗ ತಂತ್ರಜ್ಞ ಮಹಾದೇವ ಸ್ವಾಮಿ ಎಸ್. ಬೆಂಗಳೂರು ಅವರನ್ನು ಸನ್ಮಾನಿಸಲಾಗುವುದು.

ಡಿ.30ರಂದು ಸಮುದಾಯ ಕುಂದಾಪುರದ ಅಧ್ಯಕ್ಷ ಉದಯ ಗಾಂವ್ಕರ್ ದಿನದ ನುಡಿಗಳನ್ನಾಡಲಿದ್ದು, ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ನೇಪಥ್ಯ ತಜ್ಞ ದಾಮೋದರ ನಾಯ್ಕ್ ಹೊನ್ನಾವರ ಅವರನ್ನು ಸನ್ಮಾನಿಸಲಾಗುವುದು.

ಡಿ.31ರಂದು ರಂಗ ನಿರ್ದೇಶಕ ಶ್ರೀಪಾದ್ ಭಟ್ ಸಿರಸಿ ದಿನದ ನುಡಿಗಳನ್ನಾಡಲಿದ್ದು, ಮಾಜಿ ಜಿ.ಪಂ ಅಧ್ಯಕ್ಷ ಎಸ್. ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದಾರೆ. ರಂಗ ನಿರ್ದೇಶಕ, ನೇಪಥ್ಯ ತಜ್ಞ ರಾಜು ಮಣಿಪಾಲ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸುರಭಿ ಬೈಂದೂರು ಅಧ್ಯಕ್ಷ ಶಿವರಾಮ ಕೊಠಾರಿ, ಕಾರ್ಯದರ್ಶಿ ಲಕ್ಷ್ಮಣ ವೈ ಕೊರಗ, ಸಲಹೆಗಾರ ತಿಮ್ಮಪ್ಪಯ್ಯ ಜಿ, ಯಸ್ಕೊರ್ಡ್ ಟ್ರಸ್ಟ್ ನಿರ್ದೇಶಕರಾದ ಕೃಷ್ಣಮೂರ್ತಿ ಉಡುಪ, ಗಣಪತಿ ಹೋಬಳಿದಾರ್, ರಂಗಸುರಭಿ ಪ್ರಚಾರ ಸಮಿತಿಯ ನಾಗರಾಜ ಪಿ. ಯಡ್ತರೆ ಮೊದಲಾದವರು ಉಪಸ್ಥಿತರಿದ್ದರು.

 

Exit mobile version