Kundapra.com ಕುಂದಾಪ್ರ ಡಾಟ್ ಕಾಂ

ಸಾಂಸ್ಕೃತಿಕ ಸಂಭ್ರಮ, ಪ್ರಶಸ್ತಿ ಪುರಸ್ಕಾರಗಳೊಂದಿಗೆ ‘ಕುಸುಮಾಂಜಲಿ-2017’ ಸಮಾಪನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕುಸುಮ ಫೌಂಡೇಶನ್ ನಾಗೂರು ಸಾರಥ್ಯದಲ್ಲಿ ಜರುಗುತ್ತಿರುವ ವಾರ್ಷಿಕ ಸಾಂಸ್ಕೃತಿಕ ಉತ್ಸವ ‘ಕುಸುಮಾಂಜಲಿ-2017’ ನಾಗೂರಿನಲ್ಲಿ ಅದ್ಧೂರಿಯಾಗಿ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸಿದರು.

ಎಸ್.ಡಿ.ಪಿ.ಟಿ. ಪ್ರಥಮ ದರ್ಜೆ ಕಾಲೇಜು ಕಟೀಲು ಇಲ್ಲಿನ ಪ್ರಾಶುಂಪಾಲರಾದ ಎಮ್. ಬಾಲಕೃಷ್ಣ ಶೆಟ್ಟಿ ಇವರು ದಿಕ್ಸೂಚಿ ಭಾಷಣ ಮಾಡಿ ಸಂಸ್ಕೃತಿ ಹಾಗೂ ಕಲೆಯ ಉಳಿಯುವಿಕೆಗೆ ಕುಸುಮ ಫೌಂಡೇಶನ್‌ನ ಕೊಡುಗೆಯನ್ನು ಶ್ಲಾಘಿಸಿದರು.

ಸಂಸ್ಥೆಯು ನಿಸ್ವಾರ್ಥ ಸಾಮಾಜಿಕ ಸೇವೆಗಾಗಿ ಕೊಡಮಾಡುವ ಪ್ರತಿಷ್ಠಿತ ‘ಕುಸುಮಶ್ರೀ’ ಪ್ರಶಸ್ತಿಯನ್ನು ಪ್ರೊ. ಎ.ವಿ. ನಾವಡ, ನಿವೃತ್ತ ಪ್ರಾಧ್ಯಾಪಕರು ಮತ್ತು ಡೀನ್ ಕನ್ನಡ ವಿಶ್ವವಿದ್ಯಾನಿಲಯ, ಹಂಪಿ ಹಾಗೂ ಡಾ. ಗಾಯತ್ರಿ ನಾವಡ, ಸಂಶೋಧಕರು ಮತ್ತು ವಿಮರ್ಶಕರು, ಮಂಗಳೂರು ದಂಪತಿಗಳಿಗೆ ಇವರು ಜಾನಪದ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಪರಿಗಣಿಸಿ ಪ್ರಧಾನ ಮಾಡಿದರು. ಅವರು ಮಾತನಾಡಿ ಜಾನಪದ ಕಲೆ ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ, ಈ ನಿಟ್ಟಿನಲ್ಲಿ ಕುಸುಮ ಸಂಸ್ಥೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ಕಾರ್ಯಕ್ರಮದ ಚಾನಲ್ ಪಾರ್ಟನರ್ ಮುಂಬೈನ ಶುಭಸಾಗರ್ ಗ್ರೂಪ್ ಆಫ್ ಹೋಟೆಲ್ಸ್ ಆಡಳಿತ ನಿರ್ದೇಶಕ ಲಕ್ಷ್ಮಣ ಪೂಜಾರಿ ಕುಸುಮ ಫೌಂಡೇಷನ್ ಸಂಸ್ಥೆಯ ಘಟಕವಾದ ‘ಬ್ಲೋಸಮ್’ ಸಂಗೀತ ನೃತ್ಯ ಶಾಲೆಯನ್ನು ಉದ್ಘಾಟಿಸಿ ಎಲ್ಲಾ ಗಾನಕುಸುಮ – 2017ರ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಿ ವಿಜೇತರಿಗೆ ಶುಭ ಹಾರೈಸಿದರು.

ಗಾನಕುಸುಮ ವಿಜೇತರಿಂದ ‘ಸಂಗೀತ ಸಂಧ್ಯಾ’ ನಡೆಯುದರೊಂದಿಗೆ ಕುಸುಮ ಫೌಂಡೇಷನ್ ದತ್ತು ಸ್ವೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗೂರು (ಕನ್ನಡ) ಇಲ್ಲಿನ ಪುಟಾಣಿಗಳಿಂದ ಹಾಗೂ ಅರೆಹೊಳೆ ಪ್ರತಿಷ್ಠಾನದ ‘ನಂದಗೋಕುಲ’ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಸಂಸ್ಥೆಯ ಮ್ಯಾನೆಜಿಂಗ್ ಟ್ರಸ್ಟಿ ನಳಿನ ಕುಮಾರ ಶೆಟ್ಟಿ ಸ್ವಾಗತಿಸಿ ಫೌಂಡೇಶನ್‌ನ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು. ಕುಸುಮಾಂಜಲಿಯ ನಿರ್ದೇಶಕಿ ರೇಷ್ಮಾ ಮತ್ತು ಸಂಸ್ಥೆಯ ರಾಧಿಕ ಹಾಗೂ ವಿದ್ಯಾ ಕಾರ್ಯಕ್ರಮ ಸಂಯೋಜಿಸಿದರು. ವಿಶನಾಥ ಶೆಟ್ಟಿ ಹಾಗೂ ಶ್ವೇತಾ ಭಟ್ಕಳ ಕಾರ್ಯಕ್ರಮ ನಿರೂಪಿಸಿದರು

Exit mobile version