Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಕ್ ಅಪಘಾತ: ವಿದ್ಯಾರ್ಥಿ ಮೃತ್ಯು

ಉಡುಪಿ: ಗೆಳತಿಯನ್ನು ಕೂರಿಸಿಕೊಂಡು ಎಂಐಟಿ ವಿದ್ಯಾರ್ಥಿ ಬೈಕಲ್ಲಿ ಹೋಗುತ್ತಿದ್ದಾಗ ರಸ್ತೆ ವಿಭಾಜಕ ಮತ್ತು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದು, ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ.

ಮಣಿಪಾಲ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದುಕೊಂಡು ಎಂಐಟಿಯಲ್ಲಿ ಕಲಿಯುತ್ತಿದ್ದ ಉತ್ತರ ಭಾರತದ ಉದಿತ್ ಜೈಸ್ವಾಲ್ (22) ಮೃತ ವಿದ್ಯಾರ್ಥಿ. ಆತನ ಗೆಳತಿ ವಿದ್ಯಾರ್ಥಿನಿ ನತಾಸ್ ಅಲಿಸಾ ಡಯಾಸ್ (22) ಗಂಭೀರ ಗಾಯಗೊಂಡವಳು. ಭಾನುವಾರ ಆಗಿದ್ದರಿಂದ ತರಗತಿಗೆ ರಜೆಯಾಗಿದ್ದು, ಸಂಜೆ ಹೊತ್ತಿಗೆ ಗೆಳತಿಯನ್ನು ಕೂರಿಸಿಕೊಂಡು ಮಣಿಪಾಲ ಟೈಗರ್ ಸರ್ಕಲ್‌ನಿಂದ ಉಡುಪಿ ಕಡೆಗೆ ಹೊರಟಿದ್ದಾರೆ. ಜಾಲಿರೈಡ್ ಮೂಡಿನಲ್ಲಿ ಅತಿವೇಗದಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಟೈಗರ್ ಸರ್ಕಲ್‌ನ ಸಮೀಪದಲ್ಲಿಯೇ ಡಿವೈಡರ್ ಮತ್ತು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಯುವಕನ ತಲೆ ಒಡೆದು ಹೋಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಯುವತಿ ಗಾಯಗೊಂಡು ಅರಚುತ್ತಿದ್ದು, ಕೂಡಲೇ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಯುವಕ ಅಷ್ಟೊತ್ತಿಗೆ ಮೃತಪಟ್ಟಿದ್ದಾನೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version