Kundapra.com ಕುಂದಾಪ್ರ ಡಾಟ್ ಕಾಂ

ತಾಲೂಕಿನ ಕೆಲವೆಡೆ ಮಳೆ ಆರ್ಭಟ

ಕುಂದಾಪುರ: ತಾಲೂಕಿನ ಮಲೆನಾಡು ಪ್ರಾಂತ್ಯದಲ್ಲಿ ಶನಿವಾರ ಮಧ್ಯಾಹ್ನ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಒಂದುವರೆ ತಾಸಿಗೂ ಮಿಕ್ಕಿ ಸುರಿದ ಭಾರಿ ಮಳೆಗೆ ಜನಜೀವನ ತತ್ತರಿಸಿದೆ. ಅಮಾಸೆಬೆಲು, ಹಾಲಾಡಿ, ಶಂಕರನಾರಾಯಣ, ಬೆಳ್ವೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆ ಸುರಿದಿದೆ. ಗಾಳಿಮಳೆಯ ಅಬ್ಬರಕ್ಕೆ ಮರಮಟ್ಟುಗಳು ಧರೆಗುರುಳಿದ್ದು ವಿದ್ಯುತ್, ದೂರವಾಣಿ ಸಂಪರ್ಕ ಕಡಿತಗೊಂಡಿದೆ.

ಬಿರುಗಾಳಿ ಅಬ್ಬರ-ಸಂಚಾರ ಮೊಟಕು: ಹಾಲಾಡಿ ಸಮೀಪದ ಮುಂಡಕೋಡು ಸನಿಹದ ಬಾಕುಡಿಹೊಲ ರಕ್ಷಿತಾರಣ್ಯ ವ್ಯಾಪ್ತಿಯ ಪ್ರದೇಶಗಳಲ್ಲಿ ಬಿರುಗಾಳಿ ಅಬ್ಬರದಿಂದ ಬೆಲೆಬಾಳುವ ಮರಗಿಡಗಳು ಅರ್ಧಕ್ಕೆ ಮುರಿದು ಬಿದ್ದಿವೆ. ಹಾಲಾಡಿ-ಮುಂಡಕೋಡು ನಡುವೆ ಭಾರಿ ಗಾತ್ರದ ಮರ ರಸ್ತೆಗೆ ಉರುಳಿದ್ದರಿಂದ ಹಾಲಾಡಿ-ಅಮಾಸೆಬೆಲು ನಡುವೆ ಕೆಲಹೊತ್ತು ಸಂಚಾರ ಮೊಟಕುಗೊಂಡಿತು. ಮುಂಡಕೋಡು, ಬಾಕುಡಿಹೊಲ, ಹೊರ್ಲಿಜೆಡ್ಡು ಪ್ರದೇಶ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದಲ್ಲಿ ಮರಗಳು ಮುರಿದುಬಿದ್ದಿವೆ.

ಅಲ್ಲಿ ಮಳೆ ಇಲ್ಲಿ ಬಿರುಬಿಸಿಲು : ತಾಲೂಕಿನ ಮಲೆನಾಡು ಪ್ರಾಂತ್ಯದಲ್ಲಿ ವ್ಯಾಪಕ ಮಳೆಯಾಗಿದ್ದರೆ ಕರಾವಳಿಯಲ್ಲಿನ ಬಿರುಬಿಸಿಲು ನಾಗರಿಕರನ್ನು ಕಂಗೆಡಿಸುವಂತೆ ಮಾಡಿದೆ.

Exit mobile version