ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೀಚ್ ಉತ್ಸವದ ಮೂಲಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಸ ದಾರಿ ಕಂಡುಕೊಂಡಂತಾಗಿದೆ. ಪ್ರಪಂಚದ ಸಣ್ಣ ಸಣ್ಣ ದೇಶಗಳ ದೊಡ್ಡ ವ್ಯವಹಾರ ಪ್ರವಾಸೋದ್ಯಮವೇ ಆಗಿದೆ. ಪ್ರವಾಸಿ ತಾಣಗಳ ಅಭಿವೃದ್ಧಿಯಾದಂತೆ ಸ್ಥಳೀಯ ಜೀವನ ಮಟ್ಟವೂ ಹೆಚ್ಚುತ್ತದೆ, ಸರಕಾರ ಆ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸುತ್ತದೆ ಎಂದು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಬೈಂದೂರು ಸೋಮೇಶ್ವರ ಬೀಚಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಬೈಂದೂರು ಬೀಚ್ ಉತ್ಸವ 2017ರ ಸಮಾರೋಪ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಮುಖಪುಟ ಅನಾವರಣಗೊಳಿಸಿ ಮಾತನಾಡಿದರು. ಪ್ರವಾಸಿ ತಾಣಗಳ ಅಭಿವೃದ್ಧಿಯೊಂದಿಗೆ ಪರಿಸರದ ಜನರಿಗೂ ವಿಪುಲವಾದ ಉದ್ಯೋಗವಕಾಶಗಳು ತೆರೆದುಕೊಳ್ಳುತ್ತವೆ. ಹೋಂಸ್ಟೇ ಮಾಡಿಕೊಂಡರೇ ಪ್ರವಾಸೋದ್ಯಮ ಇಲಾಖೆಯೇ ನೆರವು ನೀಡುತ್ತದೆ. ಪ್ರವಾಸೋದ್ಯಮ ಬೆಳೆದಂತೆಲ್ಲ ಆರ್ಥಿಕ ಸುಧಾರಣೆಯಾಗುವುದಲ್ಲದೇ ಊರಿನ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣಗೊಳ್ಳುತ್ತದೆ ಎಂದರು.
ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಓಂಗಣೇಶ್ ಉಪ್ಪುಂದ ಸಮಾರೋಪ ನುಡಿಗಳನ್ನಾಡಿದರು. ಬೈಂದೂರು ಹೊಲಿಕ್ರಾಸ್ ಚರ್ಚ್ ರೆವರೆಂಡ್ ಫಾದರ್ ರೋನಾಲ್ಡ್ ಮಿರಾಂದ, ಜಿಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯ ಪುಪ್ಪರಾಜ ಶೆಟ್ಟಿ, ಮಾಜಿ ಜಿಪಂ ಸದಸ್ಯ ಎಸ್. ಮದನಕುಮಾರ್, ಯಡ್ತರೆ ವ್ಯ.ಸೇ.ಸ ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ, ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಚನ್ನಕೇಶವ ಉಪಾಧ್ಯಾಯ, ಉಪ್ಪುಂದ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸೋಮಶೇಖರ ಖಾರ್ವಿ, ಸೌಖ್ಯ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಿಯಾಜ್ ಅಹಮ್ಮದ್, ಬೈಂದೂರು ವಲಯ ಜನಜಾಗೃತಿ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ, ಮಾನವ ಹಕ್ಕು ಜಾಗೃತಿ ಸಮಿತಿ ಅಧ್ಯಕ್ಷ ನವೀನಚಂದ್ರ ಉಪ್ಪುಂದ, ಬೆಸುಗೆ ಫೌಂಡೇಶನ್ ಉಪಾಧ್ಯಕ್ಷ ಜಯಾನಂದ ಹೋಬಳಿದಾರ್ ಮೊದಲಾದವರು ಉಪಸ್ಥಿತರಿದ್ದರು.
ಬೆಸುಗೆ ಫೌಂಡೇಶನ್ ರಿ. ಅಧ್ಯಕ್ಷ ವೆಂಕಟೇಶ ಕಿಣಿ ಸ್ವಾಗತಿಸಿದರು. ಪಡುವರಿ ಪಂಚಾಯತ್ ಉಪಾಧ್ಯಕ್ಷ ಸದಾಶಿವ ಡಿ. ಪಡುವರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೆಸುಗೆ ಫೌಂಡೇಶನ್ ಕಾರ್ಯದರ್ಶಿ ಗಣಪತಿ ಹೋಬಳಿದಾರ್ ವಂದಿಸಿದರು. ಸದಸ್ಯ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.