Kundapra.com ಕುಂದಾಪ್ರ ಡಾಟ್ ಕಾಂ

ಹಿಂದೂ ಯುವಕರ ಕಗ್ಗೊಲೆಗೆ ರಾಜ್ಯ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ: ಆರ್‌ಎಸ್ಸೆಸ್ ಪ್ರಮುಖ್ ಸುಬ್ರಹ್ಮಣ್ಯ ಹೊಳ್ಳ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ರಾಜ್ಯದಲ್ಲಿ ಹಿಂದೂಗಳ ಹತ್ಯೆ ನಿರಂತರ ನಡೆಯುತ್ತಿದೆ. ದೀಪಕ್ ರಾವ್ ಸೇರಿ ಇಪ್ಪತ್ತೊಂದು ಹಿಂದೂ ಯುವಕರ ಭರ್ಬರ ಹತ್ಯೆ ಮಾಡಲಾಗಿದೆ. ಪಿಎಫ್‌ಐ, ಭಯೋತ್ಪಾದಕರ ರಕ್ಷಣೆಗೆ ರಾಜ್ಯ ಸರ್ಕಾರ ನಿಂತಿದೆ. ಕಾಂಗ್ರೆಸ್ ಸರ್ಕಾರ ತಮ್ಮ ಪರವಾಗಿದೆ ಎಂಬ ನಿಲುವಲ್ಲಿ ಪಿಎಫ್‌ಐ ಬೆಂಬಲಿತರು ಹತ್ಯೆ ಮಾಡುತ್ತಿದ್ದಾರೆ. ಹಿಂದೂ ಯುವಕರ ಹತ್ಯೆ ಹತ್ತಿಕ್ಕಲು ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲಾವಾಗಿದ್ದು, ಇದಕ್ಕೆ ತಕ್ಕ ಬೆಲೆ ಎಂದು ಎಚ್ಚರಿಸಿದವರು ಆರ್‌ಎಸ್ಸೆಸ್ ದಕ್ಷಣ ಪ್ರಾಂತ ಸಂಚಾಲಕ ಸುಬ್ರಹ್ಮಣ್ಯ ಹೊಳ್ಳ.

ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಹಿಂದೂಪರ ಸಂಘಟನೆಗಳ ಸುರತ್ಕಲ್ ದೀಪಕ್ ರಾವ್ ಕೊಲೆ ಖಂಡಿಸಿ ನಡೆಸಿದ ರಸ್ತೆ ರೋಖೋದಲ್ಲಿ ಮಾತನಾಡಿ, ಪಿಎಫ್‌ಐ ಸಂಘಟನೆ ನಿಶೇಧ ಮಾಡುವಂತೆ ಒತ್ತಾಯಿಸಿದರೂ ಸಿದ್ದರಾಮಯ್ಯ ಕಿವುಡಾಗಿದ್ದಾರೆ. ವಿವಿಧ ಅಪರಾಧಗಳಲ್ಲಿ ಭಾಗಿಯಾದ ೧೬೦ಕ್ಕೂ ಮಿಕ್ಕ ಜನರ ಮೇಲಿದ್ದ ಕೇಸ್ ಹಿಂದಕ್ಕೆ ಪಡೆಯುವ ಮೂಲಕ ರಾಜ್ಯ ಸರ್ಕಾರ ಹಿಂದೂ ಯುವಕರ ಕೊಲೆಗೆ ದಾರಿ ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಹಿಂದೂ ಯುವಕರ ಹಾಗೂ ಹಿಂದೂ ಧರ್ಮ ನಾಶಮಾಡಲು ಮುಂದಾಗಿದ್ದು, ಧರ್ಮ ಮುರಿಯುವ ಪ್ರಯತ್ನ ಮಾಡುತ್ತಿದೆ. ಹಿಂದೂಗಳ ಹತ್ಯೆ ಖಂಡಿಸಿ ಈಗ ನಡೆಯುತ್ತಿರುವ ಪ್ರತಿಭಟನೆ ಓಂಕಾರವಾಗಿದ್ದು, ಮುಂದೆ ಹಿಂದೂ ಸಂಘಟನೆಗಳು ಹೂಂಕರಸಲಿವೆ. ಇದಕ್ಕೂ ರಾಜ್ಯ ಸರ್ಕಾರ ಬಗ್ಗದಿದ್ದರೆ, ರಾಜ್ಯಾದ್ಯಂತ ದೊಟ್ಟಮಟ್ಟದ ಪ್ರತಿಭಟನೆ ಮೂಲಕ ತಕ್ಕೆ ಉತ್ತರ ನೀಡಲು ಹಿಂದೂ ಸಮಾಜ ಸಿದ್ದವಿದೆ ಎಂದು ಅವರು ಎಚ್ಚರಿಸಿದರು.

ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್ ಬಿ, ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ, ಯುವ ಮೋರ್ಚಾ ಅಧ್ಯಕ್ಷ ಮಹೇಂದ್ರ ಪೂಜಾರಿ, ಮೀನುಗಾರಿಕಾ ಪ್ರಕೋಷ್ಟ ಅಧ್ಯಕ್ಷ ಸದಾನಂದ ಬಳ್ಕೂರು, ಪ್ರಧಾನ ಕಾರ‍್ಯದರ್ಶಿ ಭಾಸ್ಕರ ಬಿಲ್ಲವ, ಬಜರಂಗ ದಳ ಪ್ರಮುಖ ಗಿರೀಶ್ ಕುಂದಾಪುರ, ಪುರಸಭೆ ಸದಸ್ಯ ಮೋಹನದಾಸ್ ಶೆಣೈ, ಶಂಕರ ಅಂಕದಕಟ್ಟೆ, ಪ್ರದೀಪ್ ಸಂಗಮ್, ಸುನೀಲ್ ಹೇರಿಕುದ್ರು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಂಧನ ಬಿಡುಗಡೆ:
ದೀಪಕ್ ಕೊಲೆ ಖಂಡಿಸಿ ಕುಂದಾಪುರ ಶಾಸ್ತ್ರಿ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ-೬೬ರಲ್ಲಿ ರಸ್ತೆ ರೋಖೋ ನಡೆಸಲಾಯಿತು. ರಸ್ತೆ ರೋಖೊ ನಡೆಸಿದ್ದರಿಂದ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಬಾಕಿಯಾಯಿತು. ಪ್ರತಿಭಟನೆ ನಡೆಸಿದ ಸಂಘಟನೆ ಮುಖಂಡರನ್ನು ಪೊಲೀಸರ ಬಂಧಿಸಿ, ನಂತರ ಬಿಡುಗಡೆ ಮಾಡಿದರು. ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್.ನಾಯ್ಕ್, ಸಂಚಾರಿ ಠಾಣೆ ಎಸ್ಸೈ ಸುಬ್ಬಣ್ಣ, ಕ್ರೈಮ್ ಬ್ರಾಂಚ್ ಇನ್ಸ್‌ಪೆಕ್ಟರ್ ದೇವರಾಜ, ಕಂಡ್ಲೂರು ಗ್ರಾಮಾಂತರ ಠಾಣೆ ಎಸ್ಸೈ ಶ್ರೀಧರ ನಾಯ್ಕ್ ಹಾಗೂ ಪೊಲೀಸ್ ಸಿಬ್ಬಂದಿ ಬಿಗು ಪೊಲೀಸ್ ಬಂದೋಬಸ್ತ್ ನಡೆಸಿದರು.

 

Exit mobile version