ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಡೇರಹೋಬಳಿ ಗೆಳೆಯರು ಆಯೋಜಿಸಿದ ವಾರ್ಡ್ ಟ್ರೋಫಿ-೨೦೧೭, ಕುಂದಾಪುರದ ಗೋಲ್ಡನ್ ಮಿಲ್ಲರ್ ಪ್ರಶಸ್ತಿ ಹಾಗೂ ೨೨,೨೨೨/ ಸಾವಿರ ರೂ, ನಗದು ಪಡೆಯಿತು.
ಫೈನಲ್ ಪಂದ್ಯಾಟದಲ್ಲಿ ಮದ್ದುಗುಡ್ಡೆ ಫ್ರೆಂಡ್ಸ್ ವಿರುದ್ಧ ೧೨ ರನ್‌ಗಳ ವಿಜಯ ದಾಖಲಿಸುವ ಮೂಲಕ ಪ್ರಶಸ್ತಿ ಪಡೆಯಿತು. ಮದ್ದುಗುಡ್ಡೆ ಫ್ರೆಂಡ್ಸ್ ದ್ವಿತೀಯ ಪ್ರಶಸ್ತಿ ಸಹಿತ ೧೧,೧೧೧/ ನಗದು ಪಡೆಯಿತು.
ವೈಯಕ್ತಿಕ ಪ್ರಶಸ್ತಿ ಉತ್ತಮ ದಾಂಡಿಗ ರಾಘವೇಂದ್ರ (ಗೋಲ್ಡನ್ ಮಿಲ್ಲರ್) ಉತ್ತಮ ಎಸೆತಗಾರ ವೇಣು (ಗೋಲ್ಡನ್ ಮಿಲ್ಲರ್), ಉತ್ತಮ ಗೂಟರಕ್ಷಕ ಯೋಗೀಶ (ಗೋಲ್ಡನ್ ಮಿಲ್ಲರ್), ಫೈನಲ್ ಪಂದ್ಯಾಟದ ಪಂದ್ಯಶ್ರೇಷ್ಠ ನಿತೇಶ (ಗೋಲ್ಡನ್ ಮಿಲ್ಲರ್) ಸರಣಿ ಶ್ರೇಷ್ಠ ಪ್ರಶಸ್ತಿ ವಿಕ್ಕಿ (ಮದ್ದುಗುಡ್ಡೆ ಫ್ರೆಂಡ್ಸ್), ವೈಯಕ್ತಿಕ ಪ್ರಶಸ್ತಿ ಪಡೆದರು. ಹಾಗೂ ಇದೇ ಸಂದರ್ಭದಲ್ಲಿ ಚಕ್ರವರ್ತಿಯ ಹಿರಿಯ ಆಟಗಾರ ಹಾಗೂ ಜೆ.ಡಿ.ಯು. ನ ಜಿಲ್ಲಾ ಅಧ್ಯಕ್ಷರಾದ ರಾಜೀವ ಕೋಟ್ಯಾನ ಅವರಿಗೆ ಸನ್ಮಾನಿಸಲಾಯಿತು.
ಆರ್ಥಿಕ ನೆರವು:
ವಿಶೇಷವಾಗಿ ಪ್ರಥಮ ಪ್ರಶಸ್ತಿ ಪಡೆದ ಗೋಲ್ಡನ್ ಮಿಲ್ಲರ್ ಕುಂದಾಪುರ ತಂಡ ಜಯಸಿದ ೨೨,೨೨೨/ ಹಾಗೂ ಕ್ರೀಡಾಂಗಣದಲ್ಲಿ ಕಲೆಕ್ಷನ್ ಮಾಡಿದ ೭೦೦೦/ ಹಣವನ್ನು ಕೆ.ಎಮ್.ಸಿ. ಮಣಿಪಾಲ ಆಸ್ಪತ್ರೆಯಲ್ಲಿ ಲಿಂಪೋ ಬ್ಲಾಸ್ಟಿಕ್ ಲುಕೇಮಿಯಾ (ರಕ್ತ ಕ್ಯಾನ್ಸರ್) ರೋಗ ನಿರ್ಣಯದಿಂದ ಬಳಲುತ್ತಿದ್ದ ಐದು ವರ್ಷದ ವಂಶಿಕಾ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ಜೆ.ಡಿ.ಯು. ಜಿಲ್ಲಾಧ್ಯಕ್ಷ ರಾಜೀವ ಕೋಟ್ಯಾನ, ಇಂಟೆಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ಜೆ.ಡಿ.ಎಸ್. ತಾಲೂಕು ಅಧ್ಯಕ್ಷ ತೆಕ್ಕಟ್ಟೆ ಪ್ರಕಾಶ ಶೆಟ್ಟಿ,ಕುಂದಾಪುರ ಕಲಾಕ್ಷೇತ್ರ ಅಧ್ಯಕ್ಷ ಕಿಶೋರ ಕುಮಾರ, ನಗರಾ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಕಾಸ ಹೆಗ್ಡೆ, ಸಿ.ಪಿ.ಎಂ. ನ ಕಾರ್ಯದರ್ಶಿ ನರಸಿಂಹ, ಕಾಳಾವರ ಗ್ರಾ.ಪಂ.ಸದಸ್ಯ ನಾಗರಾಜ ದೇವಾಡಿಗ, ಉದ್ಯಮಿ ನಾಗೇಶ ರಾವ್, ಗೋಲ್ಡನ್ ಮಿಲ್ಲರ್ ಸ್ಪೋರ್ಟ್ಸ್ ಕ್ಲಬ್ ಉಪಾಧ್ಯಕ್ಷ ಶೇಖರ ದೇವಾಡಿಗ, ಗೋಲ್ಡನ್ ಮಿಲ್ಲರ್ ಸ್ಪೋರ್ಟ್ಸ್ ಕ್ಲಬ್‌ನ ಕಾರ್ಯದರ್ಶಿ ಅಶೋಕ ಬಿ.ಟಿ ಆರ್ ಆಯೋಜಿಕರಾದ ಸಂತೋಷ ವಡೇರಹೋಬಳಿ, ನಿತೇಶ, ನಟರಾಜ, ರಾಘವೇಂದ್ರ, ಕಾರ್ತಿಕ, ಕಾರ್ತಿಕ ಪೂಜಾರಿ ಉಪಸ್ಥಿತರಿದ್ದರು.