Kundapra.com ಕುಂದಾಪ್ರ ಡಾಟ್ ಕಾಂ

ಗೋಪಾಲ ಪೂಜಾರಿ ಜನಪರ ಕಾಳಜಿಯ ಶಾಸಕ: ಸಿಎಂ ಸಿದ್ದರಾಮಯ್ಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕ್ಷೇತ್ರದ ಬಗ್ಗೆ ಸದಾ ಚಿಂತಿಸುವ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸುವ ಗೋಪಾಲ ಪೂಜಾರಿ ಅವರು ಕ್ರೀಯಾಶೀಲ ಹಾಗೂ ಜನಪರ ಕಾಳಜಿಯ ಶಾಸಕ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ಬೈಂದೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಮಾತನಾಡಿ ತಿಂಗಳಿಗೆ 3-4 ಭಾರಿಯಾದರೂ ನನ್ನನ್ನು ಭೇಟಿಯಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಿಪಾರಸ್ಸು ಪಡೆದುಕೊಂಡು ಹೋಗುತ್ತಾರೆ. 20-30 ಸಮಸ್ಯೆಗಳ ಪಟ್ಟಿಯನ್ನು ತಂದು ಸಹಿ ಹಾಕಿಸಿಕೊಂಡು ಹೋಗುತ್ತಾರೆ. ಕುಳಿತುಕೊಳ್ಳಿ ಎಂದರು ಕೇಳದೇ ಅಷ್ಟೂ ಕಡತಕ್ಕೆ ಸಹಿ ಹಾಕಿಸಿಕೊಳ್ಳುವ ತನಕವೂ ನಿಂತೇ ಇರುತ್ತಾರೆ. ಕ್ಷೇತ್ರದ ಅಭಿವೃದ್ಧಿಯ ವಿಚಾರ ಹೊರತುಪಡಿಸಿ ಬೇರೆ ಕಾರಣಕ್ಕೆ ಭೇಟಿಯಾದ ಸಂದರ್ಭವೇ ತನಗೆ ನೆನಪಿಲ್ಲ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಅವರ ಕಾರ್ಯವೈಖರಿಯನ್ನು ಸಿಎಂ ಶ್ಲಾಘಿಸಿದರು.

ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸಿಎಂಗೆ ಮನವಿ ಸಲ್ಲಿಸಿದರು. ಸನ್ಮಾನಿಸಿದರು.

ಸಂಪೂರ್ಣ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಿ:

 

Exit mobile version