Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದಲ್ಲಿ ಯುವಜಾಗೃತಿ ವಿದ್ಯಾರ್ಥಿ ಸಮಾವೇಶ: ವಿವೇಕಾನಂದರ ವಿಚಾರಧಾರೆ ಎಂದಿಗೂ ಪ್ರಸ್ತುತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಶಾಖೆ ಆಶ್ರಯದಲ್ಲಿ ಇಲ್ಲಿನ ಆರ್.ಎನ್. ಶೆಟ್ಟಿ ಭವನದಲ್ಲಿ ಸ್ವಾಮಿ ವಿವೇಕಾನಂದ 155ನೇ ಜನ್ಮದಿನದ ಅಂಗವಾಗಿ ಯುವಜಾಗೃತಿ ವಿದ್ಯಾರ್ಥಿ ಸಮಾವೇಶ ಜರುಗಿತು.

ಎಬಿವಿಪಿ ಕ್ಷೇತ್ರೀಯ ಸಹ ಸಂಘಟನಾ ಕಾರ‍್ಯದರ್ಶಿ ವಿನಯ ಬಿದರೆ ಮಾತನಾಡಿ ಲವ್ ಜಿಹಾದ್ ಸತ್ಯ. ನೆರೆಯ ಕೇರಳರಾಜ್ಯದಲ್ಲಿ 990ಯುವತಿಯರು ಲೌವ್‌ ಜಿಹಾದಿಗೆ ಬಲಿಯಾಗಿದ್ದು, ಅವರಲ್ಲಿ 960 ಯುವತಿಯರ ಕತೆ ಏನಾಯಿತು ಎನ್ನೋದು ಗೊತ್ತಿಲ್ಲ. ಐಸಿಸ್ ಸೇರಿದರಾ? ಭಯೋತ್ಪಾಕರ ವಶವಾದರಾ? ಮಾರಾಟ ಮಾಡಲಾಯಿತಾ ಎನ್ನೋದು ಇನ್ನೂ ನಿಗೂಢ. ಲವ್ ಜಿಹಾದ್ ಮೂಲಕ ಮತಾಂತರವಷ್ಟೇ ಅಲ್ಲಾ ರಾಷ್ಟ್ರಾಂತರ ಕೃತ್ಯ. ಮತಾಂತರಗೊಂಡವರು ಮಾತೃಭೂಮಿಗೆ ದ್ರೋಹ ಬಗೆಯುವ ಮಟ್ಟಕ್ಕೆ ಮೈಡ್‌ವಾಶ್ ಮಾಡಲಾಗುತ್ತದೆ ಎಂದರು.

ರಾಷ್ಟ್ರೀಯತೆ ಕೆಲಸ ಮಾಡುತ್ತಿರುವ ಸಂಘಟನೆಗಳಿಗೆ ಉಗ್ರಗಾಮಿ ಪಟ್ಟಕಟ್ಟುತ್ತಿದ್ದು, ಲವ್ ಜಿಹಾದ್ ಜಾಲದಿಂದ ಯುವತಿಯರ ರಕ್ಷಣೆ, ರಾಷ್ಟ್ರ ವಿರೋಧ ಭಯೋತ್ಪಾದಕ ಕೃತ್ಯ ವಿರುದ್ಧ ನಿರಂತರ ಹೋಡಾಡುತ್ತಿರುವ ಸಂಘಟನೆಗಳ ಕೇಸರಿ ಉಗ್ರರೆಂದರೆ ನಾವು ಹಿಂಜರಿಯಲಾರೆವು. ಭಾರತೀಯ ಸನಾತನ ಸಂಸ್ಕೃತಿ ರಕ್ಷಣೆU ನಾವು ಉಗ್ರಪಟ್ಟಕ್ಕೂ ಸಿದ್ದ ಎಂದು ಹೇಳಿದರು.

ಸ್ವಾಮಿ ವಿವೇಕಾನಂದ ಯಾವ ಸಮುದಾಯದ ವ್ಯಕ್ತಿಯಲ್ಲ. ೧೫೫ವರ್ಷದ ನಂತರವೂ ಎಲ್ಲಾ ಸಮುದಾಯ ಅವರ ನೆನಪು ಮಾಡಿಕೊಳ್ಳುತ್ತಿದೆ. ಯುವ ಸಮಾಜ ಅವರನ್ನು ಅನುಸರಿಸುತ್ತಿದೆ ಎಂದರೆ ಅದು ವಿವೇಕ ಶಕ್ತಿ. ಚಿಕಾಗೋ ಭಾಷಣದ ಮೂಲಕ ವಿದೇಶಿಗರಿಗೆ ಭಾರತ ಹಾಗೂ ಸನಾತನ ಧರ್ಮದ ಬಗ್ಗೆ ಇದ್ದ ಕೀಳರಿಮೆ ಕಳಚಿ ಬಿತ್ತು. ವಿವೇಕಾನಂದರಾಗಿ ಕೇವಲ ೫ವರ್ಷ ದೇಶ ಸಂಚಾರ ಮಾಡಿದರೂ ಅವರ ವಿಚಾರಧಾರೆ ಇಂದಿಗೂ ಪ್ರಸ್ತುತ ಎಂದರು.

ಉದ್ಯಮಿ ಗಿಳಿಯಾರು ರತ್ನಾಕರ ಶೆಟ್ಟಿ ಯುವ ಜಾಗೃತಿ ಸಮಾವೇಶ ಉದ್ಘಾಟಿಸಿದರು. ನ್ಯೂಡೆಲ್ಲಿ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಉಪಾಧ್ಯಕ್ಷ ಡಾ. ಜಯಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಭಾಗ ಸಂಚಾಲಕ ತೇಜಸ್‌ಎಸ್.ಎನ್ ಇದ್ದರು.

ಎಬಿವಿಪಿ ತಾಲೂಕು ಸಂಚಾಲಕ ವೈಭವ ಭಟ್ ಸ್ವಾಗತಿಸಿದರು.ಕುಂದಾಪುರ ಭಂಡಾರ್‌ಕಾರ‍್ಸ್‌ಕಾಲೇಜ್ ವಿದ್ಯಾರ್ಥಿನಿಯರಾದ ವಿನಯಾ ನಿರೂಪಿಸಿ, ಸಿಂಚನ ಹಾಗೂ ಅಶ್ವಿನ್ ಪ್ರಾರ್ಥಿಸಿದರು.

ಭವ್ಯ ಪುರ ಮೆರವಣಿಗೆ:
ಬೆಳಗ್ಗೆ ಕುಂದಾಪುರ ಪ್ರಮುಖ ರಸ್ತೆ ಕೇಸರಿ ಮಯ. ಯುವ ಜಾಗೃತಿ ಸಮಾವೇಶದ ಹಿನ್ನೆಲೆಯಲ್ಲಿ ನಗರವನ್ನು ಭಗವದ್ವಜ ಹಾಗೂ ಕೇಸರಿ ಬಟ್ಟಿಂಗ್ ಮೂಲಕ ಶೃಂಗರಿಸಲಾಗಿತ್ತು. ಬೆಳಗ್ಗೆ ೧೦ಕ್ಕೆ ಸರಿಯಾಗಿ ಕುಂದಾಪುರ ಶಾಸ್ತ್ರಿ ವೃತ್ತದಿಂದ ಸ್ವಾಮಿ ವಿವೇಕಾನಂದ ಬೃಹತ್ ಭಾವಚಿತ್ರ ತೆರೆದ ವಾಹನ ಮೂಲಕ ಮೆರವಣಿಗೆ ನಡೆಸಲಾಯಿತು. ಕುಂದಾಪುರ ಭಂಡಾರ್‌ಕಾರ್ ಕಾಲೇಜ್, ಡಾ.ಬಿ.ಬಿ.ಹೆಗ್ಡೆ ಕಾಲೇಜ್, ಕೋಟೇಶ್ವರ ವರದರಾಜ ಶೆಟ್ಟಿ ಪ್ರಥಮ ದರ್ಜೆ ಕಾಲೇಜ್, ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜ್ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮೆರವಿಗೆ ಮೂಲಕ ಕುಂದಾಪುರ ಮುಖ್ಯರಸ್ತೆಯಲ್ಲಿ ಸಾಗಿ ಸಭಾಭವನನಕ್ಕೆ ಅಗಮಿಸಿದರು. ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Exit mobile version