Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ತಾಲೂಕು ಅಂಗನವಾಡಿ ಕಾರ‍್ಯಕರ್ತೆಯರ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೆಲವು ಅಂಗನವಾಡಿಯಲ್ಲಿ ಶಿಕ್ಷಕಿಯರಿದ್ದರೆ ಸಹಾಯಕಿಯರಿಲ್ಲ, ಸಹಾಯಕಿಯರಿದ್ದರೆ ಶಿಕ್ಷಕಿಯಿಲ್ಲ. ಹಾಗಿದ್ದರೂ ಮಾತೃಪೂರ್ಣ ಯೋಜನೆ ಹೊರೆ ಹೊರಿಸಲಾಗಿದೆ. ಅಂಗೈಅಗಲದ ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಅಡುಗೆ ಮಾಡುವುದಾ? ಮಕ್ಕಳ ಕೂರಿಸುವುದಾ? ಗೋಡೋನ್ ಮಾಡೋದಾ, ಸಿಲೆಂಡರ್, ಒಲೆ ಇಡೋದಾ? ಏನಾದರೂ ಹೆಚ್ಚು ಕಮ್ಮಿಯಾದರೆ ನಾವು ತಲೆಕೊಡಬೇಕು. ಸರ್ಕಾರ ಬೇಡಿಕೆಗೆ ನಯಾಪೈಸೆ ಬೆಲೆ ಕೊಡದಿದ್ದರೂ, ದಿನಕ್ಕೊಂದು ಜವಾಬ್ದಾರಿ ಹೊರಿಸುವ ಮೂಲಕ ನಮ್ಮ ಜೀವನದೊಟ್ಟಿಗೆ ಚೆಲ್ಲಾಟವಾಡುತ್ತಿದೆ.

ವಿವಿಧ ಬೇಡಿಕೆ ಮುಂದಿಟ್ಟುಕೊಂಡು ತಾಲೂಕು ಅಂಗನವಾಡಿ ಕಾರ‍್ಯಕರ್ತೆಯರು ಹಾಗೂ ಸಹಾಯಕಿಯರ ಸಂಘ ಆಶ್ರಯದಲ್ಲಿ ನಡೆದ ಜಾಥಾ ಹಾಗೂ ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರು ತಮ್ಮ ಅಸಹಾಯಕತೆ ಹೊರ ಹಾಕಿದ್ದು ಹೀಗೆ.

ಅಂಗನವಾಡಿ ಸಿಬ್ಬಂದಿಗಳಿಗೆ ಕನಿಷ್ಠ 18 ಸಾವಿರ ಸಂಬಳ ಜಾರಿ ಮಾಡಬೇಕು ಎಂಬ ಬೇಡಿಕೆಗೆ ಸರ್ಕಾರ ಕಿವುಡಾದರೂ ಮಾತೃಪೂರ್ಣ ಯೋಜನೆ ಜವಾಬ್ದಾರಿ ನಮ್ಮ ತಲೆಗೆಕಟ್ಟಿದೆ. ಕೆಲ ಅಂಗನವಾಡಿಯಲ್ಲಿ ಸಹಾಯಕಿಯರೇ ಇಲ್ಲದೆ ಅಡುಗೆ ಕೆಲಸ ಕೂಡಾ ಶಿಕ್ಷಕಿ ಮೇಲೆ ಬೀಳುತ್ತದೆ. ಮಾತೃಪೂರ್ಣಯೋಜನೆ ಫಲಾನುಭವಿಗಳ ಕೂರಿಸಿ ಊಟ ಬಡಿಸಲುಕೊಠಡಿಯಿಲ್ಲದೆರಸ್ತೆ ಮೇಲೆ ಕೂರಿಸಿ ಊಟ ಬಡಿಸಬೇಕಾಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಕಾರ‍್ಯಕರ್ತೆಯರಿಗೆಒತ್ತಡ ಹಾಕಿ ಮಾತೃಪೂರ್ಣಯೋಜನೆ ಹೊರೆ ಹೊರಿಸದೆ, ಹಿಂದಿ ಇದ್ದ ಪದ್ದತಿಯಲ್ಲೇಗರ್ಭಿಣಿಯರಿಗೆಆಹಾರ ಪೂರೈಸುವ ವ್ಯವಸ್ಥೆ ಮಾಡಬೇಕು.ತಕ್ಷಣಅಂಗನವಾಡಿ ಕನಿಷ್ಠ ವೇತನ ೧೮ ಸಾವಿರಕ್ಕೆಏರಿಸಬೇಕುಎಂದುಒತ್ತಾಯಿಸಲಾಯಿತು.

ಈಗಾಗಲೇ ನಿವೃತ್ತರಾದ ಹಾಗೂ ನಿವೃತ್ತಿಆಗಲಿರುವ ಸಿಬ್ಬಂದಿಗೆ ಕನಿಷ್ಟ ೩ ಸಾವಿರ ಮಾಸಿಕ ಪಿಂಚಣಿ ನೀಡಬೇಕು.ಗೋವಾ ಮಾಧರಿಯಲ್ಲಿಅಂಗನವಾಡಿ ಸಿಬ್ಬಂದಿಗೆ ಸೇವಾ ಅವಧಿಆಧಾರದ ಮೇಲೆ ವೇತನ ಹೆಚ್ಚಳ ಮಾಡಬೇಕು.ಸಾದಿಲ್ವಾರು ವೆಚ್ಚಮಕ್ಕಳ ಗಣತಿಆಧಾರದಲ್ಲಿ ಹೆಚ್ಚಳ ಮಾಡುವಂತೆ ಆಗ್ರಹಿಸಿದರು.

ಆನಾರೋಗ್ಯ ಪೀಡಿತಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿಗೆ ಸ್ವಯಂ ನಿವೃತ್ತಿ ಅವಕಾಶ ಕಲ್ಪಿಸಿ, ಸಿಗಬೇಕಾದ ಎಲ್ಲಾ ಸೌಲತ್ತು ನೀಡಬೇಕು.ಹಾಗೂ ಅಂಗನವಾಡಿ ಸಿಬ್ಬಂದಿಗಳ ಸಿ ಮತ್ತು ಡಿ ದರ್ಜೆ ನೌಕರರೆಂದು ಸರ್ಕಾರಘೋಷಣೆ ಮಾಡಬೇಕು.ಅಂಗನವಾಡಿ ಮಕ್ಕಳಿಗೂ ಬೇಸಿಗೆ ರಜೆ ನೀಡಬೇಕುಎಂದು ಒತ್ತಾಯಿಸಿದರು.

ನೂರಾರುಅಂಗನವಾಡಿಕಾರ‍್ಯಕರ್ತೆಯರು ಹಾಗೂ ಸಹಾಯಕಿಯರುಕುಂದಾಪುರ ಶಾಸ್ತ್ರಿ ವೃತ್ತದಿಂದಜಾಥಾ ಹೊರಟು ಮಿನಿ ವಿಧಾನ ಸೌಧ ಮುಂದೆ ಜಮಾಯಿಸಿ, ಘೋಷಣೆಕೂಗಿದರು.ತಮ್ಮ ಬೇಡಿಕೆಈಡೇರಿಸುವಂತೆ ಒತ್ತಾಯಿಸಿ ಕುಂದಾಪುರ ತಹಸೀಲ್ದಾರ್ ಜಿ.ಎಂ.ಬೋರ್ಕರ್‌ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಅಂಗನವಾಡಿಕಾರ‍್ಯಕರ್ತೆಯರ ಮತ್ತು ಸಹಾಯಕಿಯ ಸಂಘಅಧ್ಯಕ್ಷ ಉಷಾ, ತಾಲೂಕ್‌ಅಧ್ಯಕ್ಷೆಫಿಲೋಮಿನಾ, ಕಾರ‍್ಯದರ್ಶಿ ನಾಗರತ್ನಾ, ಖಜಾಂಚಿ ಸುಶೀಲಾ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಕುಂದಾಪುರ ಎಸ್ಸೈ ಹರೀಶ್‌ಆರ್.ನಾಯ್ಕ್ ಪೊಲೀಸ್ ಬಂದೊಬಸ್ತ್ ಏರ್ಪಡಿಸಿದ್ದರು.

 

Exit mobile version