Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಉಪವಿಭಾಗಾಧಿಕಾರಿಯಾಗಿ ಭೂಬಾಲನ್ ಅಧಿಕಾರ ಸ್ವೀಕಾರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಉಪವಿಭಾಗಾಧಿಕಾರಿಯಾಗಿ ಟಿ.ಭೂಬಾಲನ್ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಕುಂದಾಪುರ ಎಸಿಯಾಗಿದ್ದ ಶಿಲ್ಪಾ ನಾಗ್ ಸಿ.ಟಿ, ಪದೋನ್ನತಿಹೊಂದಿ ಹಾವೇರಿ ಜಿಲ್ಲಾ ಪಂಚಾಯಿತಿ ಸಿಇಓ ಆಗ ವರ್ಗಾವಣೆ ಗೊಂಡಿದ್ದರಿಂದ ಕುಂದಾಪುರ ಉಪವಿಭಾಗಾಧಿಕಾರಿ ಸ್ಥಾನ ತೆರವಾಗಿತ್ತು.

ತಮಿಳುನಾಡು ಮೂಲದ ಟಿ. ಭೂಬಾಲನ್ ೨೦೧೫ರ ಪ್ರಥಮ ಬ್ಯಾಚ್ ಬೀದರ್‌ನಲ್ಲಿ ತರಬೇತಿ ಪಡೆದಿದ್ದು, ಮೂರು ತಿಂಗಳು ಕೇಂದ್ರ ಸರ್ಕಾರ ಸಣ್ಣ ಕೈಗಾರಿಕೆ ಇಲಾಖೆಯಲ್ಲಿದ್ದರು. ನಂತರ ಹರ್ಪನಹಳ್ಳಿಯಲ್ಲಿ ಮೂರು ತಿಂಗಳು ಎಸಿಯಾಗಿದ್ದು, ಪುತ್ತೂರಿಗೆ ಸರ್ಕಾರ ವರ್ಗಮಾಡಿತ್ತು. ಚಾರ್ಜ್ ತೆಗೆದುಕೊಳ್ಳುವ ದಿನವೇ ಅವರ ಕುಂದಾಪುರ ಉಪವಿಭಾಗಾಧಿಕಾರಿಯಾಗಿ ವರ್ಗಾವಣೆ ಮಾಡಿತ್ತು.

ಅಧಿಕಾರ ಸ್ವೀಕರಿಸಿದ ಎಸಿ ಟಿ.ಭೂಬಾಲನ್ ಅವರನ್ನು ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಕೆ.ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಅಭಿನಂದಿಸಿದರು.

Exit mobile version