Site icon Kundapra.com ಕುಂದಾಪ್ರ ಡಾಟ್ ಕಾಂ

ಜ.23ರಿಂದ ಕತಾರ್‌ನಲ್ಲಿ ‘ಕುಂದಾಪುರ ಟ್ರೋಫಿ’ ಕ್ರಿಕೆಟ್ ಪಂದ್ಯಾಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕತಾರ್: ಕತಾರ್ನಲ್ಲಿರುವ ಕುಂದಾಪುರ ತಾಲೂಕು ಕ್ರಿಕೆಟರ್ಸ್ ನೇತೃತ್ವದಲ್ಲಿ ಕತಾರ್ ಫ್ರೀಲ್ಯಾನ್ಸ್ ಗ್ರೂಫ್ ಪ್ರಾಯೋಜಕತ್ವದಲ್ಲಿ ಇಲ್ಲಿನ ಒಲ್ಡ್ ಐಡಿಯಲ್ ಸ್ಕೂಲ್ ಗ್ರೌಂಡ್ನಲ್ಲಿ 23 ಜನವರಿ 2018ರ ಸಂಜೆ ’ಕುಂದಾಪುರ ಟ್ರೋಫಿ’ ಸಿಸಜ್ -2’ ಸೀಮಿತ ಓವರ್ಗಳ ಟೆನ್ಸಿಸ್ ಹಾರ್ಡ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ಗೆ ಚಾಲನೆ ದೊರೆಯಲಿದೆ.

ಕತಾರ್ನಲ್ಲಿ ನೆಲೆಸಿರುವ ಕುಂದಾಪುರ ತಾಲೂಕಿನ ಕ್ರಿಕೆಟ್ ಆಸಕ್ತರು ಒಟ್ಟು ಸೇರಿ ಕುಂದಾಪುರ ತಾಲೂಕು ಕ್ರಿಕೆಟರ್ಸ್ ಎಂಬ ಸಂಘಟನೆಯನ್ನು ಹುಟ್ಟುಹಾಕಿ ಕಳೆದ ವರ್ಷ ಮೊದಲ ಭಾರಿಗೆ ಕುಂದಾಪುರ ತಾಲೂಕು ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಈ ಭಾರಿ ಎರಡನೇ ಸೀಸನ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ. ಇಕ್ಬಾಲ್ ನಾವುಂದ ಕುಂದಾಪುರ ತಾಲೂಕು ಕ್ರಿಕೆಟರ್ಸ್ ಸಂಸ್ಥೆಯ ಅಧ್ಯಕ್ಷರಾಗಿದ್ದರೇ, ಇಂತಿಖಾಬ್ ಅಲಾಮ್ ಕಾರ್ಯದರ್ಶಿಯಾಗಿ, ಅಸ್ಮತ್ ಅಲಿ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜ.23 ರಿಂದ ಜ.26 ತನಕ ಪಂದ್ಯಾಟ ನಡೆಯಲಿದೆ. ಕತಾರ್‌ನಲ್ಲಿ  ನೆಲೆಸಿರುವ ಕರಾವಳಿಯ ಕ್ರಿಕೆಟ್ ಪ್ರೇಮಿಗಳು ಪಂದ್ಯಾಟ ವೀಕ್ಷಣೆಗೆ ಆಗಮಿಸುವಂತೆ ಸಂಘಟಕರು ಕೋರಿಕೊಂಡಿದ್ದಾರೆ.

 

Exit mobile version