ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ಐದು ವರ್ಷಗಳಿಂದ ಚಿತ್ತೂರು ಪರಿಸರದಲ್ಲಿ ಜನಪರ ಕಾರ್ಯ ಆಯೋಜಿಸುತ್ತ ಬಂದಿರುವ ಪ್ರೇರಣಾ ಯುವ ವೇದಿಕೆ (ರಿ) ನೈಕಂಬ್ಳಿ ಚಿತ್ತೂರು ಇದರ ಐದನೇ ವಾರ್ಷಿಕೋತ್ಸವ ಯಶಸ್ವಿಯಾಯಿತು.
ಪ್ರೇರಣಾ ಈ ಭಾಗದಲ್ಲಿ ಅತ್ಯುತ್ತಮ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿ ಯುವ ಜನತೆಗೆ ಪ್ರೇರಣೆಯಾಗಿದೆ ಎಂದು ತಾಲೂಕು ಪಂಚಾಯತ್ ಸದಸ್ಯರಾದ ಉದಯ ಜಿ ಪೂಜಾರಿ ಶುಭ ಹಾರೈಸಿದರು. ಅಶೋಕ ಶೆಟ್ಟಿ ಕೊಡ್ಲಾಡಿ ದಿಕ್ಸೂಚಿ ಭಾಷಣದಲ್ಲಿ ಮಾಡಿದರು. ವಂಡ್ಸೆ ಹೋಬಳಿ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಆಯೋಜಿಸಿದ ಪ್ರೇರಣಾ ಕೆಸರುಗದ್ದೆ ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯ ವಿಜೇತರಿಗೆ ಪ್ರಶಸ್ತಿ ಮೊತ್ತ ಮತ್ತು ಫಲಕ ವಿತರಿಸಲಾಯಿತು . ಪ್ರೇರಣಾ ಹಿರಿಯ ನಾಗರಿಕ ಸನ್ಮಾನ ಸುಕ್ರ ಅವರಿಗೆ, ಗುರು ಸಮ್ಮಾನ ಚಂದ್ರ ಶೆಟ್ಟಿ ಅವರಿಗೆ, ಸಾಧಕ ಸಮ್ಮಾನ ವಿಶ್ವನಾಥ ಗಾಣಿಗ ಬಾಳಿಕೆರೆ ಇವರಿಗೆ ಮಾಡಲಾಯಿತು.
ವೇದಿಕೆಯಲ್ಲಿ ಚಿತ್ತೂರು ಪಂಚಾಯತ್ ಅಧ್ಯಕ್ಷ ಸಂತೋಷ ಮಡಿವಾಳ , ಡಾ. ಅತುಲ್ ಕುಮಾರ ಶೆಟ್ಟಿ, ವೇದಿಕೆಯ ಗೌರವ ಅಧ್ಯಕರಾಮಚಂದ್ರ ಮಂಜರು, ಅಧ್ಯಕ್ಷ ಉದಯ ಆಚಾರ್ಯ ಉಪಸ್ಥಿತರಿದ್ದರು. ಅಣ್ಣಪ್ಪ ಶೆಟ್ಟಿ ವರದಿ ವಾಚಿಸಿದರು, ದಿನೇಶ ಶೆಟ್ಟಿ ನಿರೂಪಿಸಿ, ನಾಗೇಂದ್ರ ಆಚಾರ್ಯ ಧನ್ಯವಾದ ಸಲ್ಲಿಸಿದರು. ತದನಂತರ ನೈಕಂಬ್ಳಿ ಪುಟಾಣಿಗಳಿಂದ ಸಾಂಸ್ಕೃತಿಕ ವೈಭವ , ವೇದಿಕೆ ಸದಸ್ಯರಿಂದ ಸೃಜನ ಮೇದಿನಿ – ಮಹಿಷ ಮರ್ದಿನಿ ಯಕ್ಷಗಾನ ಜರುಗಿತು.