Kundapra.com ಕುಂದಾಪ್ರ ಡಾಟ್ ಕಾಂ

ಅವಧಿಗೂ ಮುನ್ನ ಶಾಸಕರ ರಾಜಿನಾಮೆಯಿಂದ ಕುಂದಾಪುರ ಕ್ಷೇತ್ರ ಅನಾಥ: ರಾಕೇಶ್ ಮಲ್ಲಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಜೆಟ್ ಮಂಡನೆಯ ಮಹತ್ವದ ಸಂದರ್ಭದಲ್ಲಿ ಕುಂದಾಪುರ ಕ್ಷೇತ್ರಕ್ಕೆ ಅಗತ್ಯದ ಅನುದಾನ ಮಂಜೂರು ಮಾಡಿಸುವ ಮತ್ತು ಕ್ಷೇತ್ರದ ಹಲವಾರು ಜ್ವಲಂತ ಸಮಸ್ಯೆ ಇತ್ಯರ್ಥ ಪಡಿಸುವ ಅಪೂರ್ವ ಅವಕಾಶ ಇದ್ದರೂ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕ್ಷೇತ್ರ ಅನಾಥಗೊಳಿಸಿದ್ದಾರೆ. ೨೨೪ ಶಾಸಕರಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಭಿವೃದ್ದಿ ಕೆಲಸಗಳಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ ಎಂದು ರಾಜ್ಯ ಇಂಟೆಕ್ ಅಧ್ಯಕ್ಷ ರಾಕೇಶ್ ಮಲ್ಲಿ ಆರೋಪಿದ್ದಾರೆ.

ಇಲ್ಲಿನ ಶಾಸ್ತ್ರೀ ವೃತ್ತದ ಬಳಿ ಅವಧಿಗೂ ಮುನ್ನ ರಾಜಿನಾಮೆ ಸಲ್ಲಿಸಿದ ಕುಂದಾಪುರ ನಿಕಟಪೂರ್ವ ಶಾಸಕರ ನಿಲವು ಖಂಡಿಸಿ ಕುಂದಾಪುರ, ಕೋಟ, ಹಾಗೂ ವಿವಿಧ ಮಹಿಲಾ ಮೋರ್ಚಾ, ಯುವ ಕಾಂಗ್ರೆಸ್ ಕಾರ‍್ಯಕರ್ತರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ ಕ್ಷೇತ್ರದ ಅಭಿವೃದ್ದಿಗಳ ಶಂಕುಸ್ಥಾಪನೆ, ವಿವಿಧಯೋಜನೆ, ಅಗತ್ಯವಿರುವ ದೊಡ್ಡ ದೊಡ್ಡ ಕಾನೂನುಗಳ ಅನುಷ್ಠಾನವಿರಬಹುದು ಇದರಲ್ಲಿ ಯಾವುದನ್ನೂ ಕುಂದಾಪುರ ಶಾಸಕರು ಮಾಡಿಲ್ಲ. ಕುಂದಾಪುರ ಶಾಸಕರ ಚಟುವಟಿಕೆಗಳು ಕಾಣಸಿಗುವುದಿಲ್ಲ ಎಂದು ಅವರು ಟೀಕಿಸಿದರು.

ಯುವ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಮಾತನಾಡಿ ಒಮ್ಮೆಚುನಾವಣೆಯಲ್ಲಿ ಗೆದ್ದು ಬಂದ ಶಾಸಕರು ಕ್ಷೇತ್ರದ ಸಮಸ್ತ ಮತದಾರರನ್ನು ಪ್ರತಿನಿಧಿಸುತ್ತಾರೆ. ಕ್ಷೇತ್ರದ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಕ್ಷೇತ್ರದ ಅಭಿವೃದ್ದಿ ಮಾಡುವುದು ಶಾಸಕರಾದವರ ಕರ್ತವ್ಯ. ಯಾವುದೇ ಪಕ್ಷದ ಮುಖ್ಯಮಂತ್ರಿ ಇದ್ದರೂ ಕೂಡ ಮುಖ್ಯಮಂತ್ರಿಗಳ ಮೇಜನ್ನು ಗುದ್ದಿ ತನ್ನ ಕ್ಷೇತ್ರಕ್ಕೆ ಅನುದಾನ ತರಿಸಿಕೊಳ್ಳಬೇಕು ಎಂದು ಅವರು ಶ್ರೀನಿವಾಸ ಶೆಟ್ಟಿಯವರು ಕ್ಷೇತ್ರದ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ಶಂಕರ್ ಕುಂದರ್, ಕಾಂಗ್ರೆಸ್ ಮುಂಖಡರಾದ ಬಿ. ಹಿರಿಯಣ್ಣ, ಯುವ ಕಾಂಗ್ರೆಸ್ ಇಚ್ಚಿತಾರ್ಥ ಶೆಟ್ಟಿ, ವಿಕಾಸ್ ಹೆಗ್ಡೆ, ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಐಟಿ ಸೆಲ್ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ, ಗಣೇಶ್ ಶೇರೆಗಾರ್, ಜಿ.ಪಂ ಸದಸ್ಯೆ ಜ್ಯೋತಿ ಅಚ್ಚುತ್, ಶ್ರೀಧರ್, ಪ್ರಭಾಕರ ಕೋಡಿ ಮುಂತಾದವರು ಇದ್ದರು.

 

Exit mobile version