‘ಪ್ಲೆಸೆಂಟ್’ 14 ವರ್ಷದ ಸಂಭ್ರಮ: ಫೆ.5ರಿಂದ ಫೆ.24ರವರೆಗೆ ವಿಶೇಷ ರಿಯಾಯತಿ ಮಾರಾಟ
ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ ಹಾಗೂ ಬ್ರಹ್ಮಾವರದಲ್ಲಿ ಗೃಹೋಪಯೋಗಿ ವಸ್ತುಗಳ ಮಾರಾಟದಲ್ಲಿ ಅಗ್ರಮಾನ್ಯ ಸ್ಥಾನವನ್ನು ಹೊಂದಿರುವ ಪ್ಲೆಸೆಂಟ್ ಗೃಹೋಪಕರಣ ಮಳಿಗೆ ಯಶಸ್ವಿ 14 ವರ್ಷಗಳನ್ನು ಪೂರೈಸಿ ೧೫ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಪ್ರತಿ ವರ್ಷದಂತೆ ಗ್ರಾಹಕರ ಅನುಕೂಲಕ್ಕಾಗಿ ವಿಶೇಷ ದರ ಕಡಿತದ ಮಾರಾಟ ಫೆ.05ರಿಂದ ಆರಂಭಗೊಂಡು ಫೆ.24ರವರೆಗೆ ನಡೆಯಲಿದೆ.
ಕುಂದಾಪುರದ ಶಾಸ್ತ್ರೀ ಸರ್ಕಲ್‌ನಲ್ಲಿರುವ ಹೆಬ್ಬಾರ್ ಕಾಂಪ್ಲೆಕ್ಸ್, ಬ್ರಹ್ಮಾವರದ ಮ್ಯಾಕ್ಸ್ ಸೆಂಟರ್‌ನಲ್ಲಿರುವ ಗೃಹೋಪಕರಣ ಮಳಿಗೆಗಳಲ್ಲಿ ವಾರ್ಷಿಕ ವಿಶೇಷ ರಿಯಾಯತಿ ಮಾರಾಟ ಜರುಗಲಿದೆ. ಕುಂದಾಪುರ ಹಾಗೂ ಬ್ರಹ್ಮಾವರದಲ್ಲಿ ವಿಶಾಲ, ವಿಶಿಷ್ಟ, ವಿಫುಲ ಸಂಗ್ರಹವನ್ನೊಳಗೊಂಡ ಪ್ಲೆಸೆಂಟ್ ಶೋರೂಂ ಅಂತರಾಷ್ಟ್ರೀಯ ಗುಣಮಟ್ಟದ ಬ್ರ್ಯಾಂಡ್‌ಗಳಾದ ಕುರ್ಲ್‌ಆನ್, ಜುವಾರಿ, ಡ್ಯುರೋಪ್ಲೆಕ್ಸ್, ಗೋಗ್ರೆಜ್, ನೀಲ್‌ಕಮಲ್, ಸುಪ್ರೀಮ್, ಶೀತಲ್ ಡ್ರೆಪ್, ಡಕ್ಕನ್, ಪ್ರೈಮಾ ಪ್ಲಾಸ್ಟಿಕ್ಸ್, ವೆಲ್ ಹೋಮ್, ವೀವೇಸ್, ಬ್ಲೈಂಡ್ಸ್, ನಯಾಸ, ಬಾಥ್ಲಾ ಇನ್ನಿತರ ಬ್ರ್ಯಾಂಡ್‌ಗಳ ವಿಶೇಷ ಸಂಗ್ರಹವನ್ನು ಹೊಂದಿರುವ ಏಕೈಕ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂದೇ ಸೂರಿನಡಿ ವೈವಿಧ್ಯಮಯ ಉತ್ತಮ ಶ್ರೇಣಿಯ ಬ್ರಾಂಡೆಡ್ ಪೀಠೋಪಕರಣಗಳು, ಪರದೆಗಳು, ಕಾರ್ಪೆಟ್‌ಗಳು, ಮ್ಯಾಟ್ಸ್, ಮ್ಯಾಟಿಂಗ್ಸ್, ಬೆಡ್ ಶೀಟ್ಸ್, ದಿವಾನ್ ಸೆಟ್ಸ್, ಬ್ಲಾಂಕೆಟ್ಸ್, ಸೋಫಾ ಸೆಟ್‌ಗಳು, ಕಾಟ್, ಡೈನಿಂಗ್ ಟೇಬಲ್, ಆಫೀಸ್/ಕಂಪ್ಯೂಟರ್ ಟೇಬಲ್ಸ್, ಟೀಪಾಯಿಗಳು, ಚಯರ‍್ಸ್, ಅಲ್ಮೇರಾ, ಕಾರ್ನರ್ ಸ್ಟ್ಯಾಂಡ್‌ಗಳು, ಇಸ್ತ್ರೀ ಸ್ಟ್ಯಾಂಡ್, ಕ್ಲಾತ್ ಸ್ಟ್ಯಾಂಡ್, ಡ್ರೈಯರ್ ಸ್ಟ್ಯಾಂಡ್, ಸ್ಲೀಪರ್ ಸೆಟ್ಸ್, ಪ್ರೊಟೆಕ್ಟರ್, ದಿವಾನ್ ಸೆಟ್ಸ್, ರಗ್ಸ್, ಸ್ಕೆಲ್ಲಪ್ಸ್, ಫಿಟ್ಟಿಂಗ್ಸ್, ಬ್ಲೆಂಡ್ಸ್, ಪಿಲ್ಲೋಸ್, ಕುಶನ್, ಲ್ಯಾಡರ್, ಮ್ಯಾಟ್ರೆಸ್, ಡಿಕೊರೇಟಿವ್ ಪ್ಲವರ‍್ಸ್, ಪ್ಲ್ಯಾಂಟ್ಸ್, ಪಾಟ್ಸ್ ಮುಂತಾದ ಗೃಹೋಪಯೋಗಿ ಸಾಮಾಗ್ರಿಗಳು ಶೇ.35ರವರೆಗೆ ರಿಯಾಯತಿ ದರದಲ್ಲಿ ಲಭ್ಯವಿದೆ.
ಗುಣಮಟ್ಟದ ಸೇವೆಗೆ ಹೆಸರಾದ ಸಂಸ್ಥೆ ವಾರ್ಷಿಕೋತ್ಸವದ ಅಂಗವಾಗಿ ಗ್ರಾಹಕರ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಿದ್ದು, ಬುಕ್ಕಿಂಗ್ ವ್ಯವಸ್ಥೆ, ಉಚಿತ ಸಾಗಾಟ, ಆಕರ್ಷಕ ಉಡುಗೊರೆ ನೀಡುತ್ತಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ವ್ಯವಹಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪಾಲುದಾರರಾದ ಇಬ್ರಾಹಿಂ ಸಾಹೇಬ್ ಕೋಟ, ಅಬ್ದುಲ್ ಬಶೀರ್ ಕೋಟ ಹಾಗೂ ಮಹಮ್ಮದ್ ಝಹ್ರಾನ್ ವಿನಂತಿಸಿದ್ದಾರೆ ಹಾಗೂ ೧೪ ವರ್ಷಗಳಿಂದ ಗ್ರಾಹಕರ ನಿರಂತರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.