Kundapra.com ಕುಂದಾಪ್ರ ಡಾಟ್ ಕಾಂ

ಕವಿತೆ ಸ್ಥೂಲದಿಂದ ಸೂಕ್ಷ್ಮದೆಡೆಗೆ ಸಾಗುತ್ತದೆ : ಡಾ.ಕಾತ್ಯಾಯಿನಿ ಕುಂಜಿಬೆಟ್ಟು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾವನಾತ್ಮಕ ನೆಲೆಗಳಸ್ಪೂರ್ತಿ ಮತ್ತು ಕಲ್ಪನೆಗಳಿಂದ ಕವಿತೆಗಳು ಹುಟ್ಟುತ್ತವೆ. ಕಾವ್ಯ ಮನಸ್ಸಿನ ಒಳಗಿನಿಂದ ಬರಬೇಕು. ಅದಕ್ಕೊಂದು ಸೌಂದರ್ಯ, ಲವಲವಿಕೆ ಜೀವನ ಪ್ರೀತಿ ಉತ್ಸಾಹವಿದೆ ಎಂದು ಲೇಖಕಿ ಮತ್ತು ಕವಯತ್ರಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅಭಿಪ್ರಾಯಪಟ್ಟರು.

ಅವರು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ.ಹೆಚ್. ಶಾಂತಾರಾಮ್ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆಯ ಆಶ್ರಯದಲ್ಲಿ ನಡೆದ ಕವಿಗೋಷ್ಠಿಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾವ್ಯ ಹುಟ್ಟುವುದಕ್ಕೆ ಪ್ರೇರಣೆಯೊಂದಿಗೆ ಆಸ್ವಾದಿಸುವ ಸೌಂದರ್ಯವೂ ಬೇಕು. ಅದಕ್ಕೆ ಸ್ಪಂದಿಸಿದಾಗ ಅಭೂತಪೂರ್ವವಾದ ಚೆಂದದ ಕವನಕೂಂದು ಜೀವಂತಿಕೆ ಬರುತ್ತದೆ. ಅದಕ್ಕೆ ಯಾವುದೇ ಕಟ್ಟುಪಾಡುಗಳಿಲ್ಲ. ಕವನಕ್ಕೆ ಅಂತಃಸ್ಸತ್ವ , ಉತ್ಸಾಹ ಮಾನವೀಯ ನೆಲೆಗಳ ಧ್ವನಿ ಇರಬೇಕು. ದ್ರಾವಣವನ್ನು ಬೇರೆ ಬೇರೆ ಪಾತ್ರೆಯಲ್ಲಿ ನೋಡುವಾಗ ಬೇರೆಯದೇ ಆಕೃತಿ ಪಡೆಯುವಂತೆ ಕವಿಯ ಮನಸಿನಾಳದ ರಚನೆಯಲ್ಲಿ ನಿಸರ್ಗ ವ್ಯಕ್ತಿ, ವಸ್ತು –ವಿಷಯಗಳು ಕವಿಯ ಅನುಭವಕ್ಕೆಪೂರಕವಾಗಿಬೇರೆಬೇರೆಆಕೃತಿಯನ್ನುಭಾವವನ್ನುಅರ್ಥವನ್ನುಪಡೆದುಕೊಳ್ಳುತ್ತದೆ. ಕಾವ್ಯದಧ್ವನಿಹೆಚ್ಚಿರುತ್ತದೆ. ಕಾವ್ಯಮೈಮರೆಯಲುಹೇಳುತ್ತದೆ. ಕಾವ್ಯಸಾಹಿತ್ಯದಲ್ಲಿಲಯ, ತಾಳ, ನಾದ, ಸ್ವರ, ಸಂಗೀತ,ಪ್ರೀತಿಎಲ್ಲವನ್ನೂಏಕಕಾಲದಲ್ಲಿಸೆರೆಹಿಡಿಯುವಸಾಮರ್ಥ್ಯವಿದೆಎಂದುಉದಾಹರಣೆಸಹಿತಹೇಳಿದರು.

ಕಾರ್ಯಕ್ರಮದಅಧ್ಯಕ್ಷತೆಯನ್ನುಕಾಲೇಜಿನಪ್ರಾಂಶುಪಾಲರಾದಡಾ.ಎನ್.ಪಿ.ನಾರಾಯಣಶೆಟ್ಟಿವಹಿಸಿದ್ದರು. ಕವಿಗೋಷ್ಠಿಯನ್ನು ವಿದ್ಯಾರ್ಥಿಗಳಾದ ಸವಿತಾ, ಪ್ರಜ್ವಲ್ಶೆಟ್ಟಿಗಾರ್, ಶ್ರಿರಾಜ್ಆಚಾರ್ಯ, ವಿನಯಾ, ರಶ್ಮಿತಾ, ವಿಧಾತ್ರಿಭಟ್, ಮಹಾಲಕ್ಷ್ಮಿ, ಧನುಶ್ರೀಅಲ್ಬಾಡಿ, ಕೀರ್ತಿ.ಎಸ್, ಕುರ್ಶಿದಾಬಾನುತಮ್ಮಸ್ವರಚಿತಕವನಗಳನ್ನುಉದ್ಘಾಟಿಸಿದರು. ಮತ್ತುತಮ್ಮಕವನಗಳನ್ನುವಾಚಿಸಿದರು.

ಈಸಂದರ್ಭದಲ್ಲಿವೇದಿಕೆಯಲ್ಲಿಡಾ.ಹೆಚ್. ಶಾಂತಾರಾಮ್ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆಯ ಸಂಚಾಲಕರಾದ ಡಾ.ರೇಖಾ ಬನ್ನಾಡಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದವಿಧಾತ್ರಿಭಟ್ಕಾರ್ಯಕ್ರಮನಿರ್ವಹಿಸಿದರು. ಸೌಮ್ಯಸ್ವಾಗತಿಸಿದರು. ಕೀರ್ತಿಎಸ್. ವಂದಿಸಿದರು.

 

Exit mobile version