Kundapra.com ಕುಂದಾಪ್ರ ಡಾಟ್ ಕಾಂ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಜಿಲ್ಲಾ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷರ 10 ಪ್ರಶ್ನೆಗಳು!

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಉಡುಪಿಗೆ ಆಗಮಿಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಮುಂದೆ ಉಡುಪಿ ಜಿಲ್ಲಾ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷ 10 ಪ್ರಶ್ನೆಗಳನ್ನಿಟ್ಟಿದ್ದು, ಅವುಗಳಿಗೆ ಉತ್ತರಿಸುವಂತೆ ಕೇಳಿಕೊಂಡಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್’ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಮಿತ್ ಷಾ ಅವರ ಪುತ್ರ ಜೈ ಷಾ ಅಕ್ರಮ ಆಸ್ತಿಯ ಗಳಿಕೆ ತನಿಕೆ ಯಾವಾಗ, ನೀರವ್ ಮೋದಿ 11,000 ಕೋಟಿ ರೂ. ಭಷ್ಟಾಚಾರದ ಬಗ್ಗೆ ತಮ್ಮ ನಿಲುವೇನು, ವಿಜಯ ಮಲ್ಯನ 9,000 ಕೋಟಿ ರೂ. ಭ್ರಷ್ಟಾಚಾರದ ಬಗ್ಗೆ ನಿಲುವೇನು, ಲೋಕಸಭಾ ಚುನಾವಣೆ ವೇಳೆ ತಾವೇ ನೀಡಿದ ಆಶ್ವಾಸನೆಯಂತೆ 2 ಲಕ್ಷ ಯುವಕರಿಗೆ ಉದ್ಯೋಗ ನೀಡುವ ಭರವಸೆ ಏನಾಯಿತು, ಗಡಿ ಹಾಗೂ ಸೈನಿಕರ ಸಮಸ್ಯೆಯ ಬಗ್ಗೆ ನೀಡಿರುವ ಆಶ್ವಾಸನೆ ಏನಾಯಿತು, ಲೋಕಪಾಲ್ ಬಿಲ್ ಅನುಷ್ಠಾನ ಮಾಡುವಲ್ಲಿ ವಿಫಲವಾದದ್ದೇಕೆ, ಉಡುಪಿ ಆಗುಂಬೆ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಬಗ್ಗೆ ನಿಲುವೇನು, ಮಂಗಳೂರು ಬೈಂದೂರು ರಾಷ್ಟ್ರೀಯ ಹೆದ್ದಾರಿ ವಿಳಂಬಕ್ಕೆ ಏನು ಹೇಳುತ್ತೀರಿ, ಉಡುಪಿ ಸಂಸದರು ಜನರಿಗೆ ಕಾಣಸಿಗುತ್ತಿಲ್ಲ ಏಕೆ ಎಂಬು ಪ್ರಶ್ನೆಗಳನ್ನೆತ್ತಿದ್ದು ಉತ್ತರಿಸುವಂತೆ ಕೇಳಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಐಟಿ ಸೆಲ್ ಜಿಲ್ಲಾಧ್ಯಕ್ಷ ವಿಶ್ವಾಸ್ ಶೆಟ್ಟಿ, ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷ ಹರೀಶ್ ನಾಯಕ್, ಜಿಲ್ಲಾ ಕಾಂಗ್ರೆಸ್ ಐಟಿ ಸೆಲ್ ಉಪಾಧ್ಯಕ್ಷ ದಿನೇಶ್ ನಾಯ್ಕ್ ಹಳ್ಳಿಹೊಳೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Exit mobile version