Kundapra.com ಕುಂದಾಪ್ರ ಡಾಟ್ ಕಾಂ

ಭಂಡಾರ್ಕಾರ್ಸ್ ಕಾಲೇಜಿನ ಆಶ್ರಯದಲ್ಲಿ ಫೆ.26ರಿಂದ ಬುಡಕಟ್ಟು ಸಮ್ಮೇಳನ ವಿಚಾರ ಸಂಕಿರಣ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ, ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಮಣಿಪಾಲ ಹಾಗೂ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕರಾವಳಿ ಕರ್ನಾಟಕದ ಬುಡಕಟ್ಟುಗಳು ಮತ್ತು ವರ್ತಮಾನ ಎಂಬ ವಿಷಯದ ಕುರಿತು ಎರಡು ದಿನಗಳ ಬುಡಕಟ್ಟು ಸಮ್ಮೇಳನ ಹಾಗೂ ವಿಚಾರ ಸಂರ್ಕೀಣ ಭಂಡಾರ್ಕಾರ್ಸ್ ಕಾಲೇಜಿನ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ಫೆ.26 ಹಾಗೂ 27ರಂದು ಜರುಗಲಿದೆ ಎಂದು ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ. ಹೆಚ್. ಶಾಂತಾರಾಮ್ ಅವರು ಹೇಳಿದರು.

ಅವರು ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ , ಬುಡಕಟ್ಟು ಜನಾಂಗದ ಸಂಸ್ಕೃತಿ, ಆಚರಣೆಯನ್ನು ತಿಳಿದುಕೊಳ್ಳುವುದಕ್ಕಾಗಿ ಕಾರ್ಯಕ್ರಮದ ಮೂಲಕ ವೇದಿಕೆ ನಿರ್ಮಿಸಿದ್ದು, ಬುಡಕಟ್ಟು ಸಮುದಾಯದ ಜನರ ಸಮಸ್ಯೆಗಳ ಪರಿಹಾರಕ್ಕೆ ದಾರಿ ಕಂಡುಕೊಳ್ಳುವ ಜೊತೆಗೆ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಅಮೃತ ಮಹೋತ್ಸವ ಹಾಗೂ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‌ನ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಅದರ ಅಂಗಸಂಸ್ಥೆಗಳ ಮೂಲಕ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ವಿಧ್ಯಾರ್ಥಿಗಳಿಗೆ ಸಮುದಾಯದೊಂದಿಗೆ ಮುಖಾಮುಖಿಯಾಗುವ ಅವಕಾಶವನ್ನೂ ಕಲ್ಪಿಸಲಾಗಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕಾರ್ಯಕ್ರಮದ ಸಂಯೋಜಕ, ಪ್ರಾಧ್ಯಾಪಕ ರಾಮಚಂದ್ರ ಅವರು ಮಾತನಾಡಿ, ಆದಿವಾಸಿ ಸಮುದಾಯಗಳಾದ ಕೊರಗ, ಮಲೆಕುಡಿಯ, ಮರಾಠಿ, ಮರಾಠಿ ನಾಯ್ಕ್, ಹಾಲಕ್ಕಿ, ಕುಣಬಿ, ಗೌಳಿಗ, ಬಾಮೊಕ್ಕಲು, ಹಸಲರು, ಗೊಂಡು ಮುಂತಾದ ಸಮುದಾಯಗಳ ಮೂಲಕ ಸಂಸ್ಕೃತಿ ಅನಾವರಣ ಮಾಡುವುದಲ್ಲದೇ, ಆಯಾ ಸಮುದಾಯಗಳು ವರ್ತಮಾನದಲ್ಲಿ ಅನುಭವಿಸುತ್ತಿರುವ ಸಂಕಷ್ಟಗಳನ್ನು ಅನುಸಂದಾನ ಮಾಡುವುದು ಕಾರ್ಯಕ್ರಮದ ಆಶಯ. ಈ ಹಿಂದೆಯೂ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಅನಾವರಕ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದು, ಉತ್ತಮ ಸ್ಪಂದನೆ ದೊರಕಿತ್ತು ಎಂದರು.

ಎರಡು ದಿನದ ಸಮ್ಮೇಳನ:
ಈ ಎರಡು ದಿನಗಳ ಸಮ್ಮೇಳನಕ್ಕೆ ಪದ್ಮಶ್ರೀ, ನಾಡೋಜ, ಶ್ರೀಮತಿ ಸುಕ್ರಿ ಬೊಮ್ಮ ಗೌಡ ಇವರು ಸಮ್ಮೇಳನಾಧ್ಯಕ್ಷರಾಗಿ ಆಗಮಿಸಲಿದ್ದಾರೆ. ಫೆ.26ರ ಸೋಮವಾರ ಬೆಳಿಗ್ಗೆ 9:30ಕ್ಕೆ ಬುಡಕಟ್ಟು ಸಮ್ಮೇಳನದ ಮೆರೆವಣಿಗೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ಕೆ. ಗೋಪಾಲ ಪೂಜಾರಿ ಅವರು ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ ೧೧ ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಡಾ. ಎಚ್.ಎಸ್.ಬಲ್ಲಾಳ್, ಸಹಕುಲಾಧಿಪತಿ, ಮಾಹೆ, ಮಣಿಪಾಲ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಡಾ.ಎಚ್. ಶಾಂತಾರಾಮ್, ಆಡಳಿತಾಧಿಕಾರಿಗಳು, ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇವರು ಅದ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಹಿ.ಚಿ.ಬೋರಲಿಂಗಯ್ಯ, ವಿಶ್ರಾಂತ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ ಮತ್ತು ಅತಿಥಿಗಳಾಗಿ ಶ್ರೀ ಹರೀಶಕುಮಾರ್, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ಇವರು ಆಗಮಿಸಲಿದ್ದಾರೆ.

ಮಧ್ಯಾಹ್ನ 12:30ಕ್ಕೆ “ಜಾನಪದ ಮತ್ತು ಬುಡಕಟ್ಟು ಸಮುದಾಯಗಳ ವಸ್ತು ಹಾಗೂ ಛಾಯಾಚಿತ್ರ ಪ್ರದರ್ಶನ”ವನ್ನು ರಾಕೇಶ್ ಮಲ್ಲಿ, ರಾಜ್ಯಾಧ್ಯಕ್ಷರು, ಇಂಟಕ್, ಕರ್ನಾಟಕ ಇವರು ಉದ್ಘಾಟಿಸಲಿದ್ದಾರೆ. ಮದ್ಯಾಹ್ನ 2:15ಕ್ಕೆ ಬುಡಕಟ್ಟುಗಳ ಅನನ್ಯತೆ ಅಭಿವೃದ್ಧಿ, ಸವಾಲುಗಳು ಮತ್ತು ಸಾಧ್ಯತೆಗಳು ಕುರಿತು ಡಾ.ಹಿ.ಚಿ.ಬೋರಲಿಂಗಯ್ಯ, ವಿಶ್ರಾಂತ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 3:30ಕ್ಕೆ ಕಲಾ ಪ್ರದರ್ಶನದ ಉದ್ಘಾಟನೆ ನಡೆಯಲಿದೆ. ಹಾಲಾಡಿ ಶ್ರೀನಿವಾಸ ಶೆಟ್ಟಿ. ಮಾಜಿ ಶಾಸಕರು ಕುಂದಾಪುರ ವಿಧಾನಸಭಾ ಕ್ಷೇತ್ರ ಅವರು ಉದ್ಘಾಟಿಸಲಿದ್ದಾರೆ. ಕಲಾ ಪ್ರದರ್ಶನದಲ್ಲಿ ವಿವಿಧ ಬುಡಕಟ್ಟು ಕಲಾ ತಂಡಗಳು ಭಾಗವಹಿಸಲಿವೆ. ರಾಮನಾಯ್ಕ ಮತ್ತು ಸಂಗಡಿಗರು, ಕುಡುಬಿ ಕೂಡುಕಟ್ಟು, ಯಡ್ತಾಡಿ, ಕೇಸಪುರ ಅವರಿಂದ ಕುಡುಬಿ ಹೊಳಿ ನೃತ್ಯ ಮತ್ತು ಕೋಲಾಟ, ಕೊರಗ ತನಿಯ ಯುವಕ ಕಲಾ ವೇದಿಕೆ ಮರವಂತೆ, ಕುಂದಾಪುರ ಇವರಿಂದ ಕೊರಗ ಸಾಂಸ್ಕೃತಿಕ ವೈಭವ, ಮಂಜು ಸಿದ್ಧಿ ಮತ್ತು ಬಳಗ, ಲಿಂಗದಬೈಲು ಬಳಗಾರ್, ಯಲ್ಲಾಪುರ ಇವರಿಂದ ಸಿದ್ಧಿಯರ ಡಮಾಮಿ ಮತ್ತು ಪಗಡೆ ನೃತ್ಯ, ಬಡಿಗೆರಾ, ಅಂಕೋಲ ಇಅವರಿಂದ ಹಾಲಕ್ಕಿಗಳ ತಾರಲೆ ಕುಣಿತ ನಡೆಯಲಿದೆ.

ಫೆ.27ರಂದು ಕರಾವಳಿ ಕರ್ನಾಟಕದ ಬುಡಕಟ್ಟುಗಳು ಮತ್ತು ವರ್ತಮಾನ ಕುರಿತು ಪ್ರಬಂಧ ಮಂಡನೆ ನಡೆಯಲಿದೆ. ಅಧ್ಯಕ್ಷತೆಯನ್ನು ಡಾ.ಗಂಗಾಧರ ದೈವಜ್ನ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಬುಡಕಟ್ಟು ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, ವಹಿಸಲಿದ್ದಾರೆ. ಕುಡುಬಿ ಕುರಿತು ಡಾ.ವೈ ರವೋಂದ್ರನಾಥ, ನಿವೃತ್ತ ಪ್ರಾಚಾರ್ಯರು, ಎಸ್.ಎಂ.ಎಸ್ ಕಾಲೇಜು, ಬ್ರಹ್ಮಾವರ, ಮಲೆಕುಡಿಯ ಕುರಿತು ಡಾ. ದುಗ್ಗಪ್ಪ ಕಜೇಕಾರು, ಮುಖ್ಯಸ್ಥರು, ಸ್ಮಾಜಕಾರ್ಯ ವಿಭಾಗ ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು, ಉಡುಪಿ, ಸಿದ್ಧಿ ಕುರಿತು ಶಾಂತಾರಾಮ್ ಸಿದ್ಧಿ, ಸಾಮಾಜಿಕ ಕಾರ್ಯಕರ್ತರು ಅಂಕೋಲ, ಕೊರಗ ಕುರಿತು ಶ್ರೀಮತಿ ಸುಶೀಲ ಕೊರಗ, ರಾಮನಗರ, ನಾಡ, ಕುಂದಾಪುರ, ಮರಾಠಿ ನಾಯ್ಕ್ ಕುರಿತು ರತಿ ಪ್ರಭಾಕರ್, ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗರಡಿ ಮಜಲು, ಕಾರ್ಕಳ ಇವರು ಪ್ರಬಂಧ ಮಂಡಿಸಲಿದ್ದಾರೆ.

ಸಮಯ 11:30 ರಿಂದ 1 ಗಂಟೆಯ ತನಕ ಆದಿವಾಸಿ ಪರಿಷತ್ತು ನಡೆಯಲಿದೆ. ಸಮನ್ವಯಕಾರರಾಗಿ ಜಯಪ್ರಕಾಶ ಹೆಗ್ಡೆ, ಮಾಜಿ ಸಂಸದರು, ಉಡುಪಿ ಲೋಕಸಭಾ ಕ್ಷೇತ್ರ ಇವರು ಭಾಗವಹಿಸಲಿದ್ದಾರೆ. ಡಿಯಾಗೊ ಸಿದ್ಧಿ, ಸಾಮಾಜಿಕ ಕರ್ಯಕರ್ತರು, ಬಸ್ತಿಕಟ್ಟೆ, ಹಳಯಾಳ, ಡಾ.ಶ್ರೀಧರ ಗೌಡ, ಪ್ರಾಧ್ಯಾಪಕರು, ಉಪ್ಪಿನಗಣಪತಿ, ಕುಮಟಾ, ಡಾ. ಕುಮುದ, ಸಹಾಯಕ ಅಭಿಯಂತರರು, ಜೋಗ್, ಡಾ.ಜಿ.ಎಂ.ಗೊಂಡ, ಪ್ರಾಚಾರ್ಯರು, ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜು, ಕುಂದಾಪುರ, ಮಂಜುನಾಥ ಗೊಂಡ, ವಕೀಲರು ಭಟ್ಕಳ, ರಮಾನಾಥ ಮರಾಠಿ, ಗುತ್ತಿಗೆದಾರರು, ಕಾರ್ಕಳ, ಶ್ರೀ ರಾಮಚಂದ್ರ, ಸಹ ಪ್ರಾಧ್ಯಾಪಕರು, ಸಮಾಜಶಾಸ್ತ್ರ ವಿಭಾಗ, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ, ಡಾ.ಶುಭಕರಾಚಾರಿ, ಸಹ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಭಂಡಾರ್ಕಾರ್ಸ್ ಕಾಲೇಜು ಮತ್ತು ವಿವಿಧ ಬುಡಕಟ್ಟು ಸಮುದಾಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 2:30ಕ್ಕೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ.ಎಚ್. ಶಾಂತಾರಾಮ್, ಆಡಳಿತಾಧಿಕಾರಿಗಳು, ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇವರು ವಹಿಸಲಿದ್ದಾರೆ. ಡಾ. ವಿನಯ್ ರಜತ್, ಮುಖ್ಯಸ್ಥರು, ಸಮಾಜಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ ಇವರು ಸಮಾರೋಪ ಭಾಷಣ ಮಡಲಿದ್ದಾರೆ. ಡಾ.ವಿರೇಶ್ ಬಡಿಗೇರ್, ಪ್ರಾಧ್ಯಾಪಕರು, ಹಸ್ತಪ್ರತಿ ವಿಭಾಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ತಿಕೇಯ ಮಧ್ಯಸ್ಥ, ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ ಇಅವರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಎನ್. ಪಿ. ನಾರಾಯಣ ಶೆಟ್ಟಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ಎಂ ಗೊಂಡ, ಕಾರ್ಯಕ್ರಮ ಸಂಯೋಜಕರಾದ ಡಾ. ಶುಭಕರಾಚಾರಿ, ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಸುಮಲತಾ ಉಪಸ್ಥಿತರಿದ್ದರು.

Exit mobile version